ಶಾಸಕರ ಅಭಿಮಾನಿಗೆ ಅಪಘಾತ : ನಿತೀನರೆಡ್ಡಿ ಭೇಟಿ ಆರೋಗ್ಯ ವಿಚಾರಣೆ

ಶಹಾಪೂರ  : ಶಹಾಪೂರ ಪಟ್ಟಣದ ಯುವ ಕಾಂಗ್ರೆಸ್ ಮುಖಂಡರಾದ ನಿತಿನ್ ರೆಡ್ಡಿ ದರ್ಶನಾಪೂರವರಿಂದ ಇಂದು ಸರಕಾರಿ ಸಾರ್ವಜನಿಕ ಆಸ್ಪತ್ರೆ ಶಹಾಪೂರದಲ್ಲಿ  ಜೈನಾಪೂರ ಗ್ರಾಮದ ರೈತ  ಬಸವರಾಜ ಜೈನಾಪೂರ ಆಕಸ್ಮಿಕವಾಗಿ ಅನಾರೋಗ್ಯದಿಂದ ಚಿಕಿತ್ಸೆ ಪಡೆಯೆತ್ತಿರುವದು ತಿಳಿದು ತಕ್ಷಣ ಬೇಟಿ ನೀಡಿ
 ‌ ಆರೋಗ್ಯ ವಿಚಾರಿಸಿದರು. ಶಹಾಪೂರ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾದ ಶರಣಬಸಪ್ಪಗೌಡ ದರ್ಶನಾಪೂರ ಅವರ ಅಪ್ಪಟ ಅಭಿಮಾನಿಯಾದ ರೈತ ಬಸವರಾಜ ಜೈನಾಪೂರ ಅವರಿಗೆ  ಆತ್ಮಸ್ಥೈರ್ಯ ತುಂಬಿ ಸಂಬಂಧಪಟ್ಟ ವೈದ್ಯರಿಗೆ ಸಂಪರ್ಕ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದರು. ಸಂಜಿವರಡ್ಡಿ ಪಾಟೀಲ್, ರಾಜು ಕೆಂಭಾವಿ‌, ಪ್ರಕಾಶ ಹೊಸಮನಿ‌ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *