ಅಹಿಂದ ಬಲಗೊಳ್ಳುತ್ತಿದೆಯಾ ಯಾದಗಿರಿ ಜಿಲ್ಲೆಯಲ್ಲಿ

ಬಸವರಾಜ ಕರೆಗಾರ
basavarajkaregar@gmail.com

ಯಾದಗಿರಿ:ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು ಸುರಪುರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರೆ,ಇನ್ನುಳಿದ ಶಹಾಪುರ ಗುರುಮಿಟ್ಕಲ್ ಮತ್ತು ಯಾದಗಿರಿ ಸಾಮಾನ್ಯ ಕ್ಷೇತ್ರಗಳಾಗಿವೆ.4 ಕ್ಷೇತ್ರಗಳಲ್ಲಿ ಅಹಿಂದ ನಾಯಕರನ್ನು ಪದೇ ಪದೇ ಕಡೆಗಣಿಸಲಾಗುತ್ತಿದೆ ಎನ್ನುವ ಕೂಗು ಜಿಲ್ಲೆಯಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ಗುರುಮಿಟ್ಕಲ್ ಕ್ಷೇತ್ರದಲ್ಲಿ ಬಾಬುರಾವ್ ಚಿಂಚನ್ಸೂರ್ ಹೊರತುಪಡಿಸಿದರೆ ಇನ್ನುಳಿದ ಕ್ಷೇತ್ರಗಳಲ್ಲಿ ಅಹಿಂದ ನಾಯಕರಿಗೆ ಯಾವುದೇ ರಾಜಕೀಯ ಪಕ್ಷಗಳಿಂದ ಸ್ಥಾನಮಾನ ದೊರಕಿಲ್ಲ. ಎಲ್ಲಾ ಪಕ್ಷಗಳು ಕಡೆಗಣಿಸಿವೆ. ಇದನ್ನರಿತ ಅಹಿಂದ ಪ್ರಮುಖ ಮುಖಂಡರು ಸಭೆ ಸೇರಿ ಒಕ್ಕೂಟವನ್ನು ರಚಿಸಿಕೊಂಡಿದ್ದು,ಜಿಲ್ಲೆಯಾದ್ಯಂತ ನಾಲ್ಕು ಕ್ಷೇತ್ರಗಳಲ್ಲಿ ಅಹಿಂದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ.

ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷಗಳಲ್ಲಿ ಅಹಿಂದ ನಾಯಕರಿದ್ದು, ಪಕ್ಷದ ಟಿಕೆಟ್ಗಾಗಿ ಹೋರಾಟ ಮಾಡೋಣ. ಯಾವುದೇ ಅಹಿಂದ ನಾಯಕರಿಗೆ ಯಾವ ಪಕ್ಷದಲ್ಲಾದರೂ ಟಿಕೆಟ್ ದೊರೆತರೆ ಪಕ್ಷಾತೀತವಾಗಿ ನಾವೆಲ್ಲರೂ ಬೆಂಬಲ ಸೂಚಿಸೋಣ ಎನ್ನುವ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.

ಯಾದಗಿರಿ ಜಿಲ್ಲೆಯಾದ್ಯಂತ ಅಹಿಂದ ಸಂಘಟನೆಯ ಒಗ್ಗೂಡುವಿಕೆಯು ತಲ್ಲಣ ಉಂಟುಮಾಡಿದ್ದು, ಮುಂದಿನ ಚುನಾವಣೆ ಅತ್ಯಂತ ಬಿರುಸಿನಿಂದ ಕೂಡಿರಲಿದೆ. ಕಾಂಗ್ರೆಸ್ ಪಕ್ಷದಿಂದ ಡಾ. ಭೀಮಣ್ಣ ಮೇಟಿ, ಎಸಿ ಕಾಡ್ಲೂರು ಅಹಿಂದ ವರ್ಗದ ಪ್ರಬಲ ಟಿಕೆಟ್ ಆಕಾಂಕ್ಷಿಗಳು.

  ಇತ್ತೀಚಿಗೆ ಜೆಡಿಎಸ್ ಪಕ್ಷದಿಂದ ಹೊರಬಂದ ಹಣಮೇಗೌಡ ಬೀರನಕಲ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿದ್ಧಗೊಳ್ಳುತ್ತಿದ್ದಾರೆ. ಇನ್ನು ಬಿಜೆಪಿ ಪಕ್ಷದಲ್ಲಿ ಹೇಳಿಕೊಳ್ಳುವಂತಹ ಯಾವ ಅಹಿಂದ ನಾಯಕರಿಲ್ಲ ಎಂದು ಹೇಳಲಾಗುತ್ತಿದೆ. ಗುರುಮಿಟ್ಕಲ್ ಕ್ಷೇತ್ರದಲ್ಲಿ ಬಾಬುರಾವ್ ಚಿಂಚನಸೂರ,ಅನಪುರ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇದರಿಂದ 2023ರ ಚುನಾವಣೆ ಅಹಿಂದ್ ವರ್ಚಸ್ ಇತರರು ಎನ್ನುವ ಮಟ್ಟಕ್ಕೆ ಹೋಗಲಿದೆಯಾ ?,

ಅಹಿಂದವರ್ಗದವರನ್ನು ಬಹುಸಂಖ್ಯಾತರು ಮೊದಲಿನಿಂದಲೂ ಒಡೆದು ಆಳುವ ನೀತಿಯನ್ನು ಅನುಸರಿಸಿಕೊಂಡು ಬಂದಿರುವುದರಿಂದ, ನಮ್ಮಲ್ಲಿ ಒಗ್ಗಟ್ಟು ಕೊರತೆ ಇದೆ. ಇದನ್ನು ಮನಗಂಡ ನಾವೆಲ್ಲರೂ ಒಗ್ಗೂಡಿ ಹೋರಾಡೋಣ ಎಂದು ಒಂದುಗೂಡಿದ ಅಹಿಂದ ನಾಯಕರು ಮುಂದಿನ ಚುನಾವಣೆಯಲ್ಲಿ ಬಿರುಸಿನ ಸ್ಪರ್ಧೆ ಎದುರಿಸಲು ಸಿದ್ದರಾಗಿದ್ದಾರೆ.

About The Author