ಡಾ.ಎಬಿ ಮಾಲಕರಡ್ಡಿ ಜೆಡಿ ಎಸ್‌ಗೆ : ಯಾದಗಿರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಸಂಭವ

ವಡಗೇರಾ : ಕಾಂಗ್ರೆಸ್ ಪಕ್ಷದಿಂದ ಡಾ. ಎಬಿ ಮಾಲಕರೆಡ್ಡಿ ಅವರು ಮಗಳಾದ ಡಾ. ಅನುರಾಧ ರವರಿಗೆ ಯಾದಗಿರಿ ಕ್ಷೇತ್ರದಲ್ಲಿ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ನಾಮಕೆವಾಸ್ತೆ ಜನತಾ ಸರ್ವೆ ಎನ್ನುವ ನೆಪದಲ್ಲಿ ಸರ್ವೇ ಮಾಡಿ ರಾಜಕೀಯ ಮುಖಂಡರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಯಶಸ್ವಿಯಾದರೆ ಎನ್ನುವ ಕೂಗು ಕ್ಷೇತ್ರದಲ್ಲಿ ಬಲವಾಗಿ ಕೇಳಿ ಬರುತ್ತಿದೆ.
ಖರ್ಗೆ ಕುಟುಂಬದ ಆಪ್ತರದ ಚೆನ್ನಾರೆಡ್ಡಿ ತುನ್ನೂರು ಅವರಿಗೆ ಟಿಕೆಟ್ ದೊರೆತ ಕಾರಣ ಮಾಲಕರೆಡ್ಡಿಯವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿ ಜೆಡಿಎಸ್ ಪಕ್ಷದಿಂದ ಬಿ ಫಾರ್ಮ್ ತರಲು ಯಶಸ್ವಿಯಾಗಿದ್ದಾರೆ.
ಜೆಡಿಎಸ್ ನಿಂದ ಡಾ. ಶರಣಬಸಪ್ಪ ಕಾಮರೆಡ್ಡಿ ಹಣಮೇಗೌಡ ಬಿರನಕಲ್ ಪ್ರಬಲ ಆಕಾಂಕ್ಷಿಗಳಾಗಿದ್ದರು. ಇವರಿಬ್ಬರ ಮನವೊಲಿಸಿ ಮಾಲಕರೆಡ್ಡಿ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರೂ ಮಾಲಕರೆಡಿಯವರಿಗೆ ಬೆಂಬಲ ಸೂಚಿಸುವರೊ ಎಂದು ಕಾದು ನೋಡಬೇಕಿದೆ
!
ಯಾದಗಿರಿಯಲ್ಲಿ ತ್ರಿಕೋನ ಸ್ಪರ್ಧೆ : 
ಕಾಂಗ್ರೆಸ್ ನಿಂದ ಚೆನ್ನಾರೆಡ್ಡಿ ಮುನ್ನೂರು, ಬಿಜೆಪಿಯಿಂದ ವೆಂಕಟರೆಡ್ಡಿ ಮುದ್ನಾಳ ಜೆಡಿಎಸ್ ದಿಂದ ಡಾ. ಮಾಲಕರೆಡ್ಡಿ ಅವರು ಸ್ಪರ್ಧೆಗಿಳಿದ ಕಾರಣ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತ. ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತರು ಮತ್ತು ಅಸಮಾಧಾನಿತರ ನಡೆ ನಿಗೂಢವಾಗಿದ್ದು, ಅವರ ನಡೆ ಯಾರ ಕಡೆ ಎನ್ನುವುದು ನೋಡಬೇಕಿದೆ.

About The Author