ಶಹಾಪುರ,,
ಬಸವರಾಜ ಕರೇಗಾರ..
ಕೇಂದ್ರ ಸರಕಾರ ಭಾರತೀಯ ರಿಜರ್ವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ತಿದ್ದುಪಡಿ 2025/10( 2)(ಜಿ)ಯ ಪ್ರಕಾರ ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿದಂತೆ ನಿರ್ದೇಶಕರ ಅವಧಿಯ ಕುರಿತು ಹೊರಡಿಸಿರುವ ಸುತ್ತೋಲೆಯ ಪ್ರಕಾರ ಪ್ರತಿ ರಾಜ್ಯ ಅಪೇಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ (ಡಿಸಿಸಿ) ಕೇಂದ್ರ ಬ್ಯಾಂಕ್ ಹಾಗೂ ಪಟ್ಟಣ ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಆಡಳಿತ ಮಂಡಳಿಗೆ ನಿರಂತರ 10 ವರ್ಷ ಮಾತ್ರ ನಿರ್ದೇಶಕರಾಗಲು ಅವಕಾಶವಿದೆ. ಹತ್ತು ವರ್ಷ ಮೀರಿ ನಿರ್ದೇಶಕರಾದವರು ಅನರ್ಹರಾಗುತ್ತಾರೆ. ರಾಜ್ಯ ಸಹಕಾರಿ ಬ್ಯಾಂಕುಗಳಿಗೆ ಈಗಾಗಲೇ 2025 ಆಗಸ್ಟ್ 1ರ ಸುತ್ತೊಲೆ ಕಳುಯಿಸಲಾಗಿದೆ. ಈಗಾಗಲೇ ಈ ಕಾಯ್ದೆಯು ದೇಶದ ಹಲವು ರಾಜ್ಯಗಳಲ್ಲಿ ಜಾರಿಯಾಗಿದೆ.ಕರ್ನಾಟಕದಲ್ಲಿ ಈ ಕಾಯ್ದೆ ಜಾರಿಯಾಗಬೇಕಿದೆ. ರಾಜ್ಯದಲ್ಲಿ ಜಾರಿಯಾದರೆ ಆದೇಶದನ್ವಯ ಕಲಬುರ್ಗಿ ಮತ್ತು ಯಾದಗಿರಿ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಕಳೆದ ಕೆಲವು ತಿಂಗಳುಗಳ ಹಿಂದೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಆಯ್ಕೆಯಾದ ಕೆಲ ನಿರ್ದೇಶಕರು 10 ವರ್ಷಕ್ಕಿಂತಲೂ ಹೆಚ್ಚು ಬಾರಿ ಸತತವಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸಿದ್ದಾರೆ. ಕೇಂದ್ರ ರಿಜರ್ವ ಬ್ಯಾಂಕಿನ ನಿಯಮ ಅನ್ವಯಿಸಿದರೆ ಅವರ ನಿರ್ದೇಶಕ ಸ್ಥಾನಕ್ಕೆ ಕುತ್ತು ಬರಬಹುದು ಎನ್ನಲಾಗಿದೆ. ಕಾಯ್ದೆಯಂತೆ 10 ವರ್ಷ ಮೇಲ್ಪಟ್ಟು ಆಯ್ಕೆಯಾದ ನಿರ್ದೇಶಕರ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಕಾನೂನಿನಡಿ ಕಾಯ್ದೆ ಜಾರಿಯಾದರೆ ನಿರ್ದೇಶಕರ ಆಯ್ಕೆ ಅಸಿಂಧುವಾಗುತ್ತದೆಯೋ ಕಾದು ನೋಡಬೇಕಿದೆ.