ಮಹಾಶೈವ ಧರ್ಮಪೀಠದಲ್ಲಿ 35 ನೆಯ ‘ ಶಿವೋಪಶಮನ ಕಾರ್ಯ’ ಮಹಾಶೈವ ಧರ್ಮಪೀಠದಲ್ಲಿ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಫೆಬ್ರವರಿ ೧೨ ರಂದು 35 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ನೂರಾರು ಜನರಿಗೆ ಶಿವೋಪಶಮನ ಕರುಣಿಸಿದರು.

   ಗ್ರಾಮದ ಹೊರವಲಯದಲ್ಲಿರುವ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಶಿವನ ಆಜ್ಞೆಯಂತೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವ ಸನ್ನಿಧಿಯನ್ನರಸಿ ಬರುವವರ ಸಂಕಷ್ಟ- ಪೀಡೆ,ರೋಗ- ಬಾಧೆಗಳನ್ನು ಪರಿಹರಿಸುತ್ತಿದ್ದಾರೆ.ಭಕ್ತರ ಸರ್ವಸಮಸ್ಯೆಗಳಿಗೆ ಶ್ರೀಕ್ಷೇತ್ರ ಕೈಲಾಸದಲ್ಲಿ ಪರಿಹಾರವು ನಿಶ್ಚಿತವಾಗಿ ದೊರೆಯುತ್ತಿರುವುದರಿಂದ ವಾರದಿಂದ ವಾರಕ್ಕೆ ಶ್ರೀಕ್ಷೇತ್ರವನ್ನರಸಿ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

ಮಠದ ಭಕ್ತ ರಘುನಂದನ್ ಶ್ರೀ ಮಠಕ್ಕೆ 101 ನೀರು ಕುಡಿಯುವ ಗ್ಲಾಸ್ ಗಳನ್ನು ಪೂಜ್ಯರಿಗೆ ದೇಣಿಗೆ ನೀಡುತ್ತಿರುವುದು.

   ಕರ್ನಾಟದ ಎಲ್ಲ ಜಿಲ್ಲೆಗಳಿಂದ ಭಕ್ತರು ಬರುತ್ತಿರುವುದಲ್ಲದೆ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ,ಪೂನಾ ಮತ್ತು ಮುಂಬಯಿಗಳಿಂದಲೂ ಪರಿಹಾರ ನಿರೀಕ್ಷಿಸಿ ಜನರು ಬರುತ್ತಿದ್ದಾರೆ.ಮಹಾಶೈವ ಧರ್ಮಪೀಠದಲ್ಲಿ ‘ ಶಿವೋಪಶಮನ ಕಾರ್ಯ’ ಪ್ರಾರಂಭವಾಗಿ ಕೇವಲ ಮುವ್ವತ್ತೈದು ವಾರಗಳಾಗಿದ್ದು ಇಷ್ಟು ಕಡಿಮೆ ಅವಧಿಯಲ್ಲಿಯೇ ಕ್ಷೇತ್ರವು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಪ್ರಸಿದ್ಧಿಪಡೆದಿರುವುದು ಶಿವಲೀಲೆಯೇ ಎನ್ನುತ್ತಾರೆ ಮಹಾಶೈವ ಧರ್ಮಪೀಠದ ಭಕ್ತರುಗಳು.

” 18.02.2023 ರ ಶನಿವಾರದಂದು ಮಹಾಶೈವ ಧರ್ಮಪೀಠದಲ್ಲಿ ಮಹಾಶಿವರಾತ್ರಿಯನ್ನು ಆಚರಿಸುತ್ತಿದ್ದು ಅಹೋರಾತ್ರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಪ್ರಯುಕ್ತ ದಿನಾಂಕ 19.02.2023 ರ ರವಿವಾರದಂದು ‘ ಶಿವೋಪಶಮನ ಕಾರ್ಯ’ ಇರುವುದಿಲ್ಲ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ

About The Author