ಮಹಾಶೈವ ಧರ್ಮಪೀಠದ ಶುಭಕೃತ್ ಸಂವತ್ಸರದ ಕಾಲಜ್ಞಾನದಲ್ಲಿ ಹೊರಹೊಮ್ಮಿತ್ತು ಈಶ್ವರಪ್ಪನವರ ರಾಜೀನಾಮೆ ಪ್ರಸಂಗ

 ಎಪ್ರಿಲ್ 02 ರ ಶುಭಕೃತ್ ಸಂವತ್ಸರದ ಯುಗಾದಿಯಂದು ಮಹಾಶೈವ ಧರ್ಮಪೀಠದ ನುಡಿಕಾರಣಿಕದಲ್ಲಿ ರಾಜ್ಯ- ರಾಷ್ಟ್ರದಲ್ಲಿ ಘಟಿಸಲಿರುವ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಂದೇಶಹೊರಹೊಮ್ಮಿತ್ತು.ಕೆ ಎಸ್ ಈಶ್ವರಪ್ಪನವರು ರಾಜೀನಾಮೆ ನೀಡುವ ಮುನ್ಸೂಚನೆಯೂ ಮಹಾಶೈವ ಧರ್ಮಪೀಠದ ಶುಭಕೃತ್ ಸಂವತ್ಸರದ ಕಾರಣಿಕ ನುಡಿಯಲ್ಲಿತ್ತು.ಕಾರಣಿಕ ನುಡಿಯ ಉತ್ತರಭಾಗದಲ್ಲಿ ರಾಜಕೀಯ ವಿಶ್ಲೇಷಣೆ ಇದ್ದು ಅದು ಹೀಗಿದೆ–“ತಂಟೆ ತಕರಾರುಗಳುಂಟು ರಾಜಕಾರಣದಿ.ಹಾವು ಮುಂಗುಸಿಗಳಂತೆ ಹಗೆಸಾಧಿಸುವರು,ವಿಪ್ಲವಗಳೇಳುವವು…ತಲೆಯಾಳುಗಳುದುರುವವು”
    ಕೆ ಎಸ್ ಈಶ್ವರಪ್ಪನವರ ರಾಜೀನಾಮೆ ಪ್ರಕರಣದ ವಿದ್ಯಮಾನಗಳನ್ನು ಗಮನಿಸಿದಾಗ ಮೇಲಿನ ನುಡಿಗಳ ಅರ್ಥ ಮನದಟ್ಟಾಗುತ್ತದೆ.” ತಲೆಯಾಳುಗಳುದುರುವವು” ಎನ್ನುವ ಕಾರಣಿಕ ನುಡಿ ಹಿರಿಯ ರಾಜಕಾರಣಿಗಳೇನಕರು ಅಧಿಕಾರ ಕಳೆದುಕೊಳ್ಳುವ,ಸಾವನ್ನಪ್ಪುವ ಸೂಚನೆಯಾಗಿದ್ದು ಬಿಜೆಪಿಯ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಅವರು ಅಧಿಕಾರ ಕಳೆದುಕೊಂಡಿದ್ದಾರೆ.ತಲೆಯಾಳುಗಳುಗಳು ಎಂದರೆ ಹಿರಿಯನಾಯಕರು ಎಂದರ್ಥ.ಈ ವರ್ಷದಲ್ಲಿ ರಾಜ್ಯ ರಾಷ್ಟ್ರದ ಹಿರಿಯ ನಾಯಕರುಗಳು ಹಲವರು ಕಾಲವಾಗಲಿದ್ದಾರೆ.ಮಹಾಶೈವ ಧರ್ಮಪೀಠದ ಕಾರಣಿಕದಂತೆ ಬಿಜೆಪಿಯ ಹಿರಿಯನಾಯಕ ಕೆ ಎಸ್ ಈಶ್ವರಪ್ಪನವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

About The Author