ಬಸವಂತಪುರ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ : ಬಡವರ ಏಳ್ಗೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ :  ಚೆನ್ನಾರೆಡ್ಡಿ ತುನ್ನೂರು

ವಡಗೇರಾ : ಬಿಜೆಪಿ ಪಕ್ಷದ ಕೇಂದ್ರ ಮತ್ತು ರಾಜ್ಯ ಸರಕಾರಗಳು ದಿನಬಳಕೆಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿ ಬಡವರನ್ನು ಶೋಷಣೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಿಯೋಜಿತ ಅಭ್ಯರ್ಥಿಯಾದ ಚನ್ನಾರೆಡ್ಡಿ ತುನ್ನೂರ್ ಹೇಳಿದರು.ಇಂದು ಬಸವಂತಪುರ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಡೀಸೆಲ್ ಪೆಟ್ರೋಲ್ ರೈತರ ರಸಗೊಬ್ಬರದ ಬೆಲೆಗಳನ್ನು ಏರಿಕೆ ಮಾಡಿವೆ. ಬಡವರ ಶೋಷಿತರ ಏಳ್ಗೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ, ಪದವೀಧರರಿಗೆ 3000 ಗೌರವ ಧನ, ಪ್ರತಿ ಮನೆಯ ಯಜಮಾನನಿಗೆ ತಿಂಗಳಿಗೆ 2000 ರೂ. ಉಚಿತವಾಗಿ ನೀಡುವುದರ ಜೊತೆಗೆ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡುವುದಾಗಿ ಬರವಸೆ ನೀಡಿದೆ ಎಂದು ತಿಳಿಸಿದರು.
   ರಾಜ್ಯ ಕಾಂಗ್ರೆಸ್ ಕಾರ್ಯ ಪ್ರಧಾನ ಕಾರ್ಯದರ್ಶಿಗಳಾದ ಮರಿಗೌಡ ಹುಲ್ಕಲ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಡಾ. ಭೀಮಣ್ಣ ಮೇಟಿ, ಸಿದ್ದಲಿಂಗಪ್ಪ ಸಾಹು ಹತ್ತಿಗೂಡೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮರಿಯಪ್ಪ ಬಿಳಾರ, ರಾಘವೇಂದ್ರ ಮಾನಸ್ಗಲ್, ಶರಣಪ್ಪ ದೇಸಾಯಿ, ಮಲ್ಲಿಕಾರ್ಜುನ ರೆಡ್ಡಿ ಬಿರನೂರು ಸಾಹೇಬರೆಡ್ಡಿ ಅನಕಸೂಗೂರು, ಮಲ್ಲನಗೌಡ ಹಾಗೂ ಬಸವಂತಪುರ ಗ್ರಾಮದ ಮುಖಂಡರಾದ ಬಸವರಾಜಪ್ಪಗೌಡ ದಳಪತಿ, ಚೆನ್ನಯ್ಯ ಸ್ವಾಮಿ ಭೀಮನಗೌಡ ಮರಿಗೌಡ ಕಲ್ಮಲ  ಮರೆಪ್ಪ ನಸಲಾಯಿ ಮಹಾದೇವಪ್ಪ ಅಚಿಕೇರಿ ನಿಂಗಪ್ಪ ರಂಗಣ್ಣ ದೊರೆ ಸೇರಿದಂತೆ ಹಲವು ಮುಖಂಡರು ಇದ್ದರು.

Leave a Reply

Your email address will not be published. Required fields are marked *