ಯಶಸ್ವಿಯಾಗಿ ಜರುಗಿದ 15 ನೇ ವರ್ಷದ ಮಹಿಳಾ ಮಹೋತ್ಸವ : ಮಹಿಳೆಯರನ್ನು ಮುಖ್ಯ ವೇದಿಕೆಯಲ್ಲಿ ತರುತ್ತಿರುವ ಸಂಸ್ಥಾನ ಗದ್ದುಗೆ ಕಾರ್ಯ ಶ್ಲಾಘನೀಯ: ಭಾರತಿ ದರ್ಶನಾಪುರ

ಶಹಾಪುರ:ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶ್ರೀ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಆಯೋಜಿಸಿದ 12 ನೇ ವರ್ಷದ ಮಹಿಳಾ ಮಹೋತ್ಸವ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಶಹಾಪುರದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಸಾಂಸ್ಕೃತಿಕ ಭವನದಲ್ಲಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಧರ್ಮ ಪತ್ನಿ ಶ್ರೀಮತಿ ಭಾರತಿ ಎಸ್ ದರ್ಶನಾಪುರ ಅವರು ಸಸಿಗೆ ನೀರು ಹಾಕುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ 15 ವರ್ಷಗಳಿಂದ ಸೇವಾ ಸಮಿತಿಯು ಮಹಿಳೆಯರಿಗೆ ಆದ್ಯತೆ ನೀಡಿ ಗೌರವಿಸಿದೆ. ಹೆಣ್ಣು ಮಕ್ಕಳಿಗೂ ಉಡಿ ತುಂಬಿ ಆತ್ಮ ಸ್ಥೈರ್ಯ ತುಂಬುತ್ತಿರುವ ಸೇವಾ ಸಮಿತಿ ಗದ್ದುಗೆ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
  ಪೂಜ್ಯ ಶ್ರೀ ಚೆನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಗದ್ದುಗೆಯ ಪೂಜ್ಯ ಬಸವಯ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ನೇತ್ರತ್ವವನ್ನು ಸಮಿತಿ ಅದ್ಯಕ್ಷರಾದ ಶರಣು ಬಿ ಗದ್ದುಗೆ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ  ಶೀಲವಂತಯ್ಯ ಗದ್ದುಗೆ,ಅ ಭಾ ವೀ ಮ ಸಭಾ ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಮಹೇಶ್ ಆನೆಗುಂದಿ,ಉದ್ಯಮಿ ಮಹೇಶ್ ಅವಂಟಿ ಸಪ್ತಗಿರಿ, ಶ್ರೀಮತಿ ಬಸ್ಸಮ್ಮ ಗೌಡತಿ ಇದ್ದರು.
ವೀರಭದ್ರ ನಾಟ್ಯ ಸೌರಭ ಕಲಾವಿದರಿಂದ ನೃತ್ಯ ಸಂಗೀತ ಕಾರ್ಯಕ್ರಮ ಜರುಗಿತು. ನೀಲಪ್ಪ ಚೌದ್ರಿ,ಬಸವರಾಜ ಹೈಯ್ಯಾಳ,ಹಾಡುಗಳು ಹಾಡಿ ರಂಜಿಸಿದರು.ಸುನೀಲ್ ಶಿರಣಿ ನಿರೂಪಣೆಗೈದರು. .ಬಾಲು ಆರ್ ಕೆ ವತಿಯಿಂದ ಸಂಗೀತ ಕಾರ್ಯಕ್ರಮ ಜರುಗಿತು. ನೂರಾರು ಮಹಿಳೆಯರು ಭಾಗವಹಿಸಿದ್ದರು. ದರ್ಶನಾಪುರ ಅವರು ಪ್ತಸಾದ ವ್ಯವಸ್ಥೆ ಮಾಡಿದ್ದರು.ಸಾಂಸ್ಕೃತಿಕ ಕಾರ್ಯಕ್ರಮ ಸಹಾಯಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿತ್ತು

About The Author