ಬಡವರ ಅಕ್ಕಿ ದಾಸ್ತಾನು ವಿಷಯದಲ್ಲಿ ಕೇಂದ್ರ ಸರ್ಕಾರದ ರಾಜಕೀಯ ಸಚಿವ ದರ್ಶನಾಪುರ ವಾಗ್ದಾಳಿ

ಶಹಾಪೂರ : ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ನಾವು ಕೊಟ್ಟ ಗ್ಯಾರಂಟಿಗಳನ್ನು ಜನರಿಗೆ ತಲುಪಿಸಲು ಕೇಂದ್ರ ಸರಕಾರದಿಂದ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯನ್ನು ಕೇಳಿದ್ದೆವು. ಆದರೆ ಕೇಂದ್ರ ಸರ್ಕಾರ ನಿರಾಕರಿಸಿದ್ದು ದುರದೃಷ್ಟಕರ. ಇದು ಬಡಜನರ ಹೊಟ್ಟೆಯ ಮೇಲೆ ದಬ್ಬಾಳಿಕೆ ಮಾಡಿದಂತೆ ಎಂದು ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇಂದು ಕೇಂದ್ರೀಯ ಮಾಡರ್ನ ಪದವಿ ಕಾಲೇಜಿನಲ್ಲಿ ಪತ್ರಾಕಾಘೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯನ್ನು ಕೇಳಲಾಗಿತ್ತು. ಎಫ್ ಸಿ ಐ ದವರಿಗೆ ಪತ್ರ ಬರೆಯಲಾಗಿತ್ತು. ಅವರು ಅಕ್ಕಿಯು ಸಂಗ್ರಹಣೆ ಇದ್ದ ಕಾರಣ ನಾವು ಅಕ್ಕಿಯನ್ನು ಕೇಳಿದ್ದೆವು. ಆದರೆ ಕೇಂದ್ರ ಸಂಸದರಾದ ತೇಜಸ್ವಿ ಸೂರ್ಯ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅಕ್ಕಿ ಕೇಳಿದ್ದು ಏಪ್ರಿಲ್ ತಿಂಗಳಲ್ಲಿ. ಮೇ ತಿಂಗಳಲ್ಲಿ ಸರಕಾರ ರಚನೆಯಾಗಿದೆ.ಜೂನ್ 8ಕ್ಕೆ ಕೇಂದ್ರದಲ್ಲಿ ಅಕ್ಕಿ ದಾಸ್ತಾನು ರಾಜ್ಯಗಳಿಗೆ ಕೊಡುವುದನ್ನು ನಿಲ್ಲಿಸಿದ್ದೇವೆ ಎಂದು ಹೇಳುತ್ತಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಕ್ಕಿ ದಾಸ್ತಾನು ನಿಲ್ಲಿಸಲಾಗಿದೆ.ಇದು ರಾಜಕೀಯ ಪ್ರೇರಿತ. ಬಡಜನರ ಹಸಿವನ್ನು ನಾವು ನೀಗಿಸುತ್ತೇವೆ. ಕೇಂದ್ರ ಸರಕಾರ ಕೊಡದಿದ್ದರೂ ಕೂಡ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ತರಹಿಸಿಕೊಂಡು ಬಡ ಜನರಿಗೆ ಅಕ್ಕಿಯನ್ನು ನೀಡುತ್ತೇವೆ ಎಂದು ತಿಳಿಸಿದರು.

About The Author