ಅಮೀನ್ ರೆಡ್ಡಿ ಶಾಸಕರಾಗುವುದು ಖಚಿತ!  150 ಸ್ಥಾನ ಗೆಲುವಿನೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಸರಕಾರ ರಚನೆ : ನಾರಾಯಣಲಾಲ್ ಪಂಚಾರ್ಯ

ಶಹಾಪುರ : ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿದ ಕಾಂಗ್ರೆಸ್ ಪಕ್ಷವನ್ನು 2014ರಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದಲ್ಲಿಯೂ ಕೂಡ ಗೆಲ್ಲಲಾರದಂತೆ ಕೇವಲ 40 ಸೀಟುಗಳು ಬರುವಂತಾಯಿತು.ಶಹಾಪುರದಲ್ಲಿ ಅಮೀನ್ ರೆಡ್ಡಿ ಯಾಳಗಿ ಶಾಸಕರಾಗುವುದು ಖಚಿತ! 150 ಸ್ಥಾನ ಗೆಲುವಿನೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಸರಕಾರ ರಚನೆ ಮಾಡಲಾಗುವುದು ಎಂದು ಬಿಜೆಪಿ ಪಕ್ಷದ ಯಾದಗಿರಿ ಜಿಲ್ಲಾ ಉಸ್ತುವಾರಿಗಳು ಹಾಗೂ ರಾಜಸ್ಥಾನದ ಲೋಕಸಭಾ ಸದಸ್ಯರಾದ ನಾರಾಯಣಲಾಲ್ ಪಂಚಾರ್ಯ ಹೇಳಿದರು.
****
“ನಾರಾಯಣಲಾಲ್ ಪಂಚಾರ್ಯ.ಬಿಜೆಪಿ ಪಕ್ಷದ ರಾಜಸ್ಥಾನದ ಲೋಕಸಭಾ ಸದಸ್ಯರು”
****
ತಾಲೂಕು ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದಲ್ಲಿಯೇ ದೇಶವನ್ನು ಉನ್ನತ ಸ್ಥಾನಕ್ಕೆ ಕರೆದೊಯ್ದಿದ್ದಾರೆ. ದೇಶದಲ್ಲಿ ಕಮಿಷನ್ ಪಕ್ಷದ ಸರ್ಕಾರವನ್ನು ತೆಗೆದಿದ್ದೇವೆ.

ಬಿಜೆಪಿ ಚುನಾವಣಾ ಉಸ್ತುವಾರಿ ಹೆಚ್ಸಿ ಪಾಟೀಲ್ ಮಾತನಾಡಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷ 75 ಹೊಸ ಮುಖಗಳಿಗೆ ಆದ್ಯತೆ ನೀಡಿದೆ.ಅದರಲ್ಲಿ ಅಮೀನ್ ರೆಡ್ಡಿ  ಒಬ್ಬರು. ವೈದ್ಯರು ಐಎಎಸ್ ಐಪಿಎಸ್ ಮತ್ತು ಪದವಿ ಪಡೆದವರಿಗೆ ಟಿಕೆಟ್ ನೀಡಲಾಗಿದೆ. ಕೇಂದ್ರ ಸರ್ಕಾರ 1060 ಕೋಟಿ ಅನುದಾನದಲ್ಲಿ ಬೀದರದಿಂದ ಶ್ರೀರಂಗಪಟ್ಟಣದವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು, ಐದುನೂರು ಕೋಟಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

ಶಹಾಪುರ ತಾಲೂಕಿನ ರಿಂಗ್ ರಸ್ತೆ, ಚೆನ್ನೈನಿಂದ ಸೂರತ್ ರೈಲ್ವೆ ಯೋಜನೆಗಳನ್ನು ಆರಂಭಿಸಲಾಗಿದೆ. 40 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಎರಡು ಮನೆತನಗಳ ಆಳ್ವಿಕೆ ಕೊನೆಗಾಣಿಸಿ ಶಹಪೂರು ಜನತೆ ಹೊಸಬರನ್ನು ಆಯ್ಕೆ ಮಾಡಲು ಬಯಸಿದ್ದಾರೆ ಎಂದು ಹೇಳಿದರು.
****
ಅಮೀನ್ ರೆಡ್ಡಿ ಯಾಳಗಿ ಶಹಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ”
****
ಬಿಜೆಪಿ ಅಭ್ಯರ್ಥಿ ಅಮ್ಮಿನರೆಡ್ಡಿ ಮಾತನಾಡಿ ಮುಂದಿನ ದಿನಗಳಲ್ಲಿ ದಬ್ಬಾಳಿಕೆ ಆಡಳಿತ ಶಹಾಪುರದಲ್ಲಿ ಅಂತ್ಯವಾಗಲಿದೆ.ಕ್ಷೇತ್ರದಲ್ಲಿ ನಡೆದ ಪ್ರತಿ ಕಾಮಗಾರಿಗಳು ಶಾಸಕರ ಸಂಬಂಧಿಗಳು ನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.ನಗರದಲ್ಲಿ ಉದ್ಯಾನವನವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಸ್ಮಶಾನಗಳಿಲ್ಲ. ಜೆಜೆಎಮ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಸರಕಾರದ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.
   ತೆಲಂಗಾಣ ಬಿಜೆಪಿ ಮುಖಂಡರಾದ ಕರಣಂ ಪರಿಣಿತಾ, ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ರಾಜುಗೌಡ ಉಕ್ಕಿನಾಳ, ನಗರ ಮಂಡಲ ಅಧ್ಯಕ್ಷರಾದ ದೇವೇಂದ್ರಪ್ಪ ಕೊನೇರಾ, ಹಿರಿಯ ಮುಖಂಡರಾದ ಡಾ. ಚಂದ್ರಶೇಖರ ಸುಬೇದಾರ, ರಾಜಶೇಖರ ಗೂಗಲ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಚಿಲ್ಲಾಳ ಪ್ರಧಾನ ಕಾರ್ಯದರ್ಶಿ ಗುರುಕಾಮ, ಹಿರಿಯ ಮುಖಂಡರಾದ ಬಸವರಾಜಪ್ಪ ವಿಭೂತಿಹಳ್ಳಿ, ಶಿವರಾಜ ದೇಶಮುಖ್, ಮರೆಪ್ಪ ಹಯ್ಯಾಳಕರ್, ರಾಘವೇಂದ್ರ ಯಕ್ಷಿಂತಿ, ನಗರಸಭೆ ಸದಸ್ಯರಾದ ಚಂದ್ರಶೇಖರ ಯಾಳಗಿ, ಸಂತೋಷ್ ಭಾಸ್ಕರ್ ಸೇರಿದಂತೆ ಇತರರು ಇದ್ದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಶಹಾಪುರದಲ್ಲಿ ಸ್ವಚ್ಛ ಶಹಪೂರಕ್ಕೆ ಮೊದಲ ಆದ್ಯತೆ ಕೊಡಲಾಗುವುದು. ಗುಡಿ ಕೈಗಾರಿಕೆಗಳಿಗೆ ಮಹತ್ವ, ಶೈಕ್ಷಣಿಕವಾಗಿ ಉನ್ನತ ವ್ಯಾಸಂಗಕ್ಕೆ ಆಧ್ಯತೆ,ಪ್ರತಿ ಗ್ರಾಮದಲ್ಲಿ ಎಲ್ಲಾ ಸಮುದಾಯಕ್ಕೂ ಸಮುದಾಯ ಭವನ ನಿರ್ಮಾಣ, ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣ, ಪ್ರತಿ ಗ್ರಾಮದಲ್ಲಿ ನಮ್ಮ ಕ್ಲಿನಿಕ್ ಆಸ್ಪತ್ರೆ ಸ್ಥಾಪನೆ, ನಗರದಲ್ಲಿ ಒಳ ಚರಂಡಿ ನಿರ್ಮಾಣ, ಕೆಂಭಾವಿಯನ್ನು ತಾಲೂಕು ಕೇಂದ್ರವನ್ನಾಗಿಸಲಾಗುವುದು. ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಸರಕಾರಿ ಜಾಗ ಮಂಜೂರು ಮಾಡಲಾಗುವುದು !
ಅಮೀನ್ ರೆಡ್ಡಿ ಯಾಳಗಿ
ಶಹಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

About The Author