ಮಹಾಶೈವ ಧರ್ಮಪೀಠದಲ್ಲಿ‌ ಮಹಾಶಿವರಾತ್ರಿ ದೀಪೋತ್ಸವ

ರಾಯಚೂರು; ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠ ಕಲಾಸದಲೂ ಮಹಾಶಿವರಾತ್ರಿಯ ಅಂಗವಾಗಿ 18.02.2023 ರ ಸಂಜೆ ದೀಪೋತ್ಸವ ನಡೆಯಿತು.

ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವ ಹಾಗೂ ವಿಶ್ವೇಶ್ವರಿ ದುರ್ಗಾದೇವಿಯರ ಸನ್ನಿಧಿಯಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ‘ಮಹಾಶಿವರಾತ್ರಿ ದೀಪೋತ್ಸವ’ಕ್ಕೆ ಚಾಲನೆ ನೀಡಿದರು.ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರ ಶಿವ,ವಿಶ್ವೇಶ್ವರಿ ದುರ್ಗಾದೇವಿಯರ ದೇವಸ್ಥಾನಗಳು,ಮಹಾಕಾಳಿ ಸನ್ನಿಧಿ,ಅಭಯ ಆಂಜನೇಯ ದೇವಸ್ಥಾನ ಮತ್ತು ಆದಿದುರ್ಗಾ ಮಂದಿರಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಮಹಾಶೈವ ಧರ್ಮಪೀಠದ ಭಕ್ತರುಗಳು ಲೋಕಾನುಗ್ರಹಕಾರಕ ಶಿವಬೆಳಕನ್ನು ಬೆಳಗಿಸಿದರು.