ಮೂರನೇ ಕಣ್ಣು : ಗಬ್ಬೂರಿನ ರಾಜ್ಯ ಸಂರಕ್ಷಿತ ಸ್ಮಾರಕಗಳು : ಮುಕ್ಕಣ್ಣ ಕರಿಗಾರ

ಭಾರತೀಯ ಪುರಾತತ್ವ ಇಲಾಖೆ (Archaeological Survey of India)ಯು ಪ್ರಾಚೀನ ಸ್ಮಾರಕಗಳನ್ನು ಅವುಗಳ ಐತಿಹಾಸಿಕ ಮಹತ್ವಕ್ಕನುಗುಣವಾಗಿ ೧ ರಾಷ್ಟ್ರೀಯ ಮಹತ್ವದ ಪುರಾತತ್ವ ಸ್ಮಾರಕಗಳು ಮತ್ತು

೨.ರಾಜ್ಯಸಂರಕ್ಷಿತ ಸ್ಮಾರಕಗಳು( State Protected Monuments) ಎನ್ನುವ ಎರಡು ವಿಭಾಗಗಳಲ್ಲಿ ವಿಂಗಡಿಸಿದ್ದು ರಾಷ್ಟ್ರೀಯ ಮಹತ್ವದ ಸ್ಮಾರಕಗಳು ಒಟ್ಟು 3684 ಇದ್ದು ಅವುಗಳಲ್ಲಿ ಕರ್ನಾಟಕದ ರಾಷ್ಟ್ರೀಯ ಮಹತ್ವದ ಸ್ಮಾರಕಗಳು 506 ಇರುತ್ತವೆ.ಕರ್ನಾಟಕ ರಾಜ್ಯವು ನಿರ್ವಹಿಸುತ್ತಿರುವ ರಾಜ್ಯಸಂರಕ್ಷಿತಸ್ಮಾರಕಗಳು( State protected Monuments) 747 ಇದ್ದು ಅದರಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ 11 ಸ್ಮಾರಕಗಳು ಸೇರಿವೆ.ಗಬ್ಬೂರಿನ ಕೆಲವು ಸ್ಮಾರಕಗಳನ್ನು ‘ ಹಿಂದು ದೇವಸ್ಥಾನ’ ಎಂದು ಮಾತ್ರ ಗುರುತಿಸಿರುವುದರಿಂದ ಅವುಗಳ ಬಗ್ಗೆ ಅಧ್ಯಯನ ಕೈಗೊಳ್ಳಬೇಕಿದೆ.ಈ ಹಿಂದಿನ ಎರಡು ಲೇಖನಗಳಲ್ಲಿ ನಾನು ವಿವರಿಸಿದ ದೇವಸ್ಥಾನಗಳೆಲ್ಲವೂ ಸ್ಪಷ್ಟವಾಗಿ ಗುರುತಿಸಲ್ಪಟ್ಟಿದ್ದು ಅವುಗಳ ವಿವರಗಳು ಈ ಕೆಳಗಿನಂತಿವೆ ;
01.S-KA 640- ಬಂಗಾರ ಬಸ್ಸಪ್ಪನ ಗುಡಿ
02. S-KA 641-ವಿಶ್ವೇಶ್ವರ ದೇವಸ್ಥಾನ
03.S-KA 643- ಹಿಂದು ದೇವಸ್ಥಾನ
04.S- KA 644 ಈಶ್ವರ ದೇವಸ್ಥಾನ,ಗಾಂಜಿಗುಡಿ ಮಠ
05.S-KA 645 ವೆಂಕಟೇಶ್ವರ ದೇವಸ್ಥಾನ
06.S-KA 645 ಚಾವಡಿದ್ವಾರದ ಹನುಮಾನ್ ಮಂದಿರ( ಜಾಮಿಯಾ ಮಸೀದಿ ಪಕ್ಕದಲ್ಲಿ)
07.S-KA 646 ಮೇಲುಶಂಕರ ದೇವಸ್ಥಾನ.

ಇವುಗಳ ಜೊತೆಗೆ S-KA 596, S-KA 616,S-KA 621, S-KA 631,S-KA 632,S-KA 635ಮತ್ತು S-KA 637 ದೇವಸ್ಥಾನ,ಸ್ಮಾರಕಗಳು ಸಹ ಗಬ್ಬೂರಿಗೆ ಸಂಬಂಧಿಸಿದ್ದು ಅವುಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಬೇಕಿದೆ.

About The Author