ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ : ಗ್ರಾಮಕ್ಕೆ ಬೇಕಾಗುವ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು :- ದರ್ಶನಾಪುರ

ಶಹಾಪುರ:- ನಾಗನಟಗಿ ಗ್ರಾಮಕ್ಕೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು. ಶಿಕ್ಷಣ ಅತಿ ಮುಖ್ಯ. ಇಲ್ಲಿರುವ ಮಕ್ಕಳಲ್ಲಿ ಎಂತಹ ಪ್ರತಿಭೆ ಅಡಗಿರುವುದು ಗೊತ್ತಾಗುವುದಿಲ್ಲ. ಇಂದಿನ ಮಕ್ಕಳು ದೇಶದ ಭವಿಷ್ಯ ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ತಾಲೂಕಿನ ನಾಗನಟಗಿ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ನಾಲ್ಕು ಶಾಲಾ ಕೊಠಡಿಗಳ ಉದ್ಘಾಟನೆ ಮತ್ತು ಇನ್ನೆರಡು ಕೊಠಡಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

     ಈಗಾಗಲೇ ಗಂಗನಾಳ ಗ್ರಾಮಕ್ಕೆ ಹೊಸದಾಗಿ ಪ್ರೌಢಶಾಲೆ ಮಂಜೂರಾಗಿದ್ದು, ಅಲ್ಲಿಯ ಶಾಲೆ ಕೊಠಡಿಗಳು ನಿರ್ಮಿಸಬೇಕು. ನಾಗನಟಗಿ ಗ್ರಾಮದ ಅಂಗನವಾಡಿ ಮತ್ತು ವಸತಿ ನಿಲಯಗಳಿಗೆ ಬೇಡಿಕೆ ಇದ್ದು, ಅದನ್ನು ಒದಗಿಸಿಕೊಡಲಾಗುವುದು ಎಂದು ಹೇಳಿದರು. ಗ್ರಾಮದ ಮಠಕ್ಕೆ ಹತ್ತು ಲಕ್ಷ ರೂಪಾಯಿ ಮಂಜೂರು ಮಾಡಲಾಗಿದ್ದು, ಈಗಾಗಲೇ ಮಠದ ಖಾತೆಗೆ ಐದು ಲಕ್ಷ ರೂಪಾಯಿ ನೀಡಲಾಗಿದೆ ಎಂದು ತಿಳಿಸಿದರು.ಸೈದಾಪುರ ಗ್ರಾಮದಲ್ಲಿ ಪ್ರಾಥಮಿಕ ಶಾಲೆಗೆ ಸ್ಥಳದ ಕೊರತೆ ಇದ್ದು, ಗ್ರಾಮದಲ್ಲಿರುವ ಸರಕಾರಿ ಜಾಗವನ್ನು ನೋಡಿ ಅಲ್ಲಿಯೇ ಶಾಲಾ ಕೊಠಡಿಗಳು ಸೇರಿದಂತೆ ಸುಸಜ್ಜಿತ ಶಾಲಾ ಕೊಠಡಿಗಳ ನಿರ್ಮಿಸಿ ಕೊಡಲಾಗುವುದು ಎಂದು ತಿಳಿಸಿದರು.

     ರಾಜ್ಯಸಭೆ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ಪರಿಶ್ರಮದಿಂದ 371 ಜೆ ಕಲಂ ಅಡಿಯಲ್ಲಿ ರಾಜ್ಯಕ್ಕೆ ವಿಶೇಷ ಅನುದಾನ ಮತ್ತು ಸ್ಥಾನಮಾನ ದೊರಕಿಸಿ ಕೊಟ್ಟಿದ್ದಾರೆ.ಅವರ ಕೊಡುಗೆ ಅಪಾರವಾದದ್ದು ಎಂದು ಖರ್ಗೆಯವರನ್ನು ಕೊಂಡಾಡಿದರು.ರಾಜ್ಯದಲ್ಲಿ ಶಿಕ್ಷಣ ಮತ್ತು  ಉದ್ಯೋಗದಲ್ಲಿ ಶೇ. 8ರಷ್ಟು ಮೀಸಲಾತಿ ಸಿಗುತ್ತಿದೆ. ಇದರಿಂದ ನಮ್ಮ ಭಾಗಧ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಐದು ವರ್ಷ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತ ಶ್ಲಾಘಿಸಿದರು.

    ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಮರಿಗೌಡ ಹುಲ್ಕಲ್, ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಸಲಾದಪುರ, ವಿನೋದ್ ಪಾಟೀಲ್, ಕಾಶಿರಾಜ್, ಮಲ್ಲಣ್ಣ ಕಾಂಗ್ರೆಸ್ ಮುಖಂಡರು,ತಿರುಪತಿ ಗೌಡ ಬಾಣತಿಹಾಳ ಶಾಂತಗೌಡ ನಾಗನಟಗಿ ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳಿ ನಿರ್ದೇಶಕರು ಮಲ್ಲಣ್ಣ ಕಾಂಗ್ರೆಸ್ ಮುಖಂಡರು, ದೇವೇಂದ್ರಪ್ಪ ಮೇಟಿ,ಯಂಕಣ್ಣ ಮೇಟಿ,ಶರಣಗೌಡ ಸೈದಾಪುರ, ನಿಂಗನಗೌಡ ದಳಪತಿ, ಮಾಳಪ್ಪ ಮಾಲೂರು, ಮಲ್ಲಿಕಾರ್ಜುನ್ ಮಕಾಸಿ, ಅಂಬರೀಶ ಮಕಾಸಿ, ಶಿವಪ್ಪ ಹೊಸಮನಿ, ಮಾನಶಪ್ಪ ದೇವದುರ್ಗ, ನಿಂಗಣ್ಣ ರಾಯಚೂರು, ಪಾಂಡುರಂಗ ದೇವದುರ್ಗ, ಮಲ್ಲಪ್ಪ ದೊಡ್ಡಮನಿ, ದಾವಲ್ ಸಾಬ್, ಯಲ್ಲಪ್ಪ ಹುಲ್ಕಲ್, ಭೀಮನಗೌಡ ಮಾಲಿ ಪಾಟೀಲ್,ಶಾಲಾ ಮುಖ್ಯೋಪಾಧ್ಯಾಯರು ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ನಾಗನಟಗಿ ಸೈದಾಪುರ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

 

” ಈಗಿನ ಬಿಜೆಪಿ ನೇತೃತ್ವದ ಸರ್ಕಾರ 40% ಕಮಿಷನ್ ಸರ್ಕಾರವಾಗಿದೆ.ಅಭಿವೃದ್ಧಿಗೆ ಗಮನಕೊಡದ ಸರ್ಕಾರವಿದು. ನಿಗಮಗಳಿಗೆ ನೀಡುವ ಎಲ್ಲಾ ಅನುದಾನಗಳನ್ನು ಸರಕಾರ ಸ್ಥಗಿತಗೊಳಿಸಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ. ಬಡವರ ಮತ್ತು ರೈತರಿಗೆ ಆಸರೆಯಾಗದ ಸರಕಾರವಿದು. ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ ರೈತರು. ರಸಗೊಬ್ಬರ ಬೆಲೆಗಳನ್ನು ಏರಿಕೆ ಮಾಡಿದ್ದಾರೆ.ಮುಂದಿನ ದಿನಗಳಲ್ಲಿ ಬಡವರ ಮತ್ತು ರೈತರ ಪರ ಇರುವ ಸರ್ಕಾರಕ್ಕೆ ಬೆಂಬಲಿಸಿ “

# ಶರಣಬಸಪ್ಪಗೌಡ ದರ್ಶನಾಪುರ
ಶಾಸಕರು ಶಹಾಪುರ

 

” ನಾಗನಟಗಿ ಗ್ರಾಮದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜೊತೆಗೆ ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ “

 

 

” ನಾಗನಟಗಿ ಗ್ರಾಮದಲ್ಲಿ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿನ ಅನುದಾನ “

* 2018-2019ನೇ ಸಾಲಿನ 40 ಲಕ್ಷ ಅನುದಾನದಲ್ಲಿ ನಾಲ್ಕು ಶಾಲಾ ಕೊಠಡಿಗಳ ನಿರ್ಮಾಣ.

* 2021-2022 ನೇ ಸಾಲಿನ 30 ಲಕ್ಷ ಅನುದಾನದಲ್ಲಿ ಎರಡು ದೊಡ್ಡ ಶಾಲಾ ಕೊಠಡಿಗಳ ಶಂಕುಸ್ಥಾಪನೆ.

* 38 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ.

* 20 ಲಕ್ಷ ರೂ. ಅನುದಾನದಲ್ಲಿ ವಾಲ್ಮೀಕಿ ಭವನ ನಿರ್ಮಾಣ.

* ಗ್ರಾಮದ ಗುಡಿಕಟ್ಟೆಗೆ ಸ್ವಂತ ಖರ್ಚಿನಲ್ಲಿ ಕಟ್ಟೆ ನಿರ್ಮಾಣ.

* 70ಲಕ್ಷ ಅನುದಾನದಲ್ಲಿ ಜೆಜೆಎಂ ಕಾಮಗಾರಿ ಪ್ರಗತಿಯಲ್ಲಿ.

* 60 ಲಕ್ಷ ಅನುದಾನದಲ್ಲಿ ಪ್ರೌಢಶಾಲೆಯ ನಾಲ್ಕು ಕೊಠಡಿಗಳ ನಿರ್ಮಾಣ.

* ಭೀಗುಡಿಯಿಂದ ಎಲ್ಲಮ್ಮನ ಗುಡಿಯವರೆಗೆ ಸುಸಜ್ಜಿತ ಡಾಂಬರೀಕರಣದ ರಸ್ತೆ ನಿರ್ಮಾಣ.

* ಗ್ರಾಮದಲ್ಲಿ ವಸತಿ ನಿಲಯ ಮಂಜೂರಾತಿ ಮತ್ತು ಕಟ್ಟಡಕ್ಕೆ ಅನುದಾನದ ಭರವಸೆ.

* 10 ಲಕ್ಷ ರೂಪಾಯಿ ಪೂಜ್ಯರ ಮಠಕ್ಕೆ ಅನುದಾನ ಬಿಡುಗಡೆ.

 

” ಬಾಣತಿಹಾಳ ಗ್ರಾಮದಲ್ಲಿ ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿನ ಅನುದಾನ “

 * 2020-21ನೇ ಸಾಲಿನ 30 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಶಂಕುಸ್ಥಾಪನೆ.

* 25 ಲಕ್ಷ ರೂ. ಗ್ರಾಮದ ನಾಲ್ಕು ಸಿಸಿ ರಸ್ತೆಗಳ ಶಂಕುಸ್ಥಾಪನೆ.

* 18 ಲಕ್ಷ ರೂ. ಅನುದಾನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ.

* 60 ಲಕ್ಷ ಅನುದಾನದಲ್ಲಿ ಜೆಜೆಎಮ್ ಕಾಮಗಾರಿ ಪ್ರಗತಿಯಲ್ಲಿ.

* ದರಿಯಾಪುರ ಕ್ರಾಸ್ ದಿಂದ ರಸ್ತಾಪುರ ಕ್ರಾಸ್ ವರೆಗೆ ಸುಸಜ್ಜಿತ ರಸ್ತೆ ಡಾಂಬರೀಕರಣ

* 10 ಲಕ್ಷ ಅನುದಾನದಲ್ಲಿ ಗ್ರಾಮದಲ್ಲಿ ತಡೆಗೋಡೆ ನಿರ್ಮಾಣ.

 

” ಸೈದಾಪುರ ಗ್ರಾಮದಲ್ಲಿ ಕೆಕೆಆರ್ಡಿಬಿ ಯೋಜನೆಯಲ್ಲಿನ ಅನುಧಾನ “

 * 2019-20 ನೇ ಸಾಲಿನಲ್ಲಿ 30 ಲಕ್ಷ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಅಡಿಗಲ್ಲು.

* 2022-23ನೇ ಸಾಲಿನ ಕಿರು ನೀರು ಸರಬರಾಜು ಕಾಮಗಾರಿ ಶಂಕುಸ್ಥಾಪನೆ.

* 75 ಲಕ್ಷ ಅನುದಾನದಲ್ಲಿ ಜೆಜೆಎಮ್ ಕಾಮಗಾರಿ ಪ್ರಗತಿಯಲ್ಲಿ.

* 20 ಲಕ್ಷ ಅನುದಾನದಲ್ಲಿ ಕೆಕೆಆರ್ಡಿಬಿಯಡಿ ಪೈಪ್ ಲೈನ್ ವ್ಯವಸ್ಥೆ.

* 50 ಲಕ್ಷ ಅನುದಾನದಲ್ಲಿ ಮುಖ್ಯ ರಸ್ತೆಯಲ್ಲಿ ಚರಂಡಿ ನಿರ್ಮಾಣ.

* 25 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆಗೆ ಶಂಕುಸ್ಥಾಪನೆ

 

 

About The Author