ಅರಣ್ಯ ಇಲಾಖೆಯಲ್ಲಿ ಕೋಟಿ ಕೋಟಿ ಲೂಟಿ ಆರೋಪ::ತನಿಖೆ ನಡೆಸಿ ವಜಾಗೊಳಿಸಲು ಆಗ್ರಹ

ಶಹಾಪುರ:ತಾಲೂಕಿನ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ಕೈಚಳಕದಿಂದ ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ತನಿಖೆ ನಡೆಸಿ ವಜಾಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ವತಿಯಿಂದ ತಹಸಿಲ್ ಕಚೇರಿ ಮುಂದೆ ನಿರಂತರ ಧರಣಿ ಪ್ರತಿಭಟನೆ ನಡೆಸಿ ಸಹಾಯಕ ಅರಣ್ಯ ಸುರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು
ಸಂಘಟನೆ ಜಿಲ್ಲಾ ಉಸ್ತುವಾರಿ ಶರಣು ದೊರನಹಳ್ಳಿ ಮಾತನಾಡಿ, ಇಲಾಖೆಯಲ್ಲಿ ಹಿಂದೆ ಕಾರ್ಯ ನಿರ್ವಹಿಸಿದ ಅಧಿಕಾರಿಗಳಾದ ಅಸದ್ , ಡಿ.ಜಿ.ಸೋಮರಾಯ ಹಾಗೂ ಪ್ರಸ್ತುವಾಗಿರುವ ಜಯಶ್ರೀ ಸೇರಿ 2017 ರಿಂದ 2022 ವರೆಗೆ ಎಸ್.ಎಸ್.ಪಿ, ನರೇಗಾ, ವಸತಿ ಗೃಹ ಮತ್ತು ಕಚೇರಿ ನಿರ್ವಹಣೆ, ನರ್ಸರಿಯಲ್ಲಿ ಕಾರ್ಯ ನಿರ್ವಹಿಸುವ ಕೂಲಿ ಕಾರ್ಮಿಕರ ವೇತನ, ನಡುತೋಪು ಕಾವಲುಗಾರರ ವೇತನ ಸೇರಿದಂತೆ ಇತರ ಯೋಜನೆಯಡಿಯಲ್ಲಿ ತಮ್ಮ ಕೈಚಳಕ ಉಪಯೋಗಿಸಿ ಕೋಟ್ಯಾಂತರ ರೂಪಾಯಿ ಹಣ ಲೂಟಿ ಮಾಡಿದ್ದಾರೆ.
ಸರ್ಕಾರ ಅರಣ್ಯ ಅಭಿವೃದ್ಧಿಯಾದರೆ ಸಮೃದ್ಧವಾಗಿ ಮಳೆಯಾಗಿ ಎಲ್ಲ ರೈತರಿಗೂ ಅನುಕೂಲವಾಗುತ್ತದೆ ಹಾಗೂ ರಾಜ್ಯದಲ್ಲಿ ತಾಪಮಾನ ಇಳಿಕೆಯಾಗುತ್ತದೆ ಎಂಬ ಉದ್ದೇಶದಿಂದ್ದ ಕೋಟ್ಯಾಂತರ ರೂಪಾಯಿ ಖರ್ಚುಮಾಡುತ್ತಿದೆ ಆದರೆ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಳಾಗಿ ಮನ ಬಂದಂತೆ ಹಣ ಬಿಡುಗಡೆ ಮಾಡಿ ಭ್ರಷ್ಟಾಚಾರಕ್ಕೆ ಕೈ ಕುಲುಕುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣದಲ್ಲಿ ಈ ರೀತಿ ಭ್ರಷ್ಟಾಚಾರ ಏಸುವುದು ಖಂಡನೀಯ ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧ ಪಟ್ಟ ಅಧಿಕಾರಿಗಳು ಶೀಘ್ರ ವಿಶೇಷ ತನಿಖಾ ತಂಡ ರಚಿಸಿ ದಾಖಲೆಗಳನ್ನು ಪರಿಶೀಲಿಸಿ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಿವಕುಮಾರ್ ತಳವಾರ್, ಜಿಲ್ಲಾ ಸಂಚಾಲಕ ಶಿವು ದೋರನಹಳ್ಳಿ, ಸಂಘಟನಾ ಸಂಚಾಲಕ ಲಕ್ಷ್ಮಣ ಹಳಿಸಗರ್, ಬಲಭೀಮ ಬೇವಿನಹಳ್ಳಿ, ಸಿದ್ದು ಹಳಿಸಗರ್, ವೀರೇಶ್ ಕೊಂಕಲ್, ವಿಶ್ವ ನಾಟೇಕರ್, ಶೇಖರ್ ಬಡಿಗೇರ್, ಶರಣು ಹುರಸಗುಂಡಗಿ,  ಮಂಜು ದೋರನಹಳ್ಳಿ, ನಾಗೇಂದ್ರ ಅನವಾರ, ಸಾಯಬಣ್ಣ ಕೆ ಹೈಯ್ಯಾಳ, ಅಯ್ಯಪ್ಪ ಗೊಂದೆನೂರ, ಬಸ್ಸು ಚಿಪ್ಪರ, ಮರಿಲಿಂಗ, ನಿಂಗಣ್ಣ ದೋರನಹಳ್ಳಿ, ರಮೇಶ್ ಜಾರಕಿಹೊಳಿ, ಭೀಮರಾಯ ನಾಗನಟಗಿ, ಹುಸೇನ್ ಕೊಂಗಂಡಿ, ಮರಿಲಿಂಗ ದೋರನಹಳ್ಳಿ ಸೇರಿದಂತೆ ಇತರರು ಇದ್ದರು.

About The Author