ಸಂಸ್ಥಾನ ಗದ್ದುಗೆಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯ ಶ್ಲಾಘನೀಯ: ಸಚಿವ ದರ್ಶನಾಪುರ

yaagiri ಶಹಾಪುರ:ಪಟ್ಟಣದ ಪ್ರಸಿದ್ಧ ದಾಸೋಹ ಕ್ಷೇತ್ರ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಗೆ  ಶಹಾಪುರ ಶಾಸಕ ಹಾಗೂ ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ಯಮಗಳು ಇಲಾಖೆಯ ನೂತನ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಆಗಮಿಸಿ ಅರ್ಚನೆ ಪೂಜೆ ಸಲ್ಲಿಸಿ ಕ್ಷೇತ್ರದ ದರ್ಶನ ಪಡೆದರು.ನಂತರ ಪೂಜ್ಯ ಬಸವಯ್ಯ ಸ್ವಾಮಿಗಳಿಗೆ ಶಾಲು ಹೊದಿಸಿ ಗೌರವಿಸಿ ಆಶೀರ್ವಾದ ಪಡೆದರು.ನಂತರ ಮಾತಾಡಿ ಈ ಭಾಗದಲ್ಲಿ ಗದ್ದುಗೆಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಸುತ್ತಾ ಬಂದಿದ್ದು ಸಾಹಿತ್ಯ ಸಂಗೀತ ಕಲೆಗೆ ಅನೇಕ ಕೊಡುಗೆ ಕೊಡುತ್ತಾ ಬಂದಿದ್ದು ಕಾರ್ಯ ಶ್ಲಾಘನೀಯ ವಾಗಿದೆ ಎಂದು ಹೇಳಿದರು. ಗದ್ದುಗೆ ಯ ಶರಣು ಬಿ ಗದ್ದುಗೆ, ಗುರು ಬಸವಯ್ಯ ಗದ್ದುಗೆ, ವಿಶ್ವನಾಥ ಗದ್ದುಗೆ, ಶಿವಪ್ರಕಾಶ್ ಗದ್ದುಗೆ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *