1.50 ಕೊ.ವೆಚ್ಚದ ಜಲಜೀವನ್ ಕಾಮಗಾರಿಗೆ ಶಂಕುಸ್ಥಾಪನೆ : ಉಸ್ತುವಾರಿ ಸಚಿವರು ನಾಪತ್ತೆ : ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ

ಶಹಾಪುರ: ಯಾದಗಿರಿ ಜಿಲ್ಲೆಯಾದ್ಯಂತ ಸುಮಾರು 15 ದಿನಗಳಿಂದಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಸರಕಾರ ಕಣ್ಣು ಮುಚ್ಚಿ ಕುಳಿತಿದೆ. ಬಡವರು ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತೋರಿಸುವ ನಿಟ್ಟಿನಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಇಟ್ಟುಕೊಂಡು ಜನರನ್ನು ಸೇರಿಸಿ ಸರ್ಕಾರದ ಸಾಧನೆಗಳನ್ನು ತೋರ್ಪಡಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಸರ್ಕಾರದ ವಿರುದ್ಧ ಕಿಡಿ ಕಾರಿದರು.ಹತ್ತಿಗೂಡೂರ ಗ್ರಾಮದಲ್ಲಿ 1. 50 ಲಕ್ಷ,ರೂ ವೆಚ್ಚದಲ್ಲಿ ಜಲಜೀವನ ಯೊಜನೆಯಡಿಯಲ್ಲಿ ಗ್ರಾಮದ 532 ಮನೆಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮಳೆಯಿಂದಾಗಿ ತಾಲೂಕು ಮತ್ತು ಜಿಲ್ಲೆಯಾದ್ಯಂತ ಮನೆಗಳು ಕುಸಿತಿದ್ದು ಬೆಳೆಗಳು ನಾಶವಾಗಿವೆ. ಹಲವಾರು ಕುಟುಂಬಗಳು ಬೀದಿ ಪಾಲಾಗಿವೆ. ಉಸ್ತುವಾರಿ ಸಚಿವರು ಕೂಡ ಜಿಲ್ಲೆಯ ಕಡೆಗೆ ಕಣ್ಣಿತ್ತಿ ನೋಡುತ್ತಿಲ್ಲ ಎಂದು ಉಸ್ತುವಾರಿ ಸಚಿವರ ವಿರುದ್ಧ ಹರಿಹಾಯ್ದರು.ಆಸ್ಪತ್ರೆ, ಶಾಲಾ ಕೊಣೆಗಳು, ಕಾಂಪೌಂಡ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.75 ಲಕ್ಷ,ರೂ ವೆಚ್ಚದಲ್ಲಿ ಗ್ರಾಮವಿಕಾಸ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು,ಗ್ರಾಮದಲ್ಲಿ ಚರಂಡಿ ಮತ್ತು ರಸ್ತೆಗಳ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 30 ಲಕ್ಷ ಅನುದಾನ ಮಂಜೂರಿ ಮಾಡಲಾಗಿದೆ. ಡಾ, ಬಾಬುಜಗಜೀವನರಾಂ  ಭವನ ನಿರ್ಮಾಣಕ್ಕಾಗಿ 10 ಲಕ್ಷ. ಮಸೀದಿಗೆ ಕಂಪೌಂಡಗೆ ಮತ್ತು ಅತ್ತ ನೂರ ಕ್ಯಾಂಪ್ ನವರೆಗೆ ಪೈಪಲೈನ, 5 ಶಾಲಾ ಕೊಣೆಗಳ ಕಾಮಗಾರಿಗಳನ್ನು ಪೂರ್ಣವಾಗಿವೆ. ಇನ್ನೂ 15 ದಿನಗಳಲ್ಲಿ ಕೆಕೆ ಆರ್,ಡಿ,ಬಿ ಅನುಧಾನದಲ್ಲಿ 25 ಲಕ್ಷ,ರೂ ಸಹ ಪ್ರಸ್ತಾವನೆ ಸಲ್ಲಿಸಲಾಗಿದೆ  ಎಂದು ತಿಳಿಸಿದರು.

ಸರ್ಕಾರದಿಂದ ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ ಅನ್ಯಾಯ

ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ. ಸ್ಮಾಟ್ ಕ್ಲಾಸ್ ನಡೆಸಲು 21 ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 63 ಕೊಟಿ ರೂ ನೀಡಿದ ಬಿಜೆಪಿ ಸರ್ಕಾರ ಕಾಂಗ್ರೆಸ್ ಶಾಸಕ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಕುರಿತು ಮಾಜಿ ಮುಖ್ಯಮಂತ್ರಿಯವರು ಪ್ರತಿದ್ವನಿಸಿದ ಹಿನ್ನಲೆಯಲ್ಲಿ ಪುನಃ 19 ಶಾಸಕರಗೆ ತಲಾ 1 ಕೊಟಿ ಅನುಧಾನ ನೀಡಿದ್ದಾರೆ. ವಿಧ್ಯಾಬ್ಯಾಸದಲ್ಲೂ ತಾರತಮ್ಯ ನೀತಿ ಅನುಸರಿಸಿದ ರಾಜ್ಯ ಸರ್ಕಾರ ಮಕ್ಕಳ ಶಿಕ್ಷಣಕ್ಕೂ ರಾಜಕೀಯ ಬಣ್ಣ  ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾ,ಪಂ, ಅಧ್ಯಕ್ಷರು ಗ್ರಾ,ಪಂ, ಉಪಾಧ್ಯಕ್ಷರು, ಕಾಂಗ್ರೆಸ್ ಅಧ್ಯಕ್ಷರಾದ ಮರಿಗೌಡ ಹುಲಕಲ್ ಹಾಗೂ ಶಿವಮಾತಂಪ್ಪ ಚಂದಾಪುರ.ಜಿ,ಪಂ, ಮಾಜಿ ಸದಸ್ಯರಾದ ಸಿದ್ದಲಿಂಗರಡ್ಡಿ ಸಾಹು  ಬಸವಂತರಡ್ಡಿ ಸಾಹು  ಮಲ್ಲಯ್ಯ ಹೊಸಮನಿ ಎಇಇ ರಾಹುಲ್ ಕಾಂಬಳೆ. ಜೆಇ ಚೆನ್ನವೀರಯ್ಯ ಅಭಿವೃದ್ದಿ ಅಧಿಕಾರಿ ಅಕ್ಕನಾಗಮ್ಮ ಸೇರಿದಂತೆ ಗ್ರಾಮದ ಇತರ ಮುಖಂಡರು ಉಪಸ್ಥಿತರಿದ್ದರು. ಶಾಸಕರ ಅಭಿವೃದ್ಧಿ ಕಾರ್ಯಗಳು ಮೆಚ್ಚಿ ಹಾಗೂ  ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳ ಮೇರೆಗೆ ಅಪಾರ ಜನಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಧ್ವಜ ಕೊಡುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇಪ೯ಡೆಗೊಳಿಸಲಾಯಿತು.

ಬ್ರಷ್ಟಾಚಾರವೆಂಬುದು ಬಿಜೆಪಿಯಲ್ಲಿ ಹುಟ್ಟಿನಿಂದ ಬಂದಿದೆ. ಇದೊಂದು ಭ್ರಷ್ಟ ಸರ್ಕಾರವಾಗಿದ್ದು, ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಹಣದ ಆಮಿಷ ತೊರಿಸಿ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸಿಕೊಂಡು ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ್ದಾರೆ.ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಬಡವರಿಗೆ ಪ್ರಾರಂಭದಲ್ಲಿ ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಕೊಡುತ್ತಿರುವುದು ಇಂದು 5 ಕೆಜಿ ಅಕ್ಕಿಗೆ ಇಳಿಕೆಯಾಗಿದೆ.ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವರು.

 

ಶರಣಬಸಪ್ಪಗೌಡ ದರ್ಶಾನಪುರ ಶಾಸಕರು ಶಹಪುರ

ಕಾಮಗಾರಿ ವಿವರ

* ಗ್ರಾಮದಲ್ಲಿ 1.50 ಲಕ್ಷ,ರೂ ವೆಚ್ಚದಲ್ಲಿ ಜಲಜೀವನ ಮಿಷನ ಗ್ರಾಮದ 532 ಮನೆಗಳಿಗೆ ಕುಡಿಯುವ ನೀರು ಪೂರೈಕೆ ಕಾಮಗಾರಿಗೆ ಶಂಕುಸ್ಥಾಪನೆ.
* 75 ಲಕ್ಷ,ರೂ ವೆಚ್ಚದಲ್ಲಿ ಗ್ರಾಮವಿಕಾಸ ಯೋಜನೆ.
* ಹೆಚ್ಚುವರಿಯಾಗಿ 30 ಲಕ್ಷ ಅನುದಾನ ಮಂಜೂರು.
* ಡಾ, ಬಾಬುಜಗಜೀವನರಾಂ  ಭವನ ನಿರ್ಮಾಣಕ್ಕಾಗಿ 10 ಲಕ್ಷ. ಮಂಜೂರು.
* ಕೆಕೆಆರ್ಡಿಬಿಯಿಂಧ 25 ಲಕ್ಷ ಪ್ರಸ್ತಾವನೆ ಸಲ್ಲಿಕೆ. 
* ಮಸೀದಿಯ ಕಾಂಪೌಂಡ, ಅತ್ತನೂರ ಕ್ಯಾಂಪ್ ನವರೆಗೆ ಪೈಪಲೈನ ನಿರ್ಮಾಣ.
* ಐದು ಶಾಲಾ ಕೊಣೆಗಳ ಕಾಮಗಾರಿಗಳನ್ನು ಪೂರ್ಣ
* ಸ್ಮಾಟ್ ಕ್ಲಾಸ್ ನಡೆಸಲು 1 ಕೊಟಿ ಅನುಧಾನ.

About The Author