ಯಾದಗಿರಿ : ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ರಾಜ್ಯ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಿಖೀಲ್ ಆರ್ ಶಂಕರ್ ಇಂದು ಜಿಲ್ಲೆಯ ನಗರದ ವಾರ್ಡ್ ನಂಬರ್ 31ರ ಮಾತಾ ಮಾಣಿಕೇಶ್ವರಿ ಕಾಲೋನಿಯ ವೀರ ಆಂಜನೇಯ ದೇವಸ್ಥಾನದ ಅಭಿವೃದ್ಧಿಗೆ ಕಾಂಗ್ರೆಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ್.ವಿ. ಶಂಕರ್ ಒಂದು ಲಕ್ಷ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಠ ಮಂದಿರಗಳು ನೆಮ್ಮದಿ ನೀಡುವ ತಾಣಗಳಾಗಿವೆ. ಅವುಗಳ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿದಾಗ ಮಾತ್ರ ಬೆಳವಣಿಗೆ ಸಾಧ್ಯ. ನಾನು ಆಂಜನೇಯನ ಪರಮಭಕ್ತ. ಈ ದೇವಸ್ಥಾನದ ಕೆಲಸ ಕಾರ್ಯಗಳಿಗಾಗಿ ನಾನು ವೈಯಕ್ತಿಕ ದೇಣಿಗೇಯನ್ನು ನೀಡಿದ್ದೇನೆ. ನಾವು ದುಡಿದ ಹಣದಲ್ಲಿ ಸ್ವಲ್ಪವಾದರೂ ಸಾಮಾಜಿಕ ಧಾರ್ಮಿಕ ಕಾರ್ಯಗಳಿಗೆ ಬೆಂಬಲಿಸಿದಾಗ ಮಾತ್ರ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಕೂಡ ನಾನು ಈ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ. ಅಧ್ಯಕ್ಷರಾದ ವೀರೇಶ್ ಮಗ್ಗ, ಉಪಾಧ್ಯಕ್ಷರಾದ.ಕಾಂತಪ್ಪ ಮಗ್ಗ,ಸಿದ್ದರಾಮ, ಶರಣಪ್ಪ, ಸುಂದರೇಶ್, ಭಾನುಪ್ರಕಾಶ್, ವಿಜಯ ಬಾದೆಪೂರ, ರಾಕೇಶ, ಮೈಸೂರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
Post Views: 152