ವಡಗೇರಾ : ವಡಗೇರಾ ತಾಲ್ಲೂಕಿನ ಕೊಂಕಲ್ ಗ್ರಾಮದಲ್ಲಿ ಚುನಾವಣಾ ಆಯೋಗ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಸ್ವೀಪ್ ಸಮಿತಿ ಯಾದಗಿರಿ ತಾಲೂಕ ಸ್ವಿಪ್ ಸಮಿತಿ ವಡಗೇರಾ ಹಾಗೂ ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ನಡೆದಿರುವ ಮತದಾರರ ಜಾಗೃತಿ ಕುರಿತು ಬೀದಿನಾಟಕ ಕಾರ್ಯಕ್ರಮವನ್ನು ಗ್ರಾಮದ ಹಿರಿಯ ಮುಖಂಡರಾದ ಅಶೋಕ ಡೊಣ್ಣೆಗೌಡ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ವಿಧಾನಸಭಾ ಚುನಾವಣಾ 2023 ರ ಅಂಗವಾಗಿ ಕೊಂಕಲ್ ಗ್ರಾಮ ಪಂಚಾಯತ ಆವರಣದಲ್ಲಿ ನಡೆದಿದ್ದು ಬಹಳ ಸಂತೋಷ. ಮತದಾರರ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಮೇ 10 ರಂದು ನಡೆಯುವ ಮತದಾನ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸಲಹೆ ನೀಡಿದರು.
ಯಾವುದೆ ಹಣ ಅಥವಾ ಕುಡಿತಕ್ಕೆ ಒಳಗಾಗಬಾರದು ಮಹಿಳೆಯರು ಯಾವುದೇ ಆಮಿಷಕ್ಕಾಗಿ ಒಳಗಾಗದೆ ನಿಮ್ಮ ಮತದಾನ ಕಳೆದುಕೊಳ್ಳಬಾರದು. ಈ ಮತದಾನ ಅತ್ಯಂತ ಅಮೂಲ್ಯವಾದದ್ದು ಎಂದು ಕಲ್ಯಾಣ ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಶರಣು ಕಾಡಂಗೇರಾ ತಿಳಿಸಿದರು.
ಶ್ರೀ ಸಾಯಿ ಕಲಾ ತಂಡದಿಂದ ಕೊಂಕಲ್ ಗ್ರಾಮದ ಜನರಿಗೆ ಮತದಾನ ಬಗ್ಗೆ ಜಾಗೃತಿ ಮೂಡಿಸಿದರು. ಕಲಾ ತಂಡದ ಮುಖ್ಯಸ್ಥರಾದ ಗಂಗುಭಾಯಿ ಕಲ್ಬುರ್ಗಿ ಸಿದ್ದಾರ್ಥ ಸಂಗಮೇಶ ಸಿದ್ದಣ್ಣ ಮಲ್ಲಿಕಾರ್ಜುನ ರಾಜಶೇಖರ ಹಲವಾರು ಕಲಾವಿದರು ಹಾಗೂ ಗ್ರಾಮದ ಹಣಮಂತ್ರಾಯ ಬೂದೂರು ರಾಮಚಂದ್ರ ಡೊಣೆಗಾಂವ ರಾಮಯ್ಯ ಕವಲಿ ಬಸವಲಿಂಗಪ್ಪ ಗ್ರಾಮದ ಸಾರ್ವಜನಿಕರು ಇದ್ದರು.
Post Views: 93