ಜಾತೀಯತೆಯನ್ನು ಮೀರಿ ಬೆಳೆದ ನಾಯಕ ಪ್ರಿಯಾಂಕ್ ಖರ್ಗೆ

ಬಸವರಾಜ ಕರೆಗಾರ
 
ಯಾದಗಿರಿ : ಪ್ರಸ್ತುತ ದಿನಮಾನಗಳಲ್ಲಿ ದೇಶ ಮತ್ತು ರಾಜ್ಯಗಳಲ್ಲಿ ಜಾತೀಯತೆ ಮಿತಿಮೀರುತ್ತಿದೆ. ಎಲ್ಲರೂ ತಮ್ಮ ತಮ್ಮ ನಾಯಕರನ್ನು ಜಾತಿಯತೆಯಿಂದಲೇ ಗುರುತಿಸುತ್ತಾರೆ. ನಮ್ಮ ಜಾತಿಯಲ್ಲಿ ಇಷ್ಟು ಮತಗಳಿವೆ ಇವರೆ ನಮ್ಮ ನಾಯಕರು. ಲಿಂಗಾಯತರು ಒಕ್ಕಲಿಗರು ಪಂಚಮಶಾಲಿಗಳು ಕುರುಬರು ದಲಿತರು ನಾಯಕರು ಹೀಗೆ ಹಲವಾರು ಜಾತಿಗಳಿಂದಲೇ ನಾಯಕರನ್ನು ಗುರುತಿಸಿಕೊಳ್ಳುವ ಕಾಲ ಬಂದಿದೆ. ಇದು ಅತ್ಯಂತ ದುರದೃಷ್ಟಕರ ಎನ್ನಬಹುದು. ಇದೆಲ್ಲವನ್ನು ಮೀರಿ ಬೆಳೆದ ನಾಯಕರೆಂದರೆ ಪ್ರಿಯಾಂಕ ಖರ್ಗೆ ಎಂದು ಹೇಳಬಹುದು.
ಇಂದಿನವರೆಗೂ ಪ್ರಿಯಾಂಕ್ ಖರ್ಗೆ ದಲಿತನಾಕರೆನ್ನುವವರೆ ಹೆಚ್ಚು.ಇದು ಸಾಧ್ಯವೇ ಸತ್ಯಕ್ಕೆ ದೂರವಾದ ಮಾತು. ಎಲ್ಲರೂ ನಮ್ಮವರೇ ಬಡವರು ಶೋಷಿತರೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಶೋಷಿತರು ಬಡವರು ಮುಖ್ಯವಾಹಿನಿಗೆ ಬರಬೇಕು. ಉನ್ನತ ಶಿಕ್ಷಣ ಪಡೆಯಬೇಕು ಎಂದು ತಮ್ಮ ಅವಧಿಯಲ್ಲಿ ಶೋಷಿತರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ಶ್ರಮಿಸುತ್ತಿರುವ ಧಿಮಂತ ನಾಯಕ.ತಂದೆಗೆ ತಕ್ಕ ಮಗ. ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿಗೆ ಸಹಾಯ ಕೇಳಿ ಬಂದವರಿಗೆ ಎಂದು ಕೂಡ  ಜಾತಿಯತೆಯಿಂದ ಗುರುತಿಸಲಿಲ್ಲ ನೀನಾರೆಂದೂ ಕೇಳಿದವರಲ್ಲ. ತಮಗೆನು ಬೇಕು ಎಂದು ಕೇಳಿ ಸಮಸ್ಯೆಗಳನ್ನು ಪರಿಹರಿಸಿದವರು. ಜನರಿಗೆ ಬೇಕಾದ ಹಲವು ರೀತಿಯ ಸಹಾಯ ಮಾಡಿಕೊಟ್ಟವರು. ಅಂತಹವರ ಮಗ ಪ್ರಿಯಾಂಕ ಖರ್ಗೆ ಕೂಡ ನೇರವಾದಿ ನಿಷ್ಟುರವಾದಿ ಎನ್ನುವ ಹಾಗೆ ತಮ್ಮಗನಿಸಿದ್ದನ್ನು ನೇರವಾಗಿ ಹೇಳುತ್ತಾರೆ.ತಂದೆಯವರ ಮಾರ್ಗದರ್ಶನದಲ್ಲಿ ನಡೆದ ಪ್ರಿಯಾಂಕ ಖರ್ಗೆಯವರು ಎಂದು ಕೂಡ ಜಾತೀಯತೆಯನ್ನು  ಪರಿಗಣಿಸಲಿಲ್ಲ. ಸಚಿವರಾದ ಮೇಲಂತು ಹಲವಾರು ಜನರು ಅವರ ಸಹಾಯಕ್ಕಾಗಿ ಹೋದವರನ್ನು  ಜಾತಿಯನ್ನು ಪರಿಗಣಿಸದೆ ಎಲ್ಲರನ್ನೂ ಸರಿಸಮಾನವಾಗಿ ಕ್ಷಣಾರ್ಧದಲ್ಲಿ ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಪ್ರತಿದಿನ ಎರಡು ಗಂಟೆಯ ಕಾಲ ಸಾರ್ವಜನಿಕರಿಗೆ ಮೀಸಲಿಟ್ಟು ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ.
****
ಶಾಸಕರು ಸಚಿವರು ಸೇರಿದಂತೆ ಹಲವಾರು ಇಂದು ತಮ್ಮ ತಮ್ಮ ಜಾತಿಯವರಿಗೆ ಹಲವು ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ತಮ್ಮ ಆಪ್ತ ಸಹಾಯಕರನ್ನು ಕೂಡ ತಮ್ಮ ಜಾತಿಯವರನ್ನು ನೇಮಿಸಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯನವರು ಆರಂಭದಿಂದಲೂ ಒಕ್ಕಲಿಗ ಸಮಾಜದವರನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿದ್ದಾರೆ ಕುರುಬರನ್ನಲ್ಲ.ಅದೇ ರೀತಿ ಪ್ರಿಯಾಂಕ ಖರ್ಗೆಯವರು ಮುಸ್ಲಿಂ ವ್ಯಕ್ತಿಯನ್ನು ತಮ್ಮ ಆಪ್ತ ಸಹಾಯಕರನ್ನಾಗಿ ನೇಮಿಸಿಕೊಂಡಿದ್ದಾರೆ ದಲಿತರನ್ನಲ್ಲ. ಇದಕ್ಕೆ ಇವರನ್ನು ಜನ ಇಷ್ಟಪಡುತ್ತಾರೆ.ಇಂತಹವರು
 ಜನನಾಯಕರಾಗುತ್ತಾರೆ. ಒಂದು ಜಾತಿ ಧರ್ಮದಿಂದಲ್ಲ. ತಮಗಿಷ್ಟ ಪಡುವ ಜನರನ್ನು  ಯಾವತ್ತೂ ಮರೆಯದ ನಾಯಕರಿವರು.ಇಂತಹ ಜನನಾಯಕರ ಆದರ್ಶಗಳು ಇತರ ಜನನಾಯಕರಿಗೆ ಆದರ್ಶವಾಗಬೇಕು. ತಮ್ಮ ತಮ್ಮ ಸಮಾಜದವನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಸಮಾಜದ ಜನರಿಗಾಗಿ ದುಡಿಯುತ್ತಿರುವ ಇಂದಿನ ಸಮಾಜದಲ್ಲಿ  ಪ್ರಿಯಾಂಕ್ ಖರ್ಗೆಯವರ ಸಿದ್ಧಾಂತಗಳು ಪ್ರತಿಯೊಬ್ಬ ರಾಜಕಾರಣಿಗೂ ಆದರ್ಶವಾಗಿರಬೇಕು. ಅದನ್ನು ಇತರರು ಅಳವಡಿಸಿಕೊಂಡರೆ ಜಾತೀಯತೆ ಬದಿಗೊತ್ತಿ ಇತರರಿಗೆ ಆದರ್ಶ ಪ್ರಾಯ ಸಚಿವ ಪ್ರಿಯಾಂಕ ಖರ್ಗೆ.