ಬಿಜೆಪಿ ಜೆಡಿಎಸ್ ತೊರೆದು  ಕಾಂಗ್ರೆಸ್ ಪಕ್ಷಕ್ಕೆ  ಸೇರ್ಪಡೆಯಾದ ಗೋಲಗೇರಾ ಗ್ರಾಮಸ್ಥರು

ಶಹಾಪೂರ‌: ಇಂದು ಶಹಾಪೂರ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗೋಲಗೆರಾ ಗ್ರಾಮದ ಹಲವರು ಜೆಡಿಎಸ್ ಬಿಜೆಪಿ ಪಕ್ಷದಿಂದ ಬೆಸತ್ತು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬಿಜೆಪಿ ಸರಕಾರದ ದುರಾಡಳಿತಕ್ಕೆ ಬೇಸತ್ತು ಶರಣಬಸಪ್ಪಗೌಡ ದರ್ಶನಾಪೂರವರ ಶಹಾಪೂರದ ಅಭಿವೃಧ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ  ಬೆಂಬಲ ಸೂಚಿಸಿದರು.

ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಮತ್ತು ರಾಜು ಮಾಡಗಿ ಉಪಸ್ಥಿತಿಯಲ್ಲಿ ಗ್ರಾಮದ ಯುವ ಮುಖಂಡರಾದ ಲಕ್ಷ್ಮಣ ಜಾಣಕರ ಮರೇಪ್ಪ ಜಾಣಾಕರ ಶಿವಪ್ಪ ಜಾಣಕಾರ ಲಚ್ಚಮಣ್ಞ ಜಾಣಕಾರ ಕರೇಪ್ಪ ಜಾಣಕಾರ ಮರೇಪ್ಪ ಜಾಣಕಾರ ಅಯ್ಯಪ್ಪ ಜಾಣಕಾರ ಶರಬಣ್ಣ ಗೊಲಪ್ಪಲಿ ಸೈಬಣ್ಣ ಕಾಗಿ‌ ಯಲ್ಲಪ್ಪ ಗೊಲ್ಲರ್ ಗ್ರಾಮದ ಹಲವಾರು ಯುವ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.