ಕಲ್ಯಾಣ ಕರ್ನಾಟಕದ ರೂವಾರಿ ಧೀಮಂತ ನಾಯಕನಿಗೆ 81ರ ಹುಟ್ಟು ಹಬ್ಬದ ಸಂಭ್ರಮ ನಿಮಿತ್ತ ಈ ಲೇಖನ

ಬಸವರಾಜ ಕರೇಗಾರ
 
ವಡಿಗೇರಾ : ಕಲ್ಯಾಣ ಕರ್ನಾಟಕದ ಜನನಾಯಕ 371ನೇ ಜೀ ಕಲವಾರಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ 81ನೇ ಜನ್ಮ ದಿನಾಚರಣೆ ನಿಮಿತ್ತ ಇಂದು ದೇಶಾದ್ಯಂತ ಸಡಗರದಿಂದ ಆಚರಿಸಲಾಗುತ್ತಿದೆ. ಬಡ ರೋಗಿಗಳಿಗೆ ಆಸ್ಪತ್ರೆಯಲ್ಲಿ ಹಣ್ಣು ಹಂಪಲಗಳನ್ನು ನೀಡಲಾಯಿತು. ಸಂವಿಧಾನದ ಶಿಲ್ಪಿ ಭಾರತರತ್ನ ಬಿ ಆರ್ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದುಳಿದ ಶೋಷಿತವರ್ಗದ ಜನನಾಯಕರು.
ಸಂವಿಧಾನದಂತೆ ನಡೆದ ನಾಯಕರು. ಅವರು ಯಾವತ್ತೂ ಒಂದೇ ಜನಾಂಗಕ್ಕೆ ಸೀಮಿತವಾಗಲಿಲ್ಲ. ಆದರೆ ಕೆಲವರು ಒಂದೇ ಜನಾಂಗಕ್ಕೆ ಸೀಮಿತ ಮಾಡಿಕೊಂಡಿರುವುದು ದುರದೃಷ್ಟಕರ. ಮನೆ ಬೇಟೆಗೆ ಹೋದಾಗ ಎಲ್ಲರನ್ನೂ ಸೌಹಾರ್ದತೆಯಿಂದ ಮಾತನಾಡಿಸಿ ಯೋಗ ಕ್ಷೇಮವನ್ನು ವಿಚಾರಿಸಿ ಅವರ ಕೆಲಸಗಳನ್ನು ಸ್ಥಳದಲ್ಲಿ ನಿವಾರಿಸಿ ಪರಿಹರಿಸುತ್ತಿದ್ದರು. ಆದರೆ ನೀವು ಯಾರು ಎಂದು ಎಂದೂ ಕೇಳಲಿಲ್ಲ.
ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಪಕ್ಕದಲ್ಲಿದ್ದರೆ ಮಾತ್ರ ಗೊತ್ತಾಗುತ್ತದೆ. ದೂರದಿಂದ ಅಳೆಯಲು ಸಾಧ್ಯವಿಲ್ಲ. ಸಂವಿಧಾನದಂತೆ ದೇಶದಲ್ಲಿ ಆಡಳಿತ ನಡೆಸುವ ಪಕ್ಷವೆಂದಿದ್ದರೆ ಅದು ಕಾಂಗ್ರೆಸ್ ಪಕ್ಷ. ಅದಕ್ಕಾಗಿ ಯಾವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಿಡಲಿಲ್ಲ. 81 ವರ್ಷವಾಯಿತು. ಇಂದಿನವರೆಗೂ ಅವರು ತಮ್ಮ ಸಿದ್ಧಾಂತದಲ್ಲಿ ಯಾವುದೇ ಬದಲಾವಣೆ ಕಂಡವರಲ್ಲ. ಪಕ್ಷಕ್ಕೆ ಯಾವತ್ತೂ ಚಿರಋಣಿ. ನಾನು ಪಕ್ಷಕ್ಕಾಗಿ ದುಡಿದಿದ್ದೇನೆ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರು ನಿಭಾಯಿಸುತ್ತೇನೆ ಎಂದರು. ಇಂದು ಕಾಂಗ್ರೆಸ್ ಪಕ್ಷದ ಉನ್ನತ ಸ್ಥಾನ ಎಐಸಿಸಿ ಅಧ್ಯಕ್ಷರಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಯಾಗುವ ಸಂದರ್ಭಗಳು ಹಲವು ಬಾರಿ ಬಂದರು ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿ ತ್ಯಾಗ ಮಾಡಿದವರು. ಕಲ್ಯಾಣ ಕರ್ನಾಟಕದ 371j ಜಾರಿಗೆ ತಂದರು. ಇದರಿಂದಾಗಿ ಇಲ್ಲಿನ ವಿದ್ಯಾವಂತರಿಗೆ ನಿರುದ್ಯೋಗಿಗಳಿಗೆ ವೈದ್ಯಕೀಯ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹಲವು ಹುದ್ದೆಗಳು ದೊರಕಿವೆ. ಇಂತಹ ಒಬ್ಬ ಧೀಮಂತ ನಾಯಕನಿಗೆ ಆಯುರಾರೋಗ್ಯ ದೊರಕಲಿ ಎಂದು ಆಶಿಸೋಣ.

About The Author