ಹಯ್ಯಳಲಿಂಗೇಶ್ವರ ಜಾತ್ರಾ ಪ್ರಯುಕ್ತ ಕಬ್ಬಡಿ ಪಂದ್ಯಾವಳಿ

ಶಹಾಪುರ: ವಡಿಗೇರಾ ತಾಲೂಕಿನ ಹಯ್ಯಳ ಬಿ ಗ್ರಾಮದಲ್ಲಿ ಹಯ್ಯಳಲಿಂಗೇಶ್ವರ ಜಾತ್ರಾ ಪ್ರಯುಕ್ತ ಗ್ರಾಮದಲ್ಲಿ ಕಬ್ಬಡ್ಡಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿತ್ತು.

ಗ್ರಾಮದ ಎಂಟು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪುರ, ಭೀಮಣ್ಣ ಮೇಟಿ, ಎಸಿ ಕಾಡ್ಲೂರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮೌನೇಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚನ್ನಬಸು ವಕೀಲರು, ವಿನೋದ್ ಪಾಟೀಲ್, ತಮ್ಮಣ್ಣ, ನಿಂಗಣ್ಣ ಪದ್ಮಣ್ಣೂರ್ ಸೇರಿದಂತೆ ಹಲವಾರು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಥಮ ಬಹುಮಾನ ವಿಜೇತ ತಂಡಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ ಪೂಜಾರಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಮಣ್ಣ ನಾಗರಾಳ 21,111 ರೂ.ಮತ್ತು ಮತ್ತು ಕಪ್ಪನ್ನು, ದ್ವಿತೀಯ ವಿಜೇತ ತಂಡಕ್ಕೆ ಡಾ. ಮಹಮ್ಮದ ಯೂಸುಫ ಬೆಳಗೇರಿ 11,111 ರೂ ಮತ್ತು ಕಪ್ಪನ್ನು ಬಹುಮಾನವಾಗಿ ನೀಡಿದರು.ಕಬಡ್ಡಿ ಪಂದ್ಯಾವಳಿಯಲ್ಲಿ ಜಾತ್ರಾ ಭಕ್ತರು ಗ್ರಾಮಸ್ಥರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು.ಮುಖೇಶ ಕಟಿಕಾರ್,ಮಲ್ಲು,ಮಾಳು,ಸುರೇಶ,ಭೀಮು ಆಯೋಜಿಸಿದ್ದರು

 

Leave a Reply

Your email address will not be published. Required fields are marked *