ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತ ತೆರವು : ತೆರವಾದ ಸ್ಥಳದಲ್ಲಿ  ರಾಯಣ್ಣ ವೃತ್ತ ಪ್ರತಿಷ್ಠಾಪಿಸುವಂತೆ ಮನವಿ.

ವಡಗೇರಾ : ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಶ್ರಾವಣರು ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ವೃತ್ತ ತೆರವುಗೊಳಿಸಿದ್ದನ್ನು ಖಂಡಿಸಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಬೆಂಗಳೂರು ಘಟಕ ಮತ್ತು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿ.ಎಂ. ಪಾಟೀಲ್ ಬೆಂಗಳೂರು ಜಿಲ್ಲಾಧಿಕಾರಿಗಳಾದ ಕೆ.ಎ. ದಯಾನಂದರವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಬಿ ಎಂ ಪಾಟೀಲ್, ದೇಶಕ್ಕಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ ಮಹಾನ್ ವೀರ ಸಂಗೊಳ್ಳಿ ರಾಯಣ್ಣ ಒಂದು ಜಾತಿಗೆ ಸೀಮಿತವಾಗದ ಜಾತ್ಯಾತೀತ ವ್ಯಕ್ತಿ. ರಾಯಣ್ಣನ ವೃತ್ತ ತೆರವುಗೊಳಿಸಿರುವುದು ರಾಜ್ಯ ಮತ್ತು ರಾಷ್ಟ್ರಕ್ಕೆ ಅವಮಾನ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಶಾಸಕರು ರಾಜಕೀಯ ಮುಖಂಡರು ಜಾತಿಭೇದ ಧರ್ಮವನ್ನು ಲೆಕ್ಕಿಸದೆ ರಾಯಣ್ಣನ ವೃತ್ತವನ್ನು ಸ್ಥಾಪಿಸಬೇಕು ಎಂದು ಹೇಳಿದರು.

ಜಿಲ್ಲಾಡಲಿತ ಹಾಗೂ ತಾಲ್ಲೂಕು ಆಡಳಿತ ಮತ್ತು ಪೊಲೀಸ್ ವತಿಯಿಂದ ಹತ್ತಿಕ್ಕಿ ತೆರವುಗೊಳಿಸಲಾಗಿದೆ. ರಾಜಿಕೀಯ ಹುನ್ನಾರದಿಂದ ರಾಯಣ್ಣ ಅಭಿಮಾನಿಗಳಿಗೆ ಅಗೌರವ ತೋರಿದ್ದಾರೆ. ಸದ್ಯ ಈಗ ತೆರವುಗೊಳಿಸಿದ ಜಾಗದಲ್ಲೇ ರಾಯಣ್ಣನ ಪ್ರತಿಮೆ ಮತ್ತು ವೃತ್ತವನ್ನು ಸರ್ಕಾರದಿಂದ ಪ್ರತಿಷ್ಠಾಪನೆ ಮಾಡಬೇಕೆಂದು ಹೇಳಿದರು. ಬೆಂಗಳೂರು ನಗರಕ್ಕೆ ಹೊಸದಾಗಿ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡ ಕೆ. ಎ. ದಯಾನಂದರವರಿಗೆ ಬಿ. ಎಂ. ಪಾಟೀಲ್ ನೇತೃತ್ವದಲ್ಲಿ ಬಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಮಹಿಳಾ ಕಾರ್ಯಧ್ಯಕ್ಷರಾದ ಶ್ರೀಮತಿ ಟಿಜೆ ಮಂಜುಳಾ, ಬೆಂಗಳೂರು ಜಿಲ್ಲಾಧ್ಯಕ್ಷ ಉಮೇಶ್ ಮುತ್ತತಿ, ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ದೇವರಾಜ್, ಕಾರ್ಯಧ್ಯಕ್ಷ ಜಯಶಂಕರ್, ಪ್ರಧಾನ ಕಾರ್ಯದರ್ಶಿ ಸತೀಶ್, ಕಾರ್ಯದರ್ಶಿ ಬಚ್ಚನ್, ಶ್ರೀಧರ್, ಗಿರೀಶ್, ಉಪಾಧ್ಯಕ್ಷ ನಾಗರಾಜ್ ಮಾಲ್ಗತ್ತಿ, ಮಲ್ಲಪ್ಪ ವಗ್ಗರ್, ಲಕ್ಷ್ಮಿ, ಡಿಟಿ ರಮೇಶ್, ಶ್ರವಣೂರ್ ಗ್ರಾಮ ಪಂಚಾಯತ್ ಸದ್ಯಸ್ಯರು ಕುಮಾರ್, ಅಡ್ವೋಕೇಟ್ ಮಹೇಂದ್ರ, ಪ್ರಕಾಶ್, ಕಾರ್ಯಕರ್ತರಾದ ದರ್ಶನ್, ಗುರುಮೂರ್ತಿ,ಮುಂತಾದ ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author