ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 60 ನೆಯ  ಶಿವೋಪಶಮನ ಕಾರ್ಯ

Raichur ಗಬ್ಬೂರು : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಸೆಪ್ಟೆಂಬರ್ 03 ರ ಆದಿತ್ಯವಾರದಂದು 60 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.ಪೀಠಾಧ್ಯಕ್ಷರು  ಈದಿನ ಬೇರೊಂದು ಅನಿವಾರ್ಯ ಕಾರ್ಯಕ್ರಮದಲ್ಲಿ  ಪಾಲ್ಗೊಳ್ಳಲು  ತೆರಳಬೇಕಿದ್ದರಿಂದ ಶಿವೋಪಶಮನ ಕಾರ್ಯಕ್ರಮ ಸಂಚಾಲಕ ಮೃತ್ಯುಂಜಯ ಯಾದವ್ ಅವರಿಗೆ ದೂರದ ಊರುಗಳಿಂದ ಬರುವ ಭಕ್ತರುಗಳಿಗೆ ಮುಂದಿನವಾರ ಬರುವಂತೆ ಸಲಹೆ ನೀಡಲು ತಿಳಿಸಿದ್ದರಿಂದ ಈದಿನದ ಶಿವೋಪಶಮನ ಕಾರ್ಯದಲ್ಲಿ ಗಬ್ಬೂರು ಹಾಗೂ ಸುತ್ತಮುತ್ತಣ ಗ್ರಾಮಗಳ ಭಕ್ತರುಗಳಿಗಷ್ಟೇ ಶಿವೋಪಶಮನ ಕರುಣಿಸಲಾಯಿತು.
ಪರಶಿವನು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಪ್ರಕಟಗೊಂಡು ತನ್ನ ಜಗದೋದ್ಧಾರದ ಲೀಲೆಯನ್ನು ನಟಿಸುತ್ತಿರುವುದರಿಂದ ನಿಜನಿಷ್ಠೆಯಿಂದ ಮಹಾಶೈವ ಧರ್ಮಪೀಠವನ್ನು ನಂಬಿ ಬರುವ ಭಕ್ತರ ಸಂಕಷ್ಟಗಳೆಲ್ಲ ಕರಗಿ ಸರ್ವ ಇಷ್ಟಾರ್ಥಗಳು ಸಿದ್ಧಿಸುತ್ತಿರುವುದರಿಂದ ಮಹಾಶೈವ ಧರ್ಮಪೀಠವು ‘ ಧರೆಗಿಳಿದ ಕೈಲಾಸ’ ‘ ಧರೆಯ ಮೇಲಿನ ಕೈಲಾಸ’ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
        ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹಸಮಿತಿಯ ಮುಖ್ಯಸ್ಥ ಗುರುಬಸವ ಹುರಕಡ್ಲಿ,ಶರಣಗೌಡ ಹೊನ್ನಟಗಿ,ಸಿದ್ರಾಮಯ್ಯಸ್ವಾಮಿ ಹಳ್ಳಿ,ಉಮೇಶ ಸಾಹುಕಾರ ಅರಷಣಗಿ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ವೀರೇಶ ಯಾದವ,ಪತ್ರಕರ್ತ ಏಳುಬಾವೆಪ್ಪಗೌಡ, ಯಲ್ಲಪ್ಪ ಕರಿಗಾರ,  ಮಲ್ಲಿಕಾರ್ಜುನ ಮೇಟಿಗೌಡರ,ಶಿವಾನಂದ ಹಿಂದುಪುರ,ಮನೋಜಕುಮಾರ,ರಮೇಶ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author