ಶಿರವಾಳ ಮೊಹರಂ ಶಾಂತಿ ಸಭೆ

ಶಹಪುರ : ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಮೊಹರಂ ಹಬ್ಬ ಶಾಂತಿಯುತವಾಗಿ ಆಚರಿಸಬೇಕು ಹಾಗೂ ಅಹಿತಕರ ಘಟನೆಗಳು ಜರುಗುದಂತೆ ಎಚ್ಚರಿಕೆ ವಹಿಸಬೇಕು ಎಂದು ಶಹಪುರ ಗ್ರಾಮೀಣ ಸಿಪಿಐ ವಿಜಯಕುಮಾರ ಬಿರಾದರ ಹೇಳಿದರು,
ತಾಲೂಕಿನ ಶಿರವಾಳ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಶಾಂತಿ ಸಭೆ ನಡೆಸಿ ಮಾತನಾಡಿದರು.ಗ್ರಾಮದ ಹಿರಿಯ ಮುಖಂಡರಾದ ಮರಿಯಪ್ಪ ಪ್ಯಾಟಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಮೊಹರಂ ಹಬ್ಬ ಒಂದು ಐತಿಹಾಸಿಕ ಹಬ್ಬವಾಗಿದ್ದು ಇದರಲ್ಲಿ ಸರ್ವಧರ್ಮದವರು ಪಾಲ್ಗೊಂಡು ಯಶಸ್ವಿಗೆ ಶ್ರಮಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ,ಭೀಮರಾಯನಗುಡಿ ಪೊಲೀಸ್ ಠಾಣೆಯ ಪಿಎಸ್ಐ ಗಜಾನನ ಬಿರಾದರ,ಮಲ್ಲಿಕಾರ್ಜುನ್ ಯಾದಗಿರಿ,ರಾಜ್ ಅಹಮದ್,ಮಂಜು ಸಗರ ಹಾಗೂ  ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ಗ್ರಾಮದ  ಹಿರಿಯ ಮುಖಂಡರು ಜೊತೆಗೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *