ಒಂದು ಕೈ ಕಾಲಿನ ಸ್ವಾಧೀನ ಕಳೆದುಕೊಂಡ ವ್ಯಕ್ತಿ ಒಂದೇ ವಾರದಲ್ಲಿ ಮಹಾಶೈವಪೀಠದಲ್ಲಿ ಗುಣಮುಖ

ಗಬ್ಬೂರು : ಒಂದು ಕೈ ಮತ್ತು ಒಂದು ಕಾಲಿನ ಸ್ವಾಧೀನವನ್ನು ಕಳೆದುಕೊಂಡ ಗಬ್ಬೂರು ಗ್ರಾಮದ ಹುಲಿಗೆಪ್ಪ ಮಡಿವಾಳ ಎನ್ನುವ ವ್ಯಕ್ತಿಯು ಒಂದೇ ವಾರದೊಳಗೆ ಸಂಪೂರ್ಣವಾಗಿ ಪವಾಡ ಸದೃಶದಂತೆ ಗುಣಮುಖರಾಗಿರುವುದು ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿ ಮಾಡಿದೆ.

ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಹುಲಿಗೆಪ್ಪ ಮಡಿವಾಳ ಎನ್ನುವ ವ್ಯಕ್ತಿ ಗ್ರಾಮದಲ್ಲಿ ಪ್ರತಿ ರವಿವಾರದಂದು ಮಹಾಶೈವಪೀಠದಲ್ಲಿ ನಡೆಯುವ ಶಿವೋಪಶಮನ ಕಾರ್ಯಕ್ರಮದಲ್ಲಿ ಮಹಾಶೈವ ಪೀಠದ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಆಶೀರ್ವಾದ ಪಡೆದು ಅವರು ಹೇಳಿದ ಹಾಗೆ ಮಾಡಿದ ನಂತರ ಒಂದು ವಾರದೊಳಗೆ ಗುಣಮುಖನಾಗಿದ್ದಾನೆ.

ಈ ವ್ಯಕ್ತಿ ವೈದ್ಯಯ ಚಿಕಿತ್ಸೆ ಪಡೆದ ನಂತರ ಗುಣಮುಖವಾಗದ ಲಕ್ಷಣ ಕಂಡು ಬಾರದ ಕಾರಣ ಅವರ ಮನೆಯವರು ಮಹಾಶೈವ ಪೀಠಕ್ಕೆ ಬಂದು ಅಲ್ಲಿನ ಮಹಾಗುರುಗಳ ಅಪ್ಪಣೆಯಂತೆ ನಡೆದುಕೊಂಡು ಒಂದೇ ವಾರದಲ್ಲಿ ಪವಾಡ ಸದೃಶದಂತೆ ಗುಣಮುಖನಾಗಿದ್ದಾನೆ ಎನ್ನುತ್ತಾರೆ ಅವರ ಮನೆಯವರು.

ಪ್ರತಿ ರವಿವಾರ ಮಹಾಶೈವ ಪೀಠದಲ್ಲಿ ಇದೇ ರೀತಿ ಹಲವಾರು ಹಲವು ವರ್ಷಗಳಲ್ಲಿನ ಬಾಧಿತವಾದ ಕಾಯಿಲೆಗಳಿಂದ ಗುಣಮುಖರಾಗದೇ ಇರುವ ಹಲವು ಕಾಯಿಲೆಗಳನ್ನು ಗುಣಪಡಿಸಿಕೊಂಡು ತಮ್ಮ ಮನೆಗೆ ತೆರಳಿದ್ದಾರೆ ಎನ್ನುವುದನ್ನು ಮುಂದಿನ ಲೇಖನದಲ್ಲಿ ನೋಡೋಣ.

Leave a Reply

Your email address will not be published. Required fields are marked *