ಮೇಲುಗಿರಿ ಪರ್ವತದಲ್ಲಿ ಭಜನಾ ಕಾರ್ಯಕ್ರಮ

ಶಹಾಪೂರ: ತಾಲೂಕಿನ ಸುಕ್ಷೇತ್ರ ಮೇಲುಗಿರಿ ಪರ್ವತ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಬೆಟ್ಟ ಶಹಪುರದಲ್ಲಿ ಹಲವು ಕಾರ್ಯಕ್ರಮಗಳು
ಶನಿವಾರದಂದು ಜರುಗಲಿದ್ದು ರಾತ್ರಿ ಭಜನಾ ಕಾರ್ಯಕ್ರಮವಿದ್ದು ಸಮಸ್ತ ಸಗರ ನಾಡಿನ ಭಕ್ತರು ಪಾಲ್ಗೊಂಡು ಈ ಭಜನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.ರವಿವಾರ ದಿನಾಂಕ 04/09/2022 ರಂದು ಮುಂಜಾನೆ 6:30 ಕ್ಕೆ ಸಾಕ್ಷಿ ಗಣೇಶನಿಗೆ ಅಭಿಷೇಕ, 8:00 ಗಂಟೆಗೆ ಮೇಲುಗಿರಿ ಶ್ರೀ ಮಲ್ಲಿಕಾರ್ಜುನ ಪವಿತ್ರ ಲಿಂಗಕ್ಕೆ ಮಹಾಭಿಷೇಕ, ಬಿಲ್ವಾರ್ಚನೆ ನೆರವೇರುವುದು. ಸಮಸ್ತ ಭಕ್ತರು ಪಾಲ್ಗೊಂಡು ಕ್ಷೇತ್ರದೊಡೆಯ ಶ್ರೀ ಮಲ್ಲಿಕಾರ್ಜುನ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ನಂತರ ಶಹಾಪುರ ತಾಲೂಕಿನ ನಂದಿಹಳ್ಳಿ ಗ್ರಾಮದ ಶ್ರೀ ಬಂಡೆ ಗುರುಸ್ವಾಮಿ ಹಿರೇಮಠ ಸಮಾಜ ಸೇವೆಗೆ ಡಾಕ್ಟರೇಟ್ ಪದವಿ ಪಡೆದಿದ್ದು, ಶ್ರೀ ಮೇಲಗಿರಿ ಕಮಿಟಿ ವತಿಯಿಂದ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲಾ ಸದ್ಭಕ್ತರಿಗೆ ಪ್ರಸಾದ ಸೇವೆ ಇರುತ್ತದೆ.