ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 44 ನೆಯ ‘ ಶಿವೋಪಶಮನ ಕಾರ್ಯ’ 

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಎಪ್ರಿಲ್ 30 ರ ರವಿವಾರದಂದು 44 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಶ್ರೀ ವಿಶ್ವೇಶ್ವರನ ಅನುಗ್ರಹವನ್ನು ಬಯಸಿ ಬಂದಿದ್ದ ಭಕ್ತರುಗಳಿಗೆ ಶಿವಕಾರುಣ್ಯ ವಿಶೇಷವನ್ನು ಕರುಣಿಸಿದರು.

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹೊರವಲಯದ ಈಶಾನ್ಯ ದಿಕ್ಕಿನಲ್ಲಿರುವ ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ‘ ಶಿವೋಪಶಮನ ಕಾರ್ಯ’ ನಡೆಯುತ್ತದೆ.ವಿಶ್ವನಿಯಾಮಕನಾದ ಪರಮೇಶ್ವರ ಶಿವನು ತನ್ನ ವಿಶ್ವೋದ್ಧಾರದ ಸಂಕಲ್ಪದಂತೆ ಲೋಕಜೀವರುಗಳ ಸಂಕಷ್ಟ ಪರಿಹರಿಸಲು ಮಹಾಶೈವ ಧರ್ಮಪೀಠದಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ಲೋಕೋದ್ಧಾರ ಲೀಲೆ ಆಡುತ್ತಿದ್ದಾನೆ.

ಶ್ರೀಕ್ಷೇತ್ರ ಕೈಲಾಸವನ್ನರಸಿ ತನ್ನ ಸನ್ನಿಧಿಗೆ ಬರುವ ಭಕ್ತರ ಸಮಸ್ಯೆಗಳನ್ನು‌ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ಪರಿಹರಿಸುತ್ತಿರುವುದರಿಂದ ರಾಜ್ಯ,ಹೊರರಾಜ್ಯಗಳಿಂದಲೂ ಭಕ್ತರುಗಳು ಪ್ರತಿ ರವಿವಾರದಂದು ಶ್ರೀಕ್ಷೇತ್ರ ಕೈಲಾಸಕ್ಕೆ ಬರುತ್ತಿದ್ದಾರೆ.

ಮಹಾಶೈವ ಧರ್ಮಪೀಠವನ್ನರಸಿ ಬರುವ ಭಕ್ತರುಗಳಿಗೆ ಪ್ರತಿರವಿವಾರದಂದು ಭಕ್ತರುಗಳ ನೆರವಿನೊಂದಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿದೆ.ಅನ್ನ ದಾಸೋಹದ ಪಂಕ್ತಿಯಲ್ಲಿ ಜಾತಿ,ಮತ,ಧರ್ಮಗಳ ಭೇದವನ್ನು ಪರಿಗಣಿಸದೆ ಎಲ್ಲರೂ ಸಾಮೂಹಿಕವಾಗಿ ದಾಸೋಹ ಸ್ವೀಕರಿಸುತ್ತಾರೆ,ಪಂಕ್ತಿ ಭೇದಕ್ಕೆ ಇಲ್ಲಿ ಅವಕಾಶವೇ ಇಲ್ಲ.ಮೊದಲ ಪಂಕ್ತಿಯಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಭಕ್ತರೊಂದಿಗೆ ಕುಳಿತು ಪ್ರಸಾದ ಸ್ವೀಕರಿಸುತ್ತಾರೆ.ಪಂಕ್ತಿಗೆ ಕುಳಿತುಕೊಳ್ಳುವುದಷ್ಟೇ ಅಲ್ಲ ಎಲ್ಲರ ಪ್ರಸಾದಸೇವನೆ ಮುಗಿಯುವವರೆಗೆ ಪೀಠಾಧ್ಯಕ್ಷರು ತಟ್ಟೆಬಿಟ್ಟು ಏಳುವುದಿಲ್ಲ.ಯಾವ ಮಠ ಪೀಠಗಳಲ್ಲಿ ಇರದ ಅನ್ಯಾದೃಶ ಮಾದರಿಯನ್ನು ಸೃಷ್ಟಿಸಿದ್ದಾರೆ ಶ್ರೀ ಮುಕ್ಕಣ್ಣ ಕರಿಗಾರ ಅವರು.ಜೊತೆಗೆ ಪ್ರಸಾದ ಸ್ವೀಕರಿಸುವ ಮುಂಚೆ ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಮುಖ್ಯಸ್ಥರಾದ ಗುರುಬಸವ ಹುರಕಡ್ಲಿ ಅವರು ಮುಕ್ಕಣ್ಣ ಕರಿಗಾರರ ಗುರುಗಳಾದ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ಲೋಕಕ್ಕೆ ಕರುಣಿಸಿದ ,ಸರ್ವರೋನ್ನತಿಯ ಮಹಾಮಂತ್ರ ‘ ಹೇ ಪ್ರಭೋ ಪ್ರಸೀದ ಓಂ’ ಮಂತ್ರವನ್ನು ಸಾಮೂಹಿಕವಾಗಿ ಪಠಿಸುವ ವ್ಯವಸ್ಥೆಮಾಡಿ ವಿಶಿಷ್ಟಧಾರ್ಮಿಕ ಸಂಸ್ಕಾರ ಉಂಟು ಮಾಡಿದ್ದಾರೆ.

ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಭಕ್ತರಿಂದ ಕಾಣಿಕೆ- ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ.ಭಕ್ತರ ಸಮಸ್ಯೆ ಪರಿಹರಿಸಿದ್ದಕ್ಕೆ ಶುಲ್ಕ,ಶಾಸ್ತ್ರಕಾಣಿಕೆಗಳನ್ನೂ ಸ್ವೀಕರಿಸುವುದಿಲ್ಲ.ಭಕ್ತರು ದಾಸೋಹಕ್ಕೆ ದೇಣಿಗೆ ಸಲ್ಲಿಸಬಹುದು,ದೇವಸ್ಥಾನದ ಅಭಿವೃದ್ಧಿಗೆ ಕಾಣಿಕೆ ಸಲ್ಲಿಸಬಹುದು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವ ಭಕ್ತರುಗಳಲ್ಲಿ ಶ್ರೀಮಂತರು- ಬಡವರು,ಮೇಲ್ವರ್ಗದವರು- ಕೆಳವರ್ಗದವರು,ಹಿಂದುಗಳು- ಮುಸ್ಲಿಮರು-ಕ್ರೈಸ್ತರು ಎಂದು ಯಾವ ಭೇದವನ್ನೆಣಿಸದೆ ಎಲ್ಲರನ್ನೂ ಸಮಾನಾಗಿ ಕಾಣುತ್ತ ‘ ಲೋಕದ ಜೀವರುಗಳೆಲ್ಲ ಒಂದೇ,ಶಿವನೇ ಎಲ್ಲರಿಗೂ ತಂದೆ’ ಎನ್ನುವ ತತ್ತ್ವವನ್ನು ಬೋಧಿಸಿದ್ದಲ್ಲದೆ ಅನುಷ್ಠಾನಕ್ಕೆ ತಂದಿರುವುದರಿಂದ ಶ್ರೀಕ್ಷೇತ್ರ ಕೈಲಾಸಕ್ಕೆ ಬರುವ ಭಕ್ತರೆಲ್ಲರಿಗೂ ಶಿವಸರ್ವೋದಯ ತತ್ತ್ವದ ಅನುಭವವಾಗುತ್ತಿದೆ.

‌ ಇಂದಿನ ಅನ್ನ ದಾಸೋಹಿಗಳಾದ ಶ್ರೀ ಬಸವರಾಜ ಹದ್ದಿನಾಳ ಇವರನ್ನು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ದಾಸೋಹ ಸಮಿತಿಯ ಮುಖ್ಯಸ್ಥರಾದ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗೋಪಾಲ ಮಸೀದಪುರ,ಶಿವಾನಂದ ಹಿಂದುಪುರ,ಶಿವಯ್ಯಸ್ವಾಮಿ ಮಠಪತಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ, ಶರಣಗೌಡ ಹೊನ್ನಟಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ, ಪತ್ರಕರ್ತ ಏಳುಬಾವೆಪ್ಪ ಗೌಡ,ಸಿದ್ರಾಮಯ್ಯಸ್ವಾಮಿ ಹಳ್ಳಿ,ಯಲ್ಲಪ್ಪ ಕರಿಗಾರ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಲಿಂಗಪ್ಪ ಕರಿಗಾರ,ಮಹಾಶೈವ ಧರ್ಮಪೀಠದ ಪ್ರಚಾರ ವ್ಯವಸ್ಥಾಪಕ ಉದಯಕುಮಾರ ಸಣ್ಣಹುಲಿಗೆಪ್ಪ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಹಾಗೂ ತೋರಿಸಿಕೊಳ್ಳಲು ಬಂದಿದ್ದ ಭಕ್ತರುಗಳು ಉಪಸ್ಥಿತರಿದ್ದರು.

About The Author