ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 53 ನೆಯ ‘ ಶಿವೋಪಶಮನ ಕಾರ್ಯ’

ರಾಯಚೂರು : ಸತ್ಯಶಿವನ ನಿತ್ಯಲೀಲಾಕ್ಷೇತ್ರವಾದ ಮಹಾಶೈವ ಧರ್ಮಪೀಠದಲ್ಲಿ ಜುಲೈ 09 ರ ರವಿವಾರದಂದು 53 ನೆಯ ‘ಶಿವೋಪಶಮನ ಕಾರ್ಯ’ ನಡೆಯಿತು.ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರನ ಸನ್ನಿಧಿಯನ್ನರಸಿ ರಾಜ್ಯದ ವಿವಿಧೆಡೆಗಳಿಂದ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಭಕ್ತರಸಂಖ್ಯೆಯ ಜನರಿಗೆ ಮಹಾಶೈವ ಧರ್ಮಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ಗಾಯತ್ರಿ ತಪೋನುಷ್ಠಾನ ನಿರತರಾಗಿರುವ ಮಾನ್ವಿ ತಾಲೂಕಿನ ಬಾಗಲವಾಡದ ಬಳ್ಳಾರಿ ತಾತ ಎಂದೇ ಪ್ರಸಿದ್ಧರಾಗಿರುವ ಶಿವಯ್ಯಸ್ವಾಮಿಗಳು ಇಂದಿನ ಶಿವೋಪಶಮನ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರೊಂದಿಗೆ ಸುಮಾರು ಒಂದು ಘಂಟೆಯವರೆಗೆ ಕುಳಿತು ಪೀಠಾಧ್ಯಕ್ಷರ ಮೂಲಕ ವಿಶ್ವೇಶ್ವರ ಶಿವನ ಶಕ್ತಿಯ ತರಂಗಗಳು ಭಕ್ತರ ಮೈಮನಗಳನ್ನು ತಾಕಿ ಅವರ ಸಂಕಷ್ಟಗಳನ್ನು ಪರಿಹರಿಸುತ್ತಿರುವ ಅನಿರ್ವಚನೀಯ ದಿವ್ಯೋನ್ಮಾದದ ಕ್ಷಣಗಳನ್ನು ಅವರು ಕಣ್ತುಂಬಿಕೊಂಡರು. ಕಳೆದ ಎರಡು ವರ್ಷಗಳಿಂದ ಮಂಡಿನೋವಿನಿಂದ ಬಳಲುತ್ತಿದ್ದ ತಾವು ಶ್ರೀಕ್ಷೇತ್ರ ಕೈಲಾಸದ ಆವರಣವನ್ನು ಪ್ರವೇಶಿಸುತ್ತಿದ್ದಂತೆಯೇ ಯಾವುದೋ ಅವ್ಯಕ್ತ ದಿವ್ಯ ಆನಂದವನ್ನು ಅನುಭವಿಸಿದ್ದಲ್ಲದೆ ಆಶ್ಚರ್ಯಕರವಾಗಿ ಮಂಡಿನೋವು ಪರಿಹಾರವಾಗಿ ನೆಲದ ಮೇಲೆ ಆಸೀನರಾಗುವಂತಹ ಪವಾಡಪ್ರಸಂಗ ಒಂದಕ್ಕೆ ಸ್ವಯಂಸಾಕ್ಷಿಯಾದುದನ್ನು ಭಕ್ತರೊಂದಿಗೆ ಹಂಚಿಕೊಂಡರು. ಹಾಗೂ ಮಾತುಕಳೆದುಕೊಂಡಿದ್ದ ವಿಜಯಪುರದ ಶಿವಾಬಾಯಿ ಎನ್ನುವ ಮಹಿಳೆಯು 51ನೆಯ ಶಿವೋಪಶಮನಕ್ಕೆ ಹಾಜರಾಗಿ ಶಿವಾನುಗ್ರಹದಿಂದ ಮಾತನಾಡುತ್ತಿರುವುದನ್ನು ಕಂಡು ಆಕೆ ಮತ್ತು ಆಕೆಯ ಮಗನನ್ನು ಮಾತನಾಡಿಸಿ,ವಿಷಯ ತಿಳಿದುಕೊಂಡು ವಿಶ್ವೇಶ್ವರ ಶಿವನ ಮಹಿಮೆಗೆ ಭಕ್ತಿಪೂರ್ವಕ ಶರಣುಗಳನ್ನು ಸಮರ್ಪಿಸಿದರು. ಹೈದರಾಬಾದನಿಂದ ಐದಾರು ಜನ ಪ್ರೊಫೆಸರ್ಗಳು ಶಿವಕಾರುಣ್ಯವನ್ನರಸಿ ಬಂದಿದ್ದರು.

ಕಲ್ಬುರ್ಗಿಯ ಜಗದೀಶರಾವ್ ಮತ್ತು ಶಹಾಪುರದ ಮಲ್ಲಯ್ಯ ಹಿರೇಮಠ ಅವರಿಬ್ಬರು ಶ್ರೀಕ್ಷೇತ್ರ ಕೈಲಾಸದ ಮಹಾಕಾಳಿದೇವಿಯ ಅನುಗ್ರಹದಿಂದ ಪ್ರಾರಂಭಿಸಿದ ಸೌರಶಕ್ತಿ ಉಪಕರಣಗಳ ಮಾರಾಟಕೇಂದ್ರವು ಯಶಸ್ವಿಯಾಗಿ ನಡೆಯುತ್ತಿರುವುದರಿಂದ ಮಹಾಕಾಳಿಯ ಸನ್ನಿಧಿಯಲ್ಲಿ ಸೋಲಾರ ವಿದ್ಯುತ್ ದೀಪವನ್ನು ಅಳವಡಿಸಿ,ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಗುರುಬಸವ ಹುರಕಡ್ಲಿ,ಶರಣಗೌಡ ಹೊನ್ನಟಗಿ,ಶರಣಪ್ಪ ಚಿತ್ರಕಲಾವಿದ ಬೂದಿನಾಳ,ಅಯ್ಯಾಳಪ್ಪ,ತಾತಪ್ಪ, ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಉಮೇಶ ಸಾಹುಕಾರ ಅರಷಣಗಿ,ಯಲ್ಲಪ್ಪ ಕರಿಗಾರ,ಆನಂದ,ಬಾಗಲವಾಡದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮಲ್ಲಿಕಾರ್ಜುನ ಬಾಗಲವಾಡ,ಬೊಮ್ಮನಾಳ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾರೂ ಶಕ್ತಿ ಉಪಾಸಕರೂ ಆಗಿರುವ ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾಗಿರುವ ಉದಯಕುಮಾರ ಪಂಚಾಳ, ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು ಪಾಲ್ಗೊಂಡಿದ್ದರು.

About The Author