ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 49 ನೆಯ ‘ ಶಿವೋಪಶಮನ ಕಾರ್ಯ

ರಾಯಚೂರು : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜೂನ್ 11 ರ ರವಿವಾರದಂದು 49 ನೆಯ ‘ ಶಿವೋಪಶಮನ ಕಾರ್ಯ’ ವು ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರನ ಸನ್ನಿಧಿಯನ್ನಾಶ್ರಯಿಸಿ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ಮದುವೆಯಾಗದ ತರುಣ ತರುಣಿಯರು ಈ ಶಿವೋಪಶಮನದಲ್ಲಿ ಬಹಳಷ್ಟು ಜನರಿದ್ದರು.ಪರಾಶಕ್ತಿಸಹಿತ ಶ್ರೀಕ್ಷೇತ್ರ ಕೈಲಾಸದಲ್ಲಿ ಪ್ರಕಟಗೊಂಡಿರುವ ಪರಶಿವನು ಸರ್ವರ ಕಲ್ಯಾಣವನ್ನು ಹರಸುತ್ತಿರುವುದರಿಂದ ಮದುವೆಯಾಗದ ತರುಣ ತರುಣಿಯರು ಬಹಳಷ್ಟು ಜನರು ಬರುತ್ತಿದ್ದಾರೆ. ಶಿವ ವಿಶ್ವೇಶ್ವರನ ಕರುಣೆಯಿಂದ ಮಹಾಶೈವ ಧರ್ಮಪೀಠದ ನಿಷ್ಠಾವಂತ ಭಕ್ತರಾದ ಚಿತ್ರಕಲಾವಿದ ಶರಣಪ್ಪ ಬೂದಿನಾಳ ಅವರ ಇಬ್ಬರ ಮಕ್ಕಳಾದ ವಿಶ್ವನಾಥ ಹಾಗೂ ರಾಜಶೇಖರ ಅವರಿಬ್ಬರ ಮದುವೆಯು ಮೇ 29 ರಂದು ನಡೆದಿದ್ದು ಪ್ರಯುಕ್ತ ಶರಣಪ್ಪ ಬೂದಿನಾಳ ಅವರು ಪತ್ನಿ ಶ್ರೀಮತಿ ಮೀನಾಕ್ಷಿಯವರೊಂದಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀಮುಕ್ಕಣ್ಣ ಕರಿಗಾರ ಅವರನ್ನು ಅವರ ಪತ್ನಿ ಸಾಧನಾ ಕರಿಗಾರ ಸಮೇತರಾಗಿ ಭಕ್ತಿ,ಗೌರವಪೂರ್ವಕವಾಗಿ ನೂತನದಂಪತಿಗಳೊಂದಿಗೆ ಸನ್ಮಾನಿಸಿದರು.

ಇಂದಿನ 49 ನೆಯ ‘ ಶಿವೋಪಶಮನ ಕಾರ್ಯ’ ದ ಜೊತೆಗೆ ನಡೆದ ಮುಕ್ಕಣ್ಣ ಕರಿಗಾರ ಅವರು ರಚಿಸಿದ ‘ ಸಿದ್ರಾಮಯ್ಯನವರ ಸಮರ್ಥನೆ’ ಕೃತಿ ಬಿಡುಗಡೆಗಾಗಿ ಆಗಮಿಸಿದ್ದ ದೇವದುರ್ಗದ ಶಾಸಕಿ ಶ್ರೀಮತಿ ಕರಿಯಮ್ಮ ನಾಯಕ ಅವರು ಭಕ್ತರೊಂದಿಗೆ ಸಹಪಂಕ್ತಿ ಭೋಜನಸ್ವೀಕರಿಸಿದರು.ಶ್ರೀಮತಿ ಕರಿಯಮ್ಮ ನಾಯಕರು ‘ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಒಂದು ವರ್ಷದ ಹಿಂದೆಯೇ ನಾನು ಅತ್ಯಧಿಕ ಮತಗಳಿಂದ ಆರಿಸಿ ಬಂದು ಶಾಸಕಿಯಾಗುವುದಾಗಿ ಹೇಳಿದ್ದರಲ್ಲದೆ ಸಿದ್ರಾಮಯ್ಯನವರೇ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದ ‘ ಭವಿಷ್ಯವಾಣಿಯು ನಿಜವಾದುದನ್ನು ಭಕ್ತರೊಂದಿಗೆ ಹಂಚಿಕೊಂಡು ವಿಶ್ವೇಶ್ವರ ಶಿವ,ವಿಶ್ವೇಶ್ವರಿ ದುರ್ಗಾದೇವಿಯರ ವರ್ಣಿಸಲಸದಳ ಮಹಿಮೆಯನ್ನು‌ ಕೊಂಡಾಡಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ, ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಪಂಚಯ್ಯ ಕರಿಗಾರ,ಯಲ್ಲಪ್ಪ ಕರಿಗಾರ, ಶ್ರೀಶೈಲ ಕರಿಗಾರ,ಮಲ್ಲಿಕಾರ್ಜುನ ವಕೀಲರು ಅತ್ತನೂರು,ಆನಂದ,ತಿಪ್ಪಯ್ಯ ಭೋವಿ, ಅಕ್ರಂ ಹಾಗೂ ಮಹಾಶೈವ ಧರ್ಮಪೀಠದ ಪ್ರಸಾರ ವ್ಯವಸ್ಥಾಪಕ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಕಾರ್ಯಕರ್ತರುಗಳು,ಭಕ್ತರುಗಳು‌ಉಪಸ್ಥಿತರಿದ್ದರು.

 

 

About The Author