ಸರಕಾರಿ ನೌಕರರಿಗೆ ಅನುಕೂಲವಾಗುವ ರಾಘವೇಂದ್ರ ಅವರು ರಚಿತ ಸಾಮಾನ್ಯ ಅಧ್ಯಯನ ಪುಸ್ತಕ “ಗುರುದರ್ಪಣ” ಲೋಕಾರ್ಪಣೆ

ರಾಘವೇಂದ್ರ ಗಬ್ಬೂರು ಇವರು ಶಾಲಾ ಶಿಕ್ಷಕರ ನೇಮಕಾತಿ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗಲಿ ಎನ್ನುವ ಸದುದ್ದೇಶದಿಂದ ರಾಯಚೂರ ರಂಗಮಂದಿರದಲ್ಲಿ ” ಗುರುದರ್ಪಣ ” ಸಾಮಾನ್ಯ ಅಧ್ಯಯನ ಪುಸ್ತಕವನ್ನು ಸರಕಾರಿ ನೌಕರರ ಜಿಲ್ಲಾಧ್ಯಕ್ಷರಾಗಿರುವ ಕೃಷ್ಣ ಶಾವಂತಗೇರಿ ಬಿಡುಗಡೆ ಮಾಡಿದರು.

ಈ ಪುಸ್ತಕದ ವಿಶೇಷತೆ

ಗುರುದರ್ಪಣ ಸ್ಪರ್ಧಾತ್ಮಕ ಪುಸ್ತಕವು ಶಿಕ್ಷಕ ರಾಘವೇಂದ್ರ ರಚಿಸಿದ ಮೊದಲ ಪುಸ್ತಕ.ಈ ಪುಸ್ತಕ ಕೇವಲ ಶಿಕ್ಷಕರ ನೇಮಕಾತಿಗೆ ಮಾತ್ರ ಉಪಯೋಗವಾಗುವುದಿಲ್ಲ, ಇದು ಎಲ್ಲಾ ತರಹದ ವಿವಿಧ ಪರೀಕ್ಷೆಗಳಿಗೆ ಸಾಮಾನ್ಯ ಅಧ್ಯಯನ ಉಪಯುಕ್ತವಾಗುವ ಪುಸ್ತಕವಾಗಿರುತ್ತದೆ. ಈ ಪುಸ್ತಕವನ್ನು ಪ್ರತಿಯೊಬ್ಬರು ಓದಿ ಇದರಿಂದ ನೌಕರಿ ಪಡೆಯಬೇಕೆಂಬುದು ಈ ಕೃತಿಯ ಲೇಖಕರ ಅಭಿಮತವಾಗಿರುತ್ತದೆ. ಮಾರುಕಟ್ಟೆಯಲ್ಲಿ ಅನೇಕ ಪುಸ್ತಕಗಳಿವೆ.  ಕಲ್ಯಾಣ ಕರ್ನಾಟಕದವರಾದ ರಾಘವೇಂದ್ರ ಅವರು ನಮ್ಮ ಕಲ್ಯಾಣ ಕರ್ನಾಟಕದ ಹೊಸ ಪ್ರತಿಭೆ ಸಾಹಿತ್ಯ ಲೋಕಕ್ಕೆ ಒಂದು ಸ್ಪರ್ಧಾತ್ಮಕ ಸಾಮಾನ್ಯ ಅಧ್ಯಯನದ ಸಲುವಾಗಿ “ಗುರುದರ್ಪಣ ” ಎನ್ನುವ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರಲ್ಲಿ ಮುಖ್ಯವಾಗಿ 7 ವಿಷಯಗಳನ್ನಾದರಿಸಿ ಪಠ್ಯ ಕ್ರಮವನ್ನು ಕೇಂದ್ರೀಕರಿಸಿ ವಸ್ತುನಿಷ್ಟ ಪ್ರಶ್ನೋತ್ತರಗಳು ಮತ್ತು ವಿವರಣೆಯೊಂದಿಗೆ UPSC ಮತ್ತು KPSC ಅಲ್ಲದೇ ಇನ್ನಿತರ ಪರೀಕ್ಷೆಗಳಿಗೆ ಕೂಡಾ ಉಪಯೋಗವಾಗುತ್ತದೆ ಎನ್ನುವುದು ಎ.ಬಿ. ಹಿರೆದಿನ್ನಿ ಯವರ ಅಭಿಪ್ರಾಯವಾಗಿದೆ.

ಲೇಖಕರ ಪರಿಚಯ

ರಾಘವೇಂದ್ರ ಇವರು ದೇವದುರ್ಗ ತಾಲೂಕಿನ ಗಬ್ಬೂರಿನವರು. 09.01.1985 ರಂದು ಜನನ. ಮುದ್ದಮ್ಮ ಮತ್ತು ಯಂಕಪ್ಪ ನವರ 3 ನೇ ಪುತ್ರ. ಬಡ ಕುಟುಂಬದಲ್ಲಿ ಜನಿಸಿದ ಇವರ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಗಬ್ಬೂರಿನಲ್ಲಿ ಪೂರೈಸಿ, ರಾಯಚೂರಿನಲ್ಲಿ ವಿಜ್ಞಾನ ವಿಭಾಗದ ಜಿಲ್ಲೆಯ ಹೆಸರಾಂತ ಶಿಕ್ಷಣ ಸಂಸ್ಥೆಯಾದ LVD ಕಾಲೇಜಿನಲ್ಲಿ ಮುಗಿಸಿ,ಹೊಸದುರ್ಗದಲ್ಲಿ ಡಿಈಡಿ ಮುಗಿಸಿದ್ದಾರೆ. 2007ರಲ್ಲಿ ಪ್ರಾಥಮಿಕ ಶಿಕ್ಷಕರಾಗಿ ಆಯ್ಕೆಗೊಂಡು, ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಐಜಾಪುರು ಗ್ರಾಮದಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಜೊತೆಗೆ M.A ಕನ್ನಡ, SET ಮತ್ತು KSET ಕೂಡಾ ಪಾಸಾಗಿದ್ದಲ್ಲದೇ, ಯುಪಿಎಸ್ಸಿ,KPSC ಹಲವು ಪರೀಕ್ಷೆಗಳನ್ನು ಎದುರಿಸಿದ್ದಾರೆ. ಮೂರು ಸಲ KAS ಪರೀಕ್ಷೆಯ ಸಂದರ್ಶನದವರೆಗೆ ಹೋಗಿ, ಅನುಭವದ ಜೊತೆಗೆ ಸಮಾಜಮುಖಿಯಾಗಿ ಛಲಬಿಡದೆ ಏನಾದರು ಸಾಧಿಸಬೇಕು ಎನ್ನುವ ತುಡಿತ ಮೊದಲಿಂದಲೂ ಇತ್ತು.ಬಡತನದ ನಡುವೆ ಸಿರಿತನ ಕಾಣುವ ಬಯಕೆ ಯಂತೆ ಬಾಲ್ಯದಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿ, ಶಿಸ್ತಿನ ಸಿಪಾಯಿಯಂತೆ ಎಲ್ಲಾ ವಿಷಯಗಳನ್ನು ಕಲಿಯುವ ಮತ್ತು ಕಲಿಸುವ ಸಾಮರ್ಥ್ಯ ಇವರಲ್ಲಿತ್ತು.ಹೀಗಾಗಿ ನಾನು ಉನ್ನತ ಹುದ್ದೆ ಏರದಿದ್ದರೂ ನನ್ನ ಪುಸ್ತಕ ಓದಿದ ಪ್ರತಿಯೊಬ್ಬರು ಕೂಡಾ ಉನ್ನತ ಹುದ್ದೆಗೆ ಹೋಗಲು ಸಹಾಯವಾಗಲಿ ಎನ್ನುವ ಸದುದ್ದೇಶದಿಂದ ಬಡವರ ಆಶಾಕಿರಣವಾಗಿ “ಗುರುದರ್ಪಣ “ಎನ್ನುವ ಪುಸ್ತಕವನ್ನು ಹೊರತಂದಿದ್ದಾರೆ. ಈಗ ಈ ಪುಸ್ತಕ ಮಾರುಕಟ್ಟೆಯಲ್ಲಿ ಎಲ್ಲಾ ಕಡೆ ಸಿಗುತ್ತದೆ.ಅತಿ ಕಡಿಮೆ ಬೆಲೆಯ ವರ್ಣರಂಜಿತ ವಿಷಯಗಳ ಜೊತೆಗೆ ಪ್ರಚಲಿತ ವಿದ್ಯಮಾನಗಳನ್ನು ಒಳಗೊಂಡು ಉತ್ತಮ ಪುಸ್ತಕ ಇದಾಗಿದೆ. ಈ ಕಾರಣಕ್ಕೆ ಈ ಪುಸ್ತಕವನ್ನು ಪ್ರತಿಯೊಬ್ಬರು ಓದಿ ಉನ್ನತ ಹುದ್ದೆಗೆ ತಲುಪಲಿ ಮತ್ತು ಮಿತ್ರ ರಾಘವೇಂದ್ರ ರವರು ಇನ್ನೂ ಅನೇಕ ಇಂತಹ ಪುಸ್ತಕಗಳನ್ನು ಬರೆಯಲಿ ಅಂತ ಆಶೀಸೋಣ.

AB ಹಿರೇದಿನ್ನಿ.