ಇಂದು ವಿಶ್ವ ಶೌಚಾಲಯ ದಿನಾಚರಣೆ ನಿಮಿತ್ತ ಈ ಲೇಖನ

ಶಹಾಪುರ:2013 ರಿಂದ ಪ್ರತಿ ವರ್ಷ 19-ನವೆಂಬರ್ ರಂದು ವಿಶ್ವ ಶೌಚಾಲಯ ದಿನಾಚರಣೆಯನ್ನು ಜಾಗತಿಕ ಮಟ್ಡದಲ್ಲಿ ಶೌಚಾಲಯ ದಿನಾಚರಣೆ ಮಾಡಲಾಗುತ್ತಿದೆ.ಇದರ ಉದ್ದೇಶ ಎಲ್ಲರಲ್ಲಿಯು ಶೌಚಾಲಯ ಬಳಕೆ, ನಿರ್ವಹಣೆಯ ಜಾಗೃತಿಯ ಮಟ್ಟವನ್ನು ಹೆಚ್ಚಿಸಿ ಸುರಕ್ಷಿತ ಶೌಚಾಲಯದ ವ್ಯವಸ್ಥೆ ಕಲ್ಪಿಸಿ 2030 ರೊಳಗಾಗಿ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯಲ್ಲಿ(SDG Goall 6th ) 6 ನೇ ಅಂಶ ( ಸುರಕ್ಷಿತ ನೀರು & ನೈರ್ಮಲ್ಯದ ವ್ಯವಸ್ಥೆ ) ಗುರಿ ತಲುಪಬೇಕಿದೆ. ಆಗಾಗಿ ಶೌಚಾಲಯ ದಿನಾಚರಣೆಯ ಪ್ರಯುಕ್ತ ಇಂತಹ ಮಹತ್ವವನ್ನು ಗ್ರಾಮಸ್ಥರಿಗೆ, ಸಾರ್ವಜನಿಕರಿಗೆ, ಮಕ್ಕಳಿಗೆ, ಯುವಕರಿಗೆ , ಮಹಿಳೆಯರಿಗೆ, ಚುನಾಯಿತ ಪ್ರತಿನಿದಿಗಳಿಗೆ ಜಾಗೃತಿ‌ ಮೂಡಿಸಬೇಕಿದೆ.

ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆಯಲ್ಲಿ, ಸಮುದಾಯಕ, ಶಾಲೆ, ಅಂಗನವಾಡಿ, ಕಚೇರಿ ಇತ್ಯಾದಿ ಸಾಂಸ್ಥಿಕ ಕೇಂದ್ರಗಳಲ್ಲಿ ಶೌಚಾಲಯಗಳನ್ನು ಸುವ್ಯವಸ್ಥಿವಾಗಿ ನಿರ್ಮಿಸುವುದು ಹಾಗೂ ನಿರ್ಮಿಸಿರುವ ಶೌಚಾಲಯಗಳನ್ನು ಸುರಕ್ಷಿತವಾಗಿ ಪ್ರತಿಯೊಬ್ಬರು ಪ್ರತಿ ನಿತ್ಯ ಶೌಚಾಲಯವನ್ನು ಬಳಸಿ, ಸುಚಿತ್ವದ ನಿರ್ವಹಣೆ ಮಾಡಿಕೊಳ್ಳವ ಅರಿವು ಪ್ರತಿಯೊಬ್ಬರಲ್ಲಿ ಬರಬೇಕಿದೆ ಹಾಗೂ ರೂಡಿಗತ ಇರುವ ಬಯಲು ಶೌಚದ ಅಭ್ಯಾಸವನ್ನು ಬಿಡಬೇಕು. ಅಂದಾಗ ನೈರ್ಮಲ್ಯದ ಗೌರವ ಹೆಚ್ಚುತ್ತದೆ. ಆಗ ಮಾತ್ರ ನೈರ್ಮಲ್ಯ ಸ್ಥಿತಿಯು ಸುಧಾರಿಸಲು ಸಾದ್ಯ.

ಪ್ರತಿ ನಿತ್ಯ ಮನುಷ್ಯರ ಬಳಕೆಯಿಂದ ಬೀಸಾಡುವ ವಸ್ತುಗಳನ್ನು ನಿರ್ವಹಣೆ ಮಾಡಲು *ಘನತ್ಯಾಜ್ಯ ನಿರ್ವಹಣೆ* (SWM) ಘಟಕಾಂಶ ಅನುಷ್ಠಾನ ಮಾಡುವವುದು ಬಚ್ಚಲ ನೀರು, ದಿನ ಬಳಕೆಯ ನೀರು, ಚರಂಡಿ ನೀರು ನಿರ್ವಹಣೆಗಾಗಿ *ಬೂದು ನೀರು ನಿರ್ವಹಣೆ*(LWM) ಎಂಬ ಘಟಕಾಂಶಗಳ ಮೂಲಕ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ( PWM), *ಋತುಚಕ್ರ ನಿರ್ವಹಣೆಯಿಂದ* ಉತ್ಪಾದಿಸದ ತ್ಯಾಜ್ಯ (MHM) ಹಾಗೂ ಶೌಚಾಲಯ ಬಳಕೆಯಿಂದ ಗುಂಡಿಯಲ್ಲಿರುವ *ಮಲತ್ಯಾಜ್ಯವನ್ನು* (FSM &FST ) ಸುರಕ್ಷಿತವಾಗಿ ನಿರ್ವಹಣೆ ಮಾಡುವುದು. ಒಟ್ಟಾರೆ ಈ ಎಲ್ಲಾ ಘಟಕಾಂಶಗಳನ್ನು ಅನುಷ್ಠಾನದಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯುತವಾಗಿ ಸಹಕರಿಸಿದಾಗ ಗ್ರಾಮೀಣ ಪ್ರದೇಶದಲ್ಲಿ ಒಟ್ಟಾರೆ ನೈರ್ಮಲ್ಯತೆಯಿಂದ (visual cleanliness) ಇರಲು ಸಾದ್ಯ. ಹಾಗಾಗಿ ಇಂದು ಶೌಚಾಲಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನಾವು ಈ ಯೋಜನೆಯ ಗುರಿ – ಉದ್ದೇಶಗಳ ಕುರಿತು ಗಂಭಿರವಾಗಿ ಯೋಚಿಸಿ ಸಹಕರಿಸಬೇಕಿದೆ.
ಶೌಚಾಲಯ ಬಳಕೆ & ನಿರ್ವಹಣೆಯ ಅಭ್ಯಾಸಗಳನ್ನು ಹೆಚ್ಚಿಸಲು ಇಲಾಖೆಯು *ಸ್ವಚ್ಛತಾ ಓಟ* ( Swachhata Run ) ಎಂಬ ಆಂದೋಲನವನ್ನು 19-11-2022 ರಿಂದ 23-01-2023 ರ ವರೆಗೆ ಹಮ್ಮಿಕೊಂಡಿದ್ದು, ದುರಸ್ತಿಯಲ್ಲಿರುವ ಶೌಚಾಲಯಗಳನ್ನು ಕಾರ್ಯತ್ಮಗೊಳಿಸಿ ಎರಡು ಗುಂಡಿಯ ಶೌಚಾಲಯಗಳನ್ನಾಗಿ ಪರಿವರ್ತಿಸಿ ನಿರಂತರ ಶೌಚಾಲಯ ಬಳಕೆಗೆ ಜಾಗೃತಿ ಮೂಡಿಸಲು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಹಲವು ಚಟುವಟಿಕೆ ಹಮ್ಮಿಕೊಳ್ಳಬೇಕಿದೆ.

ನೈರ್ಮಲ್ಯ ಸ್ಥಿತಿ ಸುದಾರಿಸಿದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಿ ಆರ್ಥಿಕತೆಯ ಹೊಡೆತವನ್ನು ತಪ್ಪಿಸಬಹುದು. ಸಮಾಜದಲ್ಲಿ ಗೌರವ ಹೆಚ್ಚಿಸುತ್ತದೆ. ಸ್ವಚ್ಛತೆ ಇದ್ದಲ್ಲಿ ಶುಭ್ರ ವಾತವರಣ ನಿರ್ಮಿಸಬಹುದು. ಪ್ರತಿಯೊಬ್ಬರಲ್ಲಿ ಮನವಿ. ಸ್ವಚ್ಛತೆ, ಶುಚಿತ್ವಕ್ಕೆ ಆದ್ಯತೆ ನೀಡಲು ಮನವಿ.

ಶಿವಕುಮಾರ ಬಿ
ಸ್ವಚ್ಛ ಭಾರತ ಮಿಷನ್ IEC
ಜಿಲ್ಲಾ ಸಮಾಲೋಚಕರು
ಜಿ.ಪಂ‌ಯಾದಗಿರಿ.

About The Author