ಬಿಜೆಪಿ ಅಭ್ಯರ್ಥಿ ಪರ ಯುವಕರ ಬಿರುಸಿನ ಪ್ರಚಾರ

ಶಹಾಪುರ : ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಆಡಳಿತದ ಸರ್ಕಾರ ಜನಸ್ನೇಹಿಯಾಗಿ ನುಡಿದಂತೆ ನಡೆದ ಪಕ್ಷವಾಗಿದ್ದು, ಮತ್ತೊಮ್ಮೆ ಬಿಜೆಪಿಯನ್ನು ಜನರು ಆಶೀರ್ವದಿಸಿ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಬಿಜೆಪಿ ಯುವಮುಖಂಡ ಡಾ.ಶಿವರಾಜ ದೇಶಮುಖ ತಿಳಿಸಿದರು.
     ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರ ಪಡೆಯೊಂದಿಗೆ ಪ್ರಚಾರಕಾರ್ಯ ಕೈಗೊಂಡು, ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ ಪರ ೧೯ ಮತ್ತು ೨೦ನೇ ವಾರ್ಡ್ಗಳಲ್ಲಿ  ಪ್ರಚಾರ ಕೈಗೊಂಡ ಕರಪತ್ರ ನೀಡಿ ಮಾತನಾಡಿದರು.
     ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷ ದೇವಿಂದ್ರ ಕೋನೇರ, ಡಾ.ಚಂದ್ರಶೇಖರ ಕೊಲ್ಲೂರ, ಸಿದ್ಧಯ್ಯ ಸ್ವಾಮಿ, ಕಲ್ಲಪ್ಪ ಮಾಳಗಿ,ರಾಜಣ್ಣ ಚಿಟೆನೋರ, ಶಾಂತು ಜಂಗಳಿ, ಬಾಪುರಾಯ, ಚಂದ್ರು ಯಾಳಗಿ, ರಾಘವೇಂದ್ರ ಯಕ್ಷಿಂತಿ, ಅಡಿವೆಪ್ಪ ಜಾಕಾ, ಸೋಪಣ್ಣ ಸಗರ, ಭೀಮಾಶಂಕರ, ಮಂಜು ಚವ್ಹಾಣ, ಭೀಮುದಾಸರ, ಮಲ್ಲಿಕಾರ್ಜುನ ಹಿರೇಮಠ, ಕೇಶಪ್ಪ ನಾಲ್ವಡಿಗಿ ಸೇರಿದಂತೆ ಅನೇಕ ಯುವ ಬಿಜೆಪಿ ಮುಖಂಡರು ಇದ್ದರು.