ಮಹಾಶೈವ ಧರ್ಮಪೀಠ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿ 31 ನೇ ‘ ಶಿವೋಪಶಮನ ಕಾರ್ಯ’

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜನೆವರಿ 08,2023 ರ ರವಿವಾರದಂದು 31 ನೇ ‘ ಶಿವೋಪಶಮನ ಕಾರ್ಯ’ ವು ನಡೆಯಿತು.

ಗಬ್ಬೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲದೆ ದೂರದ ಊರು,ಜಿಲ್ಲೆಗಳಿಂದ ಬಂದಿದ್ದ ಅಸಂಖ್ಯಾತ ಭಕ್ತರುಗಳಲ್ಲಿ ಮಹಾಶೈವಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಒಂದು ನೂರಾ ಎಂಟು ಜನ ಭಕ್ತರಿಗೆ ‘ ಶಿವೋಪಶಮನ’ ನೀಡಿದರು.ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಕುಳಿತು ಭಕ್ತರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯವೇ ಶಿವೋಪಶಮನ ಕಾರ್ಯವಾಗಿದ್ದು ಶಿವ ವಿಶ್ವೇಶ್ವರನ ಸನ್ನಿಧಿಯಲ್ಲಿ ಭಕ್ತರ ಸಂಕಟಗಳು ಕರಗಿ,ಇಷ್ಟಾರ್ಥಗಳು ಸಿದ್ಧಿಸುತ್ತಿವೆ.ವೈದ್ಯರುಗಳಿಂದ ವಾಸಿಯಾಗದ ರೋಗಗಳು ವಿಶ್ವೇಶ್ವರ ಸನ್ನಿಧಿಯಲ್ಲಿ ವಾಸಿಯಾಗುತ್ತಿರುವುದರಿಂದ ಪಾರ್ಶವಾಯು ಪೀಡಿತರುಗಳಂತಹ ಭಯಂಕಾರ ವ್ಯಾಧಿಪೀಡಿತರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಾಶೈವ ಧರ್ಮಪೀಠಕ್ಕೆ ಆಗಮಿಸುತ್ತಿದ್ದಾರೆ.

ಶಿವನ ಸನ್ನಿಧಿಯನ್ನರಸಿ ಬರುವವರ ಕಷ್ಟ- ಸಂಕಷ್ಟಗಳು ನಿವಾರಣೆಯಾಗಿ,ಭಕ್ತರ ಮನೋಭೀಷ್ಟಗಳು ಈಡೇರುತ್ತಿರುವದರಿಂದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸವು ‘ ಭೂಕೈಲಾಸ’ ವಾಗಿ ‘ ಧರೆಗಿಳಿದ ಕೈಲಾಸ’ ಎನ್ನುವ ಹಿರಿಮೆಯೊಂದಿಗೆ ಮೆರೆಯುತ್ತಿದೆ.

About The Author