ಶಹಾಪೂರ (ಕವಿಡೆಸ್ಕ):-ಯಾದಗಿರಿ ಜಿಲ್ಲೆಯು ಆಧ್ಯಾತ್ಮಿಕ ಶಕ್ತಿ ಕೇಂದ್ರ. ಇಲ್ಲಿ ಹಲವಾರು ಶರಣರು ಸಂತರು ಪವಾಡ ಪುರುಷರು ನೆಲೆಸಿದ ಸಗರನಾಡಿದು. ಆಧ್ಯಾತ್ಮಿಕ ಶಕ್ತಿಯನ್ನು ಪಡೆದುಕೊಂಡು ಈ ಭೂಮಿಯ ಮೇಲೆ ಹಲವಾರು ಪವಾಡಗಳನ್ನು ಮಾಡಿದ ಸಂತರ ನಾಡಿದು. ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬಸವಂತಪುರ ಗ್ರಾಮ ಪೂಜ್ಯಶ್ರೀ ಕರೆಗಾರ ನಿಂಗಯಜ್ಜ ಕೆಲವು ವರ್ಷಗಳ ಹಿಂದೆ ಸಾವಿರಾರು ಪವಾಡಗೈದ ಸಂತರು. ನಾಳೆ ಅವರ ಪುಣ್ಯಾರಾಧನೆ. ಬಸವಂತಪುರ ಗ್ರಾಮದಲ್ಲಿ ಪ್ರತಿವರ್ಷ ವಿಜಯದಶಮಿಯ ಹಬ್ಬದಂದು ಅವರ ಮನೆತನದವರು ಕರೆಗಾರರು. ನಿಂಗಯಜ್ಜನ ಪುಣ್ಯಾರಾಧನೆ ಮಾಡುತ್ತ ಬಂದಿದ್ದಾರೆ. ಸಾವಿರಾರು ಭಕ್ತವೃಂದವನ್ನು ಹೊಂದಿದ ಕರೆಗಾರ ನಿಂಗಯಜ್ಜ ಕರ್ನಾಟಕ ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಗೂ ಅವರ ಪವಾಡಗಳನ್ನು ಕಾಣುತ್ತೇವೆ. ಕರೇಗಾರ ನಿಂಗಯಜ್ಜ ಮಾನವ ಸ್ವರೂಪದ ದೇವತಾ ಪುರುಷರಾಗಿದ್ದರು. ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ನಿಂಗಯ್ಯಜ್ಜ ಬೇಡಿ ಬಂದವರಿಗೆ ವರಗಳನ್ನಿತ್ತ ಮಹಾಸಂತರು.
ದೀವಳಗುಡ್ಡ ಗ್ರಾಮದಲ್ಲಿರುವ ಕರೆಗಾರ ವಂಶದವರಾದ ಪವಾಡ ಪುರುಷ ನಿಂಗಯ್ಯ ಮುತ್ಯಾ ಆರಾಧನಾ ಕಾರ್ಯಕ್ರಮವಿಂದು. ಅಪಾರ ಭಕ್ತಸ್ತೋಮವನ್ನು ಹೊಂದಿದ ಕರೆಗಾರ ನಿಂಗಯ್ಯ ಮುತ್ಯಾ ಪವಾಡ ಪುರುಷರಾಗಿ ಪ್ರಸಿದ್ಧರಾಗಿದ್ದರು. ನಾಳೆ ಬಸವಂತಪುರ ಗ್ರಾಮದಲ್ಲಿ ಅಪಾರ ಭಕ್ತಸ್ತೋಮದೊಂದಿಗೆ ಅವರ ಆರಾಧನಾ ಕಾರ್ಯಕ್ರಮ ಜರುಗಲಿದ್ದು, ತನ್ನಿಮಿತ್ತ ಈ ಲೇಖನ.
ಪೂಜ್ಯ ಶ್ರೀ ಕರೆಗಾರ ನಿಂಗಯ್ಯ ಮುತ್ಯಾ ಮೂರ್ತಿ
“ದೀವಳಗುಡ್ಡದಲ್ಲಿ ನಿಂಗಯ್ಯ ಎನ್ನುವ ಪವಾಡ ಪುರುಷನ ಜನನ. ಆತನೇ ನಿಂಗಯ್ಯ ಮುತ್ಯ ಎಂದು ಕರೆಯುತ್ತಿದ್ದರು. ಆತನು ನುಡಿದದ್ದೆಲ್ಲ ನಿಜವಾಗುತ್ತಿತ್ತು.ತಮ್ಮ ವಂಶದವರಲ್ಲಿ ಮನಸ್ತಾಪವಾಗಿ ಬಸವಂತಪುರ ಗ್ರಾಮಕ್ಕೆ ಬಂದು ನೆಲೆಸುತ್ತಾನೆ.ಅಲ್ಲಿರುವ ಭಕ್ತರೆಲ್ಲರೂ ಮುತ್ಯನಿಗೆ ಉಳಿದುಕೊಳ್ಳಲು ಸ್ಥಳಾವಕಾಶ ನೀಡಿದರು.ನಿಂಗಯ್ಯ ಮುತ್ಯಾ ಹಯ್ಯಳ ಗ್ರಾಮದ ಹಯ್ಯಳ ಲಿಂಗೇಶ್ವರ ದೇವರ ಆರಾಧಕರೆಂದು ಹೇಳುತ್ತಾರೆ. ಲಿಂಗೇಶ್ವರನು ಇವರಿಗೆ ವರಪ್ರಸಾದವಾಗಿ ನಿಂತಿದ್ದಾನೆ ಎಂದು ಹೇಳುತ್ತಾರೆ ಗ್ರಾಮಸ್ಥರು.ಎಂತಹ ದುಷ್ಟ ಶಕ್ತಿಗಳನ್ನು ತಮ್ಮ ಪವಾಡದ ಮೂಲಕ ಎದುರಿಸಿ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು”
“ಕರೆಗಾರ ವಂಶದಲ್ಲಿ ಇವರು ಕೂಡ ಒಬ್ಬರು ಮಹಾನ್ ಶರಣರು. ವಡಗೇರ ತಾಲೂಕಿನ ಬಸವಂತಪುರ ಗ್ರಾಮದಲ್ಲಿ ನೆಲಸಿನಿಂತ ಕುಟುಂಬ ಕರೆಗಾರ ನಿಂಗಯ್ಯ ಮುತ್ಯಾರ ಕುಟುಂಬ.ಕರೆಗಾರ ಎಂದರೆ ಇವರ ವಂಶದ ಅಡ್ಡ ಹೆಸರಲ್ಲ. ಇವರಾಡಿದ ಮಾತುಗಳು ನಿಜವಾಗುವವು. ಇವರ ನಾಲಿಗೆಯ ಮೇಲೆ ಆಡಿಸುವ ಮಾತು ಶಿವನಾಡಿಸುವ ನುಡಿಗಳೆಂದು ಹೇಳುತ್ತಾರೆ ಗ್ರಾಮಸ್ಥರು. ಅದಕ್ಕಾಗಿಯೇ ಇವರ ಮನೆತನಕ್ಕೆ ಕರೇ ಎಂದರೆ ನಿಜವಾಡುವವರು ಕರೆಗಾರರು ಎನ್ನುವ ಹೆಸರು ಇಂದಿಗೂ ಚಾಲ್ತಿಯಲ್ಲಿದೆ. ಅಂದಿನಿಂದ ಕರೆಗಾರ ಮನೆತನದವರು ಎನ್ನುತ್ತಾರೆ”
ಮಾತೆ ಶ್ರೀ ಭೀಮವ್ವ ತಾಯಿ ದೇವಸ್ಥಾನ
ನಿಂಗಯ್ಯಜ್ಜ ನುಡಿದದ್ದೆಲ್ಲ ನಿಜವಾಗುತ್ತಿತ್ತು.ತಮ್ಮ ವಂಶದವರಲ್ಲಿ ಮನಸ್ತಾಪವಾಗಿ ಬಸವಂತಪುರ ಗ್ರಾಮಕ್ಕೆ ಬಂದು ನೆಲೆಸುತ್ತಾನೆ.ಅಲ್ಲಿರುವ ಭಕ್ತರೆಲ್ಲರೂ ಮುತ್ಯನಿಗೆ ಉಳಿದುಕೊಳ್ಳಲು ಸ್ಥಳಾವಕಾಶ ನೀಡಿದರು.ನಿಂಗಯ್ಯ ಮುತ್ಯಾ ಹಯ್ಯಳ ಗ್ರಾಮದ ಹಯ್ಯಳ ಲಿಂಗೇಶ್ವರ ದೇವರ ಆರಾಧಕರೆಂದು ಹೇಳುತ್ತಾರೆ. ಲಿಂಗೇಶ್ವರನು ಇವರಿಗೆ ವರಪ್ರಸಾದವಾಗಿ ನಿಂತಿದ್ದಾನೆ ಎಂದು ಹೇಳುತ್ತಾರೆ ಗ್ರಾಮಸ್ಥರು.
ಪ್ರಸ್ತುತ ಹೇಳಿಕೆ ಹೇಳುವ ಕರೇಗಾರ ನಿಂಗಯ್ಯ ಮುತ್ಯಾ.
ಬಸವಂತಪುರ ಗ್ರಾಮವು ನಿಂಗಯ್ಯ ಮುತ್ಯರಿಂದ ಸುಕ್ಷೇತ್ರವಾಗಿ ಬೆಳೆದಿದೆ. ಸುತ್ತಲಿನ ಗ್ರಾಮಸ್ಥರಿಗೆ ನೀಡುತ್ತಾ, ಭಕ್ತರಿಂದ 10 ಎಕರೆ ಭೂಮಿಯನ್ನು ದಾನವಾಗಿ ನೀಡಿದ್ದರು. ಎಂತಹ ದುಷ್ಟ ಶಕ್ತಿಗಳನ್ನು ತಮ್ಮ ಪವಾಡದ ಮೂಲಕ ಎದುರಿಸಿ ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು.
ಇಟಗಿ ಗ್ರಾಮದ ಭೀಮಾಂಬಿಕ ಮಾತೆಯ ಹಾಗೆ ಕೆಲವು ಜನರ ಮಾತು ಕೇಳದೆ ಮಹಾದುಷ್ಟ ಶಕ್ತಿಯನ್ನು ಎದುರಿಸಿ ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಅದೇ ರೀತಿಯಾಗಿ ನಿಂಗಯ್ಯ ಮುತ್ಯಾ ರವರು ಮಹಾ ದುಷ್ಟ ಶಕ್ತಿಯನ್ನು ಎದುರಿಸಿ ಲಿಂಗೈಕ್ಯರಾದರು. ಅವರ ನೆನಪಿಗಾಗಿ ಇಂದು ಭಕ್ತರೊಡನೆ ಅವರ ವಂಶಸ್ಥರಾದ ಚೆನ್ನಮ್ಮ ತಾಯಿ ಕರೇಗಾರ ನಿಂಗಯ್ಯ,ಅಯ್ಯಪ್ಪ ಸ್ವಾಮಿ, ನಿಂಗಯ್ಯ, ತಾಯಿ ಪಾರ್ವತಿಯವರು ಆರಾಧನೆ ಮಾಡಿ ಆತನ ಲಿಂಗೈಕ್ಯ ಸ್ಥಳದಲ್ಲಿ ಸುತ್ತಲಿನ ಗ್ರಾಮಸ್ಥರಿಗೆ ದಾಸೋಹ ಏರ್ಪಡಿಸುವರು.
ಭಕ್ತರು ಅಪಾರ ಪ್ರಮಾಣದಲ್ಲಿ ದವಸ ಧಾನ್ಯಗಳನ್ನು ನೀಡುತ್ತಾರೆ.ಗ್ರಾಮದೇವತೆಯಾದ ಮಾರಿಕಾಂಬಾ ದೇವಿಯ ದೇವಸ್ಥಾನ ಬಸವಂತಪುರ ಗ್ರಾಮದಲ್ಲಿ ಇಂದಿಗೂ ಪ್ರಸಿದ್ಧಿಯಾಗಿದೆ.ಶಕ್ತಿ ಸ್ಥಳವಾಗಿ ಮಾರ್ಪಟ್ಟಿದೆ. ಅಂತಹ ಮಾತೆಯ ಜೊತೆ ನಿಂಗಯ್ಯ ಮುತ್ಯಾ ಮಾತನಾಡುತ್ತಿದ್ದರು ಎನ್ನುವ ನಂಬಿಕೆ ಇಂದಿಗೂ ಗ್ರಾಮಸ್ಥರ ಹಿರಿಯರಲ್ಲಿದೆ. ಗ್ರಾಮದಲ್ಲಿ ಮುತ್ಯಾರವರು ಬರುವ ಸಂದರ್ಭದಲ್ಲಿ ವಿಷ ಜಂತುಗಳು ದಾರಿ ಬಿಡುತ್ತಿದ್ದವು ಎನ್ನುತ್ತಾರೆ ಗ್ರಾಮದ ಜನತೆ.
ಕರೆಗಾರರ ವಂಶಸ್ಥ ಅಯ್ಯಪ್ಪ ಸ್ವಾಮಿ
ಈ ಮನೆತನದವರನ್ನು ಮಾತನಾಡಿಸಲು ಇಂದಿಗೂ ಭಯಪಡುತ್ತಾರೆ. ಕಾರಣ ಇಷ್ಟೇ ಅವರಾಡಿದ ಮಾತು ನಿಜವಾಗುತ್ತದೆ ಎನ್ನುವ ಅಪಾರವಾದ ನಂಬಿಕೆ ಇನ್ನೂ ಗ್ರಾಮಸ್ಥರಲ್ಲಿ ಇದೆ. ಸ್ವತ:ತನ್ನ ಪತ್ನಿಗೆ ಗಂಡು ಸಂತಾನ ಭಾಗ್ಯ ನಿನಗಿಲ್ಲ ಗಂಡು ಸಂತಾನವಾದರೂ ಅದು ಉಳಿಯುವುದಿಲ್ಲ ಎಂದಿದ್ದರಂತೆ ನಿಂಗಯ್ಯ ಮುತ್ಯಾ. ಅದರಂತೆ ಇಬ್ಬರು ಹೆಣ್ಣು ಮಕ್ಕಳ ನಂತರ ಒಂದು ಗಂಡು ಮಗುವಿಗೆ ಜನನವಾಗುತ್ತದೆ. ಮನೆಯಲ್ಲಿ ಹುಟ್ಟಿದ ಸಂತಸದಲ್ಲಿರುವಾಗ ಗಂಡು ಮಗು ತೀರಿ ಹೋಗುತ್ತಾನೆ. ಅವರ ನುಡಿಗಳು ಅತ್ಯಂತ ಕಠೋರವಾಗಿದ್ದವು.
ಈ ವರ್ಷ ದಸರಾದಲ್ಲಿ ನಿಂಗಯ್ಯ ಮುತ್ಯಾರ ಆರಾಧನೆ ನಡೆಯುತ್ತದೆ. ಭಜನೆ ಮೂಲಕ ಅನ್ನ ಸಂತರ್ಪಣೆ ಕಾರ್ಯಕ್ರಮವು ಮುತ್ಯಾನ ಗುಡಿಯಲ್ಲಿ ನಡೆಯುತ್ತದೆ. ಅಂದಿನ ದಿನ ವರ್ಷಪೂರ್ತಿ ನಡೆಯುವ ಹೇಳಿಕೆಯನ್ನು ನಿಂಗಯ್ಯ ಮುತ್ಯಾ ವಂಶಸ್ಥರಾದ ಕರೆಗಾರ ನಿಂಗಯ್ಯ ಮುತ್ಯಾ ಮುಂದಿನ ವರ್ಷದ ಆಗುಹೋಗುಗಳ ಹೇಳಿಕೆಯನ್ನು ಹೇಳುತ್ತಾರೆ.