ಮಹಾ ಪವಾಡ ಕ್ಷೇತ್ರ, ಶ್ರೀ ಕ್ಷೇತ್ರ ಮಹಾಶೈವ ಧರ್ಮಪೀಠ

ವರದಿ : ಬಸವರಾಜ ಕರೇಗಾರ

 

ಗಬ್ಬೂರು : ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠ ಸುಕ್ಷೇತ್ರ ಕೈಲಾಸವಿಂದು ಮಹಾ ಪವಾಡ ಶಕ್ತಿಪೀಠವಾಗುತ್ತಿದೆ. ಕ್ಷೇತ್ರದ ವಿಶ್ವೇಶ್ವರ ಮತ್ತು ವಿಶ್ವೇಶ್ವರಿ ದುರ್ಗಾಮಾತೆಯ ಅನುಗ್ರಹದಿಂದ ಮಹಾಶೈವ ಧರ್ಮಪೀಠದ ಪೀಠಾಧಿಪತಿಗಳಾದ ಮುಕ್ಕಣ್ಣ ಕರಿಗಾರ ರವರು ಪ್ರತಿ ರವಿವಾರ ನಡೆಸುತ್ತಿರುವ ಶಿವೋಪಶಮನ ಕಾರ್ಯಕ್ರಮದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

   ಮಹಾಶೈವ ಧರ್ಮಪೀಠದಲ್ಲಿ ಹಲವಾರು ಭಕ್ತರು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಶ್ರೀ ವಿಶ್ವೇಶ್ವರನ ಸನ್ನಿಧಿಗೆ ಬರುತ್ತಾರೆ. ಎಲ್ಲಾ ಭಕ್ತರ ಮೊರೆ ಆಲಿಸುವ ಪೀಠಾಧ್ಯಕ್ಷರು ಭಕ್ತರ ಹಲವು ಸಮಸ್ಯೆಗಳನ್ನು, ಖಾಯಿಲೆಗಳನ್ನು ಗುಣಪಡಿಸಿದ್ದುಂಟು. ವೈದ್ಯ ಲೋಕಕ್ಕೆ ಅಚ್ಚರಿ ಎಂಬುವಂತಹ ಕಾಯಿಲೆಗಳು ಗುಣವಾಗಿವೆ. ಮನೆಗೆ ಸಂಬಂಧಿಸಿದ ವೈಯಕ್ತಿಕ ಸಮಸ್ಯೆಗಳು, ಸಂತಾನ ಸಮಸ್ಯೆ,ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ. ಸುತ್ತಲಿನ ಗ್ರಾಮ, ಜಿಲ್ಲೆ, ಹೊರ ರಾಜ್ಯದಿಂದ ಭಕ್ತರು ಆಗಮಿಸುತ್ತಿದ್ದಾರೆ.

ಮಹಾಶೈವ ಧರ್ಮಪೀಠಕ್ಕೆ ಭಕ್ತರು ಹಲವು ಸಮಸ್ಯೆಗಳನ್ನು ತೆಗೆದುಕೊಂಡು ಬರುವವರು. ಸುಮಾರು 20 ವರ್ಷಕ್ಕಿಂತಲೂ ಹೆಚ್ಚು ದಿನಗಳ ಕಾಲ ಒಬ್ಬ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಳು. ಆಸ್ಪತ್ರೆ, ದೇವಸ್ಥಾನ, ದೇವರ ಹರಕೆ, ಮಸೀದಿಗಳಿಗೆ ಹೀಗೆ ಹಲವಾರು ಸ್ಥಳಗಳಿಗೆ ಭೇಟಿ ನೀಡಿದರೂ ಗುಣವಾಗಲಿಲ್ಲ. ಮಹಾಶೈವ ಧರ್ಮಪೀಠದಲ್ಲಿ ಮೂರು ವಾರದಲ್ಲಿಯೇ ಸಂಪೂರ್ಣವಾಗಿ ಮಾನಸಿಕ ಅಸ್ವಸ್ಥತೆಯಿಂದ ಮಹಿಳೆಯನ್ನು ಗುಣಪಡಿಸಲಾಗಿದೆ.

ವೈದ್ಯರಿಗೆ ನಿಲುಕದ ಹಲವು ಕಾಯಿಲೆಗಳನ್ನು ತಮ್ಮ ಪವಾಡದ ಮೂಲಕ ಮಹಾಶೈವ ಪೀಠಾಧ್ಯಕ್ಷರು ಗುಣಪಡಿಸಿದ್ದಾರೆ.ನೋವುಗಳು, ಸೊಂಟ ನೋವು, ಅಲರ್ಜಿ, ತಲೆನೋವು, ವೈಯಕ್ತಿಕ ಸಮಸ್ಯೆಗಳು, ಅಲರ್ಜಿ ಅಂತಹ ಹಲವು ಕಾಯಿಲೆಗಳನ್ನು ಗುಣಪಡಿಸಲಾಗಿದೆ. ಕೈಕಾಲು ಸ್ವಾಧೀನ ಕಳೆದುಕೊಂಡವರು ಗುಣಮುಖರಾಗಿ ಹೋಗಿದ್ದಾರೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಕ್ತರ ಸಮಸ್ಯೆಯನ್ನು ಆಲಿಸುವ ವಿಶ್ವೇಶ್ವರ ಮತ್ತು ವಿಶ್ವೇಶ್ವರ ದುರ್ಗೆಯ ಕೃಪೆಯಿಂದ ಪೀಠಾಧ್ಯಕ್ಷರು ಎಲ್ಲ ಭಕ್ತರ ಸಮಸ್ಯೆಗೆ ಪರಿಹಾರ ನೀಡುತ್ತಿದ್ದಾರೆ.

About The Author