ಕಾರ್ಯಕರ್ತರೆ ಜೀವಾಳ ಕ್ಷೇತ್ರದ ಮತದಾರರ ಆಶೀರ್ವಾದದಿಂದ ಮಂತ್ರಿಯಾಗಿರುವೆ

¯

ಶಹಪುರು : ಕ್ಷೇತ್ರದ ಕಾರ್ಯಕರ್ತರೆ ನನ್ನ ಜೀವಾಳ. ಕ್ಷೇತ್ರದ ಮತದಾರರ ಆಶೀರ್ವಾದದಿಂದಲೇ ನಾನಿಂದು ಮಂತ್ರಿಯಾಗಿರುವೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿಗಳ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ಇಂದು ನಗರದ ಆರಭೋಳ ಕಲ್ಯಾಣ ಮಂಟಪದ ಹೊರ ಪ್ರಾಂಗಣದಲ್ಲಿ ಕ್ಷೇತ್ರದ ಮತದಾರರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಸಚಿವರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ.ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ಬಿಜೆಪಿಯವರಿಗೆ ನಡುಕ ಹುಟ್ಟಿದೆ.
ಬಿಜೆಪಿ ಪಕ್ಷದವರಿಗಿಂತ ಟಿವಿ ಮಾಧ್ಯಮದವರಿಗೆ ಕಾಂಗ್ರೆಸ್ ಗ್ಯಾರಂಟಿಯ ಬಗ್ಗೆ ಚಿಂತೆಯಾಗಿದೆ. ಅನಾವಶ್ಯಕವಾಗಿ ರಾಜ್ಯದ ಜನತೆಗೆ ಟಿವಿ ಮಾಧ್ಯಮಗಳು ಗೊಂದಲವನ್ನು ಸೃಷ್ಟಿಸುತ್ತಿವೆ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಬಿಜೆಪಿಯವರು ಸ್ವಿಜ್ ಬ್ಯಾಂಕಿನಿಂದ ಹಣ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ಹಾಕುತ್ತೇವೆ. ರೈತರ ಆದಾಯ ದ್ವಿಗುಣ ಮಾಡುತ್ತಿವೆಂದು ಸುಳ್ಳು ಹೇಳಿ 9 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷ ಹಾಗಲ್ಲ.ರಾಜ್ಯದಲ್ಲಿ 17 ಶಾಸಕರನ್ನು ಖರೀದಿಸಿ ವಾಮಮಾರ್ಗದಿಂದ ಆಡಳಿತ ನಡೆಸಿದರು.ಭ್ರಷ್ಟಾಚಾರ ದಿಂದ ಬೇಸತ್ತು ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.ನಾವು ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು. ಯಾವ ಕಾಲಕ್ಕೂ ಮತದಾರರಿಗೆ ನಾನು ಚಿರಋಣಿ. ಸಚಿವರಾದರು ನಿಮ್ಮ ಸೇವೆಯಲ್ಲಿ ನಾನು ಇರುತ್ತೇನೆ ಎಂದು ಮತದಾರರಿಗೆ ಕರೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪೂರ, ವಿಧಾನ ಪರಿಷತ್ ಸದಸ್ಯರಾದ ತಿಮ್ಮಣ್ಣ ಕಮಕನೂರು ನೀಲಕಂಠ ಬಡಿಗೇರ್ ಶಂಕ್ರಣ್ಣ ವಣಿಕ್ಯಾಳ ಸೇರಿದಂತೆ ಇತರರು ಮಾತನಾಡಿದರು.
ಆರಂಭದಲ್ಲಿ ಬಿ ಗುಡಿಯಲ್ಲಿರುವ ಮಾಜಿ ಮಂತ್ರಿ ಬಾಪುಗೌಡ ದರ್ಶನಾಪುರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ನಗರದ ಡಾ. ಬಿ ಆರ್ ಅಂಬೇಡ್ಕರ ಪುತ್ತಳಿ, ಬಸವೇಶ್ವರ ಮೂರ್ತಿ, ವಾಲ್ಮೀಕಿ ಮೂರ್ತಿ ಮತ್ತು ಅಂಬಿಗರ ಚೌಡಯ್ಯ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ನಂತರ ನಡೆದ ಕಾರ್ಯಕ್ರಮಕ್ಕೆ ಸಚಿವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಭಾರತಿ ದರ್ಶನಪೂರ್,ಮಹಿಳಾ ಬ್ಲಾಕ್ ಅಧ್ಯಕ್ಷರಾದ ರೇಣುಕಾ ಚಟ್ರಿಕಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಆರ್ಭೋಳ,ಮಹಾಮಂಡಳಿ ನಿರ್ದೇಶಕರಾದ ಗುರುನಾಥ ರೆಡ್ಡಿ ಪಾಟೀಲ್,ವಿಶ್ವನಾಥ್ ರೆಡ್ಡಿ ಯಾದಗಿರಿ ಸಹಕಾರ ಒಕ್ಕೂಟದ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಚೇತನ್ ಗೋನಾಯಕ್,
ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಶಿರವಾಳ,ಚರಿತಾ ಕೊಂಕಲ್ ಕಾಂಗ್ರೆಸ್ ರಾಷ್ಟ್ರೀಯ ಸಂಚಾಲಕರು,
ನಗರಸಭೆಯ ಆಶ್ರಯ ಸಮಿತಿ ಅಧ್ಯಕ್ಷರಾದ  ವಸಂತಕುಮಾರ ಸುರಪುರಕರ್,ಚನ್ನಬಸು ವನದುರ್ಗ ಖಾಸಗಿ ಶಾಲೆ ಒಕ್ಕೂಟದ ಅಧ್ಯಕ್ಷರು, ರಾಜ್ಯ ಕುರಿ ಮೇಕೆ ಮಹಾಮಂಡಳಿ ನಿರ್ದೇಶರಾದ ಶಾಂತಗೌಡ ನಾಗನಟಿಗಿ, ಕೆಪಿಸಿಸಿ ಎಸ್ಸಿ ಘಟಕ ರಾಜ್ಯ ಸದಸ್ಯರಾದ ವೆಂಕಟೇಶ ಆಲೂರು, ಶರಣಬಸಪ್ಪಗೌಡ ದರ್ಶನಾಪುರ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷರು ಹಾಗೂ ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಶಾಂತು ಪಾಟೀಲ್ ಕಾಡಂಗೇರಾ ಸೇರಿದಂತೆ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author