ವಡಗೇರಾ : ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಾಗಲೆಂದು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸರ್ಕಾರ ಎಲ್ಲಾ ಸೇವೆಗಳನ್ನು ಒದಗಿಸುತ್ತಿದೆ. ಆದರೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಕರ್ತವ್ಯ ನಿರ್ವಹಿಸದೆ ನಿರ್ಲಕ್ಷಿಸುತ್ತಿರುವುದು ದುರದೃಷ್ಟಕರ. ಶಹಾಪುರ ತಾಲೂಕಿನ ಮದ್ದರ್ಕಿ ಗ್ರಾಮದಲ್ಲಿನ ಬಾವಿಯ ನೀರು ಚರಂಡಿಯಾಗಿ ಮಾರ್ಪಟ್ಟಿದೆ. ಬಾವಿಯ ನೀರನ್ನು ಬಳಕೆ ಮಾಡದೆ ಬಿಡಲಾಗಿದೆ. ಸುಮಾರು ಎರಡು ನೂರು ವರ್ಷಗಳ ಇತಿಹಾಸವಿರುವ ಅಡ್ಡಗಾಲು ಬಾವಿಯೆಂದು ಕರೆಯಲ್ಲಡುವ ಬಾವಿಯನ್ನು ಗ್ರಾಮ ಪಂಚಾಯಿತಿಯ ನಿರ್ಲಕ್ಷವೆ ಇದಕ್ಕೆ ಮುಖ್ಯ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಬಾವಿಯ ನೀರನ್ನು ಸ್ವಚ್ಛಗೊಳಿಸಿದರೆ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ. ಗ್ರಾಮ ಪಂಚಾಯಿತಿಯ ಅಧಿಕಾರಿ ಮಲ್ಲಿಕಾರ್ಜುನ ವಗ್ಗರ್ ಗೆ ಹಲವಾರು ಬಾರಿ ಮನವಿ ಮಾಡಿದರು ಕ್ಯಾರೆ ಎನ್ನುತ್ತಿಲ್ಲ. ಗ್ರಾಮದಲ್ಲಿ ಪಕ್ಷ ರಾಜಕೀಯ ಗೊಂದಲದಿಂದ ಬಾವಿಯ ನೀರನ್ನು ನಿರ್ಲಕ್ಷಿಸಲಾಗಿದೆ. ಗ್ರಾಮದಲ್ಲಿ ನಳದ ನೀರು ಬರುತ್ತಿದ್ದು ಮೂರರಿಂದ ನಾಲ್ಕು ಕೊಡ ಮಾತ್ರ ಬರುತ್ತಿವೆ. ಯಾವುದಕ್ಕೆ ಸಾಲುತ್ತಿಲ್ಲ ಎಂದರು. ಸರಕಾರ ನೀರು ನಿರ್ವಹಣೆಗಾಗಿ ತನ್ನದೇ ಆದ ಅನುದಾನವನ್ನು ಮೀಸಲಿಟ್ಟಿರುತ್ತದೆ.ಅಧಿಕಾರಿಗಳು ಹಣವನ್ನು ಬಳಕೆ ಮಾಡದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.