ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 32 ನೇ ಶಿವೋಪಶಮನ ಕಾರ್ಯ

ಜನೆವರಿ 22 ರ ರವಿವಾರದಂದು ಮಹಾಶೈವ ಧರ್ಮಪೀಠದಲ್ಲಿ 32 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಗಬ್ಬೂರು ಹಾಗೂ ಪರ ಊರುಗಳಿಂದ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ವಿಶೇಷವಾದ ಶಿವ ವಿಶ್ವೇಶ್ವರಾನುಗ್ರಹವನ್ನು ಕರುಣಿಸಿದರು.

ಕಳೆದ ಶಿವೋಪಶಮನ ಕಾರ್ಯಗಳಲ್ಲಿ ಶಿವೋಪಶಮನ ಪಡೆದಿದ್ದ ಮೂವರು ಪಾರ್ಶ್ವವಾಯು ಪೀಡಿತ ರೋಗಿಗಳು ಗುಣಮುಖರಾಗಿ ಶ್ರೀಕ್ಷೇತ್ರದ ಸನ್ನಿಧಿಗೆ ಬಂದಿದ್ದು ವಿಶೇಷವಾಗಿತ್ತು.ಪ್ರತಿ ರವಿವಾರದಂದು ಪಾರ್ಶ್ವವಾಯುಪೀಡಿತರು ಸೇರಿದಂತೆ ಅಸಾಧ್ಯರೋಗಪೀಡಿತರು ಶ್ರೀಕ್ಷೇತ್ರ ಕೈಲಾಸಕ್ಕೆ ಬಂದು ವಿಶ್ವೇಶ್ವರ ಶಿವನ ಕೃಪೆಯಿಂದ ಗುಣಮುಖರಾಗುತ್ತಿದ್ದಾರೆ.

ಇಂದಿನ ಶಿವೋಪಶಮನಕ್ಕೆ ಅರಕೇರಾದ ಬಳಿಯ ದ್ಯಾಮ್ಲಾ ನಾಯಕನ ತಾಂಡಾದ ವ್ಯಕ್ತಿ ಶೇಖರ ಎನ್ನುವ ಪಾರ್ಶ್ವವಾಯು ಪೀಡಿತ ವ್ಯಕ್ತಿ ಶಿವಾನುಗ್ರಹವನ್ನರಸಿ ಬಂದಿದ್ದರು.ಕೈಕಾಲುಗಳ ಸಂಪೂರ್ಣ ಸ್ವಾಧೀನ ಕಳೆದುಕೊಂಡು ಕಾರಿನಲ್ಲಿ ಕುಳಿತುಕೊಂಡೇ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಂದ ಶಿವೋಪಶಮನ ಪಡೆಯುವ ಪಾರ್ಶ್ವವಾಯು ಪೀಡಿತರು ಮೂರು ವಾರಗಳಲ್ಲಿಯೇ ಸಂಪೂರ್ಣವಾಗಿ ಗುಣಮುಖರಾಗುತ್ತಿರುವುದು ಮಹಾಶೈವಧರ್ಮಪೀಠದ ವಿಶೇಷವಾಗಿದೆ.

ಶಿವೋಪಮಶಮನ ಕಾರ್ಯಾರಂಭದ ಪೂರ್ವದಲ್ಲಿ ಪೀಠಾಧ್ಯಕ್ಷರು ಶ್ರೀಕ್ಷೇತ್ರ ಕೈಲಾಸದಲ್ಲಿ ಪ್ರಾರಂಭಗೊಂಡಿರುವ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ದೇವಸ್ಥಾನಗಳ ಕಳಶ ಸ್ಥಾಪನೆಯ ಕಾರ್ಯವನ್ನು ಪೂಜೆಸಲ್ಲಿಸಿ,ಶಿಲ್ಪಿ ರಂಗನಾಥ ಹಳ್ಳೂರ ಅವರಿಗೆ ಕಳಶದಂಡವನ್ನು ಹಸ್ತಾಂತರಿಸುವ ಮೂಲಕ ಸಾಂಗಗೊಳಿಸಿದರು. ಶಿವ ದುರ್ಗಾ ದೇವಸ್ಥಾನಗಳಿಗೆ ಕಳಶಗಳ ಸೇವೆ ವಹಿಸಿಕೊಂಡಿರುವ ಅತ್ತನೂರಿನ ದಿಡ್ಡಿ ಬಸವ ಅವರು ಕುಟುಂಬ ಸಮೇತರಾಗಿ ಕಾರ್ಯಕ್ರದಲ್ಲಿ ಪಾಲ್ಗೊಂಡು,ಪೀಠಾಧ್ಯಕ್ಷರ ಆಶೀರ್ವಾದವನ್ನು ಪಡೆದರು.ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ, ವಿವಿಧ ಸಮಿತಿಗಳ ಮುಖ್ಯಸ್ಥರುಗಳಾದ ವರದರಾಜ ಅಬ್ಕಾರಿ, ಗುರುಬಸವ ಹುರಕಡ್ಲಿ,ನಾಗರೆಡ್ಡಿ ಯಾದವ,ಬಾಬುಗೌಡ ಯಾದವ ಸುಲ್ತಾನಪುರ,ಚೆನ್ನಪ್ಪಗೌಡ ಮಾಲೀಪಾಟೀಲ, ಶಿವಯ್ಯ ಸ್ವಾಮಿ ಮಠಪತಿ, ರಘುನಂದನ್ ಪೂಜಾರಿ, ಮೃತ್ಯುಂಜಯ ಯಾದವ್,ಯಲ್ಲಪ್ಪ ಕರಿಗಾರ,ಶಿವಪುತ್ರ ಕರಿಗಾರ,ತಿಪ್ಪಯ್ಯ ಮತ್ತು ಭಕ್ತರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ.

About The Author