ಕುರುಗೋಡು :ಯುವ ಕುರುಬರ ಸಂಘದಿಂದ ತಾಲ್ಲೂಕು ಅಧ್ಯಕ್ಷರ ನೇಮಕ 

ಬಳ್ಳಾರಿ :ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ (ರಿ) ಬಳ್ಳಾರಿ ಕೇಂದ್ರ ಕಚೇರಿಯಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕು ಅಧ್ಯಕ್ಷರಾಗಿ ಕೆ. ಬಸವರಾಜ ಮತ್ತು ಗೌರವಾಧ್ಯಕ್ಷರಾಗಿ ಚಾಗನೂರು ದೊಡ್ಡ ಬಸಪ್ಪ ರವರನ್ನು ನೇಮಕ ಮಾಡಿ, ನೇಮಕಾತಿಯ ಆದೇಶ ಪತ್ರವನ್ನು ರಾಜ್ಯಾಧ್ಯಕ್ಷರಾದ ಬಿ. ಎಂ. ಪಾಟೀಲ್  ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಬಿ. ಎಂ. ಪಾಟೀಲ್ ಕುರುಬ ಸಮುದಾಯದ ಸಂಘಟನೆಯನ್ನು ಕುರುಗೋಡು ತಾಲೂಕಿನ ಎಲ್ಲಾ ಗ್ರಾಮದಲ್ಲಿ ಘಟಕವನ್ನು ಸ್ಥಾಪಿಸಬೇಕು.ಸಮುದಾಯಕ್ಕೆ ಸಂಬಂಧಿಸಿದಂತೆ ಯಾವುದೆ ತೊಂದರೆ ಬಂದಲ್ಲಿ ಸಂಘಟನೆವತಿಯಿಂದ ಅವರಿಗೆ ನೆರವಾಗಬೇಕೆಂದು ಕರೆ ನೀಡಿದರು.ನಮ್ಮ ಸಂಘಟನೆ ಇಡಿ ರಾಜ್ಯಾಧ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಇದ್ದು, ಕುರುಬರನ್ನು ST ಗೆ ಸೇರಿಸಬೇಕೆಂದು 2013ರಲ್ಲೇ ಪ್ರಥಮವಾಗಿ ಹೋರಾಟ ಪ್ರಾರಂಭ ಮಾಡಿದ್ದೂ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಅಂತಾ ಹೇಳೋಕೆ ಹೆಮ್ಮೆ ಅನ್ನಿಸುತ್ತೆದೆ. ಸಂಘಟನೆ ಕಾರ್ಯಕರ್ತರಿಗೆ ನೀವುಗಳು ಯಾವುದೇ ಸಮಯದಲ್ಲಿ ಫೋನ್ ಮಾಡಿದ್ರೆ ದಿನದ 24 ಗಂಟೆಗಳ ಸಮಯ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದರು.

ನಂತರ ಕುರುಗೋಡು ತಾಲೂಕು ಅಧ್ಯಕ್ಷರು ಹಾಗೂ ಗೌರವಾಧ್ಯಕ್ಷರು ಮಾತನಾಡಿ ನೀವು ನೀಡಿದ ಈ ಜವಾಬ್ದಾರಿಯನ್ನು ಸಮುದಾಯದ ಸಂಘಟನೆಯನ್ನು ಇಡಿ ರಾಜ್ಯದಲ್ಲಿ ತಮ್ಮ ಮಾತಿನಂತೆ ನಡೆದುಕೊಂಡು ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತೇವೆ.ತಮ್ಮ‌ಹೆಸರಿಗೆ ಯಾವುದೆ ಕಪ್ಪು ಚುಕ್ಕೆ ಬಾರದಂತೆ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ವಜ್ಜೀರಿ ಗಾದಿಲಿಂಗಪ್ಪ, ತೆಕ್ಕಲಕೋಟೆ ಬಸವರಾಜ, ಕೆ.ಕಲ್ಲೇಶ್, ಕೆ.ನಾಗರಾಜ, ಪೂಜಾರಿ ದೇವೇಂದ್ರ, ನೆಣಿಕೆ ಬಸವರಾಜ, ಕೆ.ದಮ್ಮೂರಪ್ಪ, ಕೆ.ಬಿ.ನಾಗರಾಜ, ಕಪ್ಪಗಲ್ಲು ನಾಗರಾಜ, ಮುಂಡ್ರಿಗಿ ಕಲ್ಲೇಶ್, ಕೆ.ರಾಮಾಂಜಿನಿ, ಗೆಣಿಕೆಹಾಳ್ ನಾಗಪ್ಪ, ಕೆ.ಕೃಷ್ಣ, ಆದಿಗೌಡ, ಜಗದೀಶ್, ತೆಕ್ಕಲಕೋಟೆ ಮಹೇಶ್, ಪೂಜಾರಿ ದಾರಪ್ಪ, ಬಟ್ಟೆಕಲ್ಲು ಆಗಲೂರಪ್ಪ, ಕೆ. ಮಂಜು, ಮಾರುತಿ, ಬಟ್ಟೆಕಲ್ಲು ರವಿ, ದಮ್ಮೂರಿ, ಹನುಮಂತ ಸೇರಿದಂತೆ ಇತರರು ಉಪಸ್ಥಿತರಿದ್ದರು.