ಶಹಾಪುರ,

ಸೆಕ್ಯುಲರ್ ಎಕ್ಸ್ಪ್ರೆಸ್ ದಿನಪತ್ರಿಕೆಯ ಸಂಪಾದಕರಾದ ಮಲ್ಲಯ್ಯ ಪೋಲಂಪಲ್ಲಿಯವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ 2024ನೇ ಸಾಲಿನ ರಾಜ್ಯಮಟ್ಟದ ಪಟೇಲ್ ಹನುಮಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಏಪ್ರಿಲ್ ತಿಂಗಳ 11,12ರಂದು ಬೀದರ್ನಲ್ಲಿ ರಾಜ್ಯಮಟ್ಟದ ಕಾರ್ಯನಿರತ ಪತ್ರಕರ್ತರ ಸಂಘದ 40 ನೇ ರಾಜ್ಯ ಸಮ್ಮೇಳನ ನಡೆಯಲಿದ್ದು ಆ ಸಮ್ಮೇಳನದಲ್ಲಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಉತ್ತಮ ವರದಿಗಾರರಿಗೆ ಕೊಡಲಾಗುವುದು. ತಾಲೂಕಿನ ಮಲ್ಲಯ್ಯ ಪೋಲಂಪಲ್ಲಿಯವರು ಈ ಹಿಂದೆ ಕನ್ನಡಪ್ರಭ ದಿನಪತ್ರಿಕೆಯಲ್ಲಿ ಶಹಾಪುರ ತಾಲೂಕು ಅರೆಕಾಲಿಕ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದು ಹಲವು ಮಾನವೀಯ ಆಧಾರಿತ ವರದಿಗಳನ್ನು ಮಾಡಿದ್ದಾರೆ.
ವಡಗೇರಿ ತಾಲೂಕು ಯಕ್ಷಿಂತಿ ಗ್ರಾಮದಲ್ಲಿ 70 ವರ್ಷದ ಅನಾಥೆಗೆ ಮನೆ ನಿರ್ಮಿಸಿಕೊಡಲು ಇವರ ವರದಿ ಸಾತ್ ನೀಡಿತ್ತು. ಶಹಾಪುರ ತಾಲೂಕಿನ ಅಂಗವಿಕಲೆಯ ಮಹಿಳೆಗೆ ನಿವೇಶನ ಒದಗಿಸಿಕೊಡಲು ನಗರಸಭೆ ಹಾಗೂ ಸಚಿವರಿಗೆ ಮನವಿಗಳನ್ನಾ ಧರಿಸಿ ವರದಿಗಳು ಮಾಡಿದ್ದು,ವರದಿಗಳ ಫಲಸೃತಿ ಅಂಗವಿಕಲೆಗೆ ನಿವೇಶನ ಮತ್ತು ತಾತ್ಕಾಲಿಕ ಮನೆ ನಿರ್ಮಿಸಿ ಕೊಡಲಾಗಿದೆ. ದೋರನಹಳ್ಳಿಯ ಶತಾಯುಷಿ ವೃದ್ಧೆಗೆ ಮನೆ ನಿರ್ಮಾಣ ಸೇರಿದಂತೆ ಇವರ ಹತ್ತಾರು ವರದಿಗಳು ಮಾನವೀಯ ಆಧಾರಿತ ವರದಿಗಳಾಗಿದ್ದು ಹಲವಾರು ಬಡ ಕುಟುಂಬಗಳಿಗೆ ಆಶ್ರಯ ಒದಗಿಸಿಕೊಟ್ಟಿವೆ.ಕನ್ನಡಪ್ರಭದಲ್ಲಿ ಪ್ರಕಟವಾದ ವರದಿಗಳನ್ನಾಧರಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯಮಟ್ಟದ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಲ್ಲಯ್ಯ ಪೋಲಂಪಲ್ಲಿ ಅವರು ಜಿಲ್ಲಾಧ್ಯಕ್ಷರಾದ ಮಲ್ಲಪ್ಪ ಸಂಕೀನ್, ರಾಜ್ಯದ್ಯಕ್ಷ ಶಿವಾನಂದ ತಗಡೂರು, ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿ,ಎಲ್ಲಾ ತಾಲೂಕು ಸಮಿತಿ ಸದಸ್ಯರು ಸೇರಿದಂತೆ ಎಲ್ಲ ಪತ್ರಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.ಜಿಲ್ಲೆಯಾದ್ಯಂತ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಮಲ್ಲಯ್ಯ ಪೋಲಂಪಲ್ಲಿಯವರಿಗೆ ಅಭಿನಂದನೆಗಳ ಮಹಾಪುರ ಹರಿದು ಬಂದಿವೆ.