ಶಹಾಪೂರ: ದಿ. ಅಚ್ಚಪ್ಪ ಗೌಡ ಸುಬೇದಾರ ರೂರಲ್ ಮತ್ತು ಅರ್ಬನ್ ಟ್ರಸ್ಟಿನ ಉಚಿತ ಆರೋಗ್ಯ ಚಕ್ರ ವಾಹನಗಳನ್ನು ಆರಂಭಿಸಿ ಒಂದು ವರ್ಷ ಪೂರೈಸಿದ್ದು, ಸತತವಾಗಿ ಉಚಿತ ತಪಾಸಣೆ ಮಾಡುವ ಮೂಲಕ ಬಡವರಿಗೆ ಗ್ರಾಮೀಣ ಪ್ರದೇಶದ ಜನರಿಗೆ ಬಹಳಷ್ಟು ಅನುಕೂಲವಾಗಿದೆ. ಈ ಉಚಿತ ಆರೋಗ್ಯ ಚಕ್ರದಲ್ಲಿ ನುರಿತ ವೈದ್ಯರು ಹಾಗೂ ಸಿಬ್ಬಂದಿಗಳು ಇಸಿಜಿ ಮತ್ತು ಆಕ್ಸಿಜನ್ ಔಷಧಿಗಳನ್ನು ಇಟ್ಟುಕೊಂಡು ಸದಾ ಬಡವರ ಸೇವೆಗೆ ಸದಾ ಸಿದ್ಧ ಎಂದು ಡಾ. ಚಂದ್ರಶೇಖರ ಸುಬೇದಾರ ಹೇಳಿದರು.ಪ್ರಾರಂಭವಾದಾಗಿನಿಂದ ಇಂದಿನವರೆಗೆ ಅಂದರೆ ಒಂದು ವರ್ಷದಿಂದ ಸುಮಾರು 45,000 ದಷ್ಟು ರೋಗಿಗಳಿಗೆ ಉಚಿತ ತಪಾಸಣೆ ಮಾಡಿ ಜೊತೆಗೆ ಉಚಿತ ಔಷಧಿಗಳನ್ನು ಕೊಡಲಾಗಿದೆ. ಇನ್ನು ಅನೇಕ ರೀತಿಯ ವಾಹನದಲ್ಲಿನ ಸೌಲಭ್ಯಗಳನ್ನು ನೀಡುತ್ತಾ ಸಾಗಿದೆ.ತಾಲೂಕಿನ ಪ್ರತಿ ಗ್ರಾಮಗಳಿಗೆ ಪ್ರತಿದಿನ ನುರಿತ ವೈದ್ಯರು ಹಾಗು ಸಿಬ್ಬಂದಿಗಳ ತಂಡ ಭೇಟಿ ನೀಡಿ ಆ ಗ್ರಾಮದ ಜನರಿಗೆ ಆರೋಗ್ಯ ವಿಚಾರಿಸಿ ಉಚಿತವಾದ ತಪಷಣೆ ಮಾಡಿ ಉಚಿತವಾಗಿ ಔಷಧವನ್ನು ನೀಡಿ ಉಪಚರಿಸುವ ಕೆಲಸ ಈ ಆರೋಗ್ಯ ಚಕ್ರ ವಾಹನಗಳು ಮಾಡುತ್ತಿವೆ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಕರಣ.ಡಾ. ಚಂದ್ರಶೇಖರ ಸುಬೇದಾರ ಮಾತನಾಡುತ್ತಾ, ಈ ಉಚಿತ ಆರೋಗ್ಯ ಚಕ್ರ ವಾಹನಗಳು ಸುಮಾರು 60 ಹಳ್ಳಿಗಳಿಗೆ ಭೇಟಿ ನೀಡಿವೆ. ಇನ್ನು ಮುಂದೆ ನಿರಂತರವಾಗಿ ಬಡವರ ಸೇವೆಯಲ್ಲಿ ನಿರತರಾಗಿ ಬಡವರ ಸೇವೆಗೆ ಸಿದ್ಧ. ಈ ಒಂದು ಉಚಿತ ಆರೋಗ್ಯ ತಪಾಸಣೆಯ ವಾಹನಗಳ ಕಾರ್ಯ ನಿಲ್ಲುವುದಿಲ್ಲ ಎಂದು ತಿಳಿಸಿದರು. ನಮ್ಮ ಟ್ರಸ್ಟ್ ನಿಂದ ರೋಗಿಗಳು ಗುಣಮುಖರಾಗಿದ್ದು ಕಂಡು ಟ್ರಸ್ಟ್ ಮುಖ್ಯಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ ಎಂದರು.ಪ್ರತಿಯೊಂದು ಗ್ರಾಮದಲ್ಲಿ ಉಚಿತ ಆರೋಗ್ಯ ಚಕ್ರ ವಾಹನಗಳು ಬಂದರೆ ಸ್ವಾಗತಿಸಿ ಬರಮಾಡಿಕೊಂಡಿದ್ದಾರೆ.ಗ್ರಾಮೀಣ ಜನತೆ. ಬಡ ರೋಗಿಗಳಂತೂ ಇವತ್ತು ನಮ್ಮೂರಿಗೆ ಆರೋಗ್ಯ ಚಕ್ರ ವಾಹನವು ಬರುತ್ತದೆ ಎಂದು ಕಾಯುವಂತ ಕೆಲಸ ಉಚಿತ ಆರೋಗ್ಯ ಚಕ್ರ ಮಾಡುತ್ತಿದೆ.
ಆರೋಗ್ಯ ಚಕ್ರ ವಾಹನಗಳಲ್ಲಿ ನುರಿತ ವೈದ್ಯರು ಹಾಗು ಸಿಬ್ಬಂದಿಗಳು ಆಕ್ಸಿಜನ್ ಮತ್ತು ಇಸಿಜಿ ಉಚಿತವಾದ ಔಷಧಿ ಉಪಚಾರ ಮಾಡುವುದು ದೊಡ್ಡ ಕಾರ್ಯ ಎಂದು ಪ್ರತಿ ಗ್ರಾಮದ ಜನರು ಅಭಿಪ್ರಾಯಪಡುತ್ತಿದ್ದಾರೆ. ಈ ಕಾರ್ಯ ಹೀಗೆ ಮುಂದೆ ನಿರಂತವಾಗಿರಲಿ ಎಂದು ಪ್ರತಿ ಬಡ ರೋಗಿಗಳ ಆಸೆಯಾಗಿದೆ . ಅದಕ್ಕಾಗಿ ನಾವು ಯಾವಾಗಲೂ ನಮ್ಮ ಸೇವೆ ನಿರಂತರವಾಗಿ ಮುಂದೆ ಸಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿ ವರ್ಗದವರು ಇದ್ದರು.
ನಮ್ಮ ಆರೋಗ್ಯ ಚಕ್ರವಾಹನವು ಸದಾ ಬಡವರ ಪರವಾಗಿ ಪ್ರತಿ ಗ್ರಾಮೀಣ ಪ್ರದೇಶದಲ್ಲಿಯೂ ನಿರಂತರವಾಗಿ ಮುಂದುವರೆಯುತ್ತದೆ.ಇದರಲ್ಲಿ ಯಾವುದೇ ಸಂಶಯ ಬೇಡ.ಮುಂದಿನ ದಿನಗಳಲ್ಲಿ ಜನಪ್ರತಿನಿಧಿಯಾಗಿ ಜನರಸೇವೆ ಮಾಡುವ ಬಯಕೆ ಇದೆ.ಅವಕಾಶ ಸಿಕ್ಕರೆ ಖಂಡಿತ ಜನರ ಸೇವೆಗೆ ಸಿದ್ಧ.
ಡಾ.ಚಂದ್ದಶೇಖದ ಸುಬೇದಾರ ಖ್ಯಾತ ವೈದ್ಯರು ಹಾಗೂ
ಬಿಜೆಪಿ ಪಕ್ಷದ ಹಿರಿಯ ಮುಖಂಡರು ಶಹಾಪುರ