ಡಿಡಿಯು ಕಾಲೇಜಿಗೆ ಉತ್ತಮ ಫಲಿತಾಂಶ

ಶಹಾಪುರ : ತಾಲೂಕಿನ ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಡಿಡಿಯು ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 2022-23ನೇ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ. 193 ವಿದ್ಯಾರ್ಥಿಗಳಲ್ಲಿ 32 ಉನ್ನತ ಶ್ರೇಣಿ, 115 ಪ್ರಥಮ ಸ್ಥಾನ, 34 ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

ಸೌಜನ್ಯ ಎಂಬ ವಿದ್ಯಾರ್ಥಿನಿಯು 573(ಶೇ.95.5) ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶ್ವೇತ 567(ಶೇ.94.5), ಭಾಗ್ಯಶ್ರೀ 586(ಶೇ.94.33), ಭಾಗ್ಯ 566ಶೇ.(94.33),ಸಿಂಚನಾ 561(ಶೇ.93.5),ಮಿತ್ರ560(ಶೇ.93.33),ಆಕಾಶ 558(ಶೇ.93)ಮಿಜ್ಜಾಅಂಜುಮ್ 553(ಶೇ.92.16),ಸ್ವರೂಪ 548 (ಶೇ.91.33)
ಉತ್ತಮ ಫಲಿತಾಂಶ ಸಾಧಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಸಂಸ್ಥಾಪಕರಾದ ಡಾ. ಭೀಮಣ್ಣ ಮೇಟಿ ಕಾರ್ಯದರ್ಶಿಗಳಾದ ದೇವೇಂದ್ರಪ್ಪ ಮೇಟಿ ಪ್ರಾಂಶುಪಾಲರಾದ ಸುರೇಶ್ ಪತ್ತಾರ್ ಹಾಗೂ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *