ಕೃತಕ ಅಭಾವ ಸೃಷ್ಟಿಸಿ ಅಧಿಕ ಬೆಲೆಗೆ ಹತ್ತಿ ಬೀಜಗಳ ಮಾರಾಟ ಆಗ್ರೋ ಕೇಂದ್ರಗಳ ಮೇಲೆ ಕ್ರಮಕೈಗೊಳ್ಳಲು ಆಗ್ರಹ  ಶಹಾಪುರ,

ಶಹಾಪುರ : ತಾಲೂಕಿನ ರಸಗೊಬ್ಬರ ಮತ್ತು ಕೀಟನಾಶಕಗಳ ಆಗ್ರೋ ಕೇಂದ್ರಗಳು ಹತ್ತಿ ಬೀಜಗಳ ಕೃತಕ ಅಭಾವ ಸೃಷ್ಟಿಸಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು,ಕೂಡಲೆ ಆಗ್ರೋ ಕೇಂದ್ರಗಳು ಮೇಲೆ ಕ್ರಮಕೈಗೊಳ್ಳಲು ನಮ್ಮ ಕರ್ನಾಟಕ ಸೇನೆಯ ರಾಜ್ಯ ಸಂಚಾಲಕರಾದ ಭೀಮಣ್ಣ ಶಖಾಪುರ ಸಹಾಯಕ  ಕೃಷಿ  ನಿರ್ದೇಶಕರಿಗೆ  ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.
****
          ಈಗಾಗಲೆ ಮುಂಗಾರು ಬಿತ್ತನೆ ಪ್ರಾರಂಭವಾಗಿದ್ದು, ರೈತರು ಬೀಜ ಹಾಗೂ ರಸಗೊಬ್ಬರ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಕೆಲ ಆಗ್ರೋ ಕೇಂದ್ರಗಳು, ಹೆಚ್ಚು ಬೇಡಿಕೆ ಇರುವ ಕೆಲ ಕಂಪನಿಯ ಬೀಜಗಳನ್ನು ಕೃತಕ ಅಭಾವ ಸೃಷ್ಟಿಸಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಅದಿಕೃತ ರಸೀದಿಯನ್ನು ಯಾರಿಗೂ ನೀಡುತ್ತಿಲ್ಲ,ಬಿಳಿ ಹಾಳೆಯ ಮೇಲೆ ಬರೆದು ಕೊಡುತ್ತಿದ್ದಾರೆ.
****
                     ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನ ಎಲ್ಲಾ ಬೀಜ ಮತ್ತು ರಸಗೊಬ್ಬರ ಮಾರಾಟಗಾರರು, ತಮ್ಮ ಮಾರಾಟ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಾಹಿತಿ ಫಲಕವನ್ನು ಅಳವಡಿಸಬೇಕು. ಅವರಲ್ಲಿರುವ ಬೀಜ, ರಸಗೊಬ್ಬರ, ಇನ್ನಿತರ ವಸ್ತುಗಳ ದಾಸ್ತಾನು ಹಾಗೂ ಅದಕ್ಕೆ ನಿಗದಿ ಪಡಿಸಿದ ದರ ಇದರ ಬಗ್ಗೆ ಸ್ಪಷ್ಟವಾಗಿ ನಮೋದಿಸಬೇಕೆಂದು ಸೂಚಿಸಬೇಕು ಎಂದು ಆಗ್ರಹಿಸಿದರು.
****
                            ತಾಲೂಕಿನಾದ್ಯಂತ ನಕಲಿ ಬೀಜ ಹಾಗೂ ರಸಗೊಬ್ಬರ ಅವಳಿ ಹೆಚ್ಚಾಗಿದ್ದು ಇಂತಹ ನಕಲಿ ಮಾರಾಟಗಾರರ ಮೇಲೆ ನಿಗಾವಹಿಸಬೇಕು.ಸದರಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರಗಳ ಅಭಾವ ಆಗದಂತೆ ಮತ್ತು ಕೃತಕ ಆಭಾವ ಸೃಷ್ಟಿಸಿದಂತೆ ನಿಗಾವಹಿಸಬೇಕು ಎಂದರು.ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದು ಪಟ್ಟೇದಾರ, ವಿಜಯ್ ಸಿಂಗ್ ಠಾಕೂರ್, ರಾಜು ಮತ್ತು ನಗರ ಅಧ್ಯಕ್ಷ ರಾಜ ಸಿಂಗ್ ಉಪಸ್ಥಿತರಿದ್ದರು

About The Author