ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಕೈಲಾಸದಲ್ಲಿ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ರಚಿಸಿರುವ ಸಂವಿಧಾನದ ಪೀಠಿಕೆ ಕೃತಿಯನ್ನು ಭಾನುವಾರ ಬೆಳಿಗ್ಗೆ 10ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

ಕಾರ್ಯಕ್ರಮದ ಸಾನಿಧ್ಯ ಮತ್ತು ಅಧ್ಯಕ್ಷತೆಯನ್ನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರೆಗಾರ ಅವರು ವಹಿಸಿಕೊಳ್ಳಲಿದ್ದು,
ಶರಣಪ್ಪ ಶರಣರು ಗಂಗಾಧರ ಶಾಂತಾಶ್ರಮ ಮಠದ ಅಧ್ಯಕ್ಷರು, ರಘುನಾಥ ರೆಡ್ಡಿ ಪ್ರಜಾಪ್ರಸಿದ್ಧಿ ದಿನಪತ್ರಿಕೆ ಉಪಸಂಪಾದಕರು, ಸಿದ್ಧನಗೌಡ ಮಾಲಿಪಾಟೀಲ್ ಮನ್ಸಲಾಪುರ, ಬಸವರಾಜ ಸಿನ್ನೂರ, ಬಸವರಾಜ ಭೋಗಾವತಿ ಸೇರಿದಂತೆ
ಕರ್ನಾಟಕ ರಾಜ್ಯ ಪ್ರಜಾಪ್ರತಿ ನಿಧಿಗಳ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕರು,ಮಂಡಳಿಯವರು,ಮಹಾಶೈವ ಧರ್ಮಪೀಠದ ಭಕ್ತವೃಂದ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.