ಕೃಷಿ ಅಧಿಕಾರಿಗಳ ದಾಳಿ 2.15 ಲಕ್ಷ ಮೌಲ್ಯದ ಕೀಟನಾಶಕ ವಶ

ಶಹಾಪುರ: ನಗರದ ಮಡಿವಾಳೇಶ್ವರ ನಗರದಲ್ಲಿ ವ್ಯಕ್ತಿಯೊಬ್ಬನ ಮನೆಯಲ್ಲಿ ಅನಧಿಕೃತವಾಗಿ ಶೇಖರಿಸಿ ಇಟ್ಟುಕೊಂಡ ಎರಡು ಲಕ್ಷಕ್ಕೂ ಅಧಿಕ ಮೌಲ್ಯದ ಕೀಟನಾಶಕಗಳನ್ನು ಕೃಷಿ ಅಧಿಕಾರಿಗಳೊಂದಿಗೆ ಪೊಲೀಸ್ ಇಲಾಖೆಯವರು ದಾಳಿ ಮಾಡಿ ಕೀಟನಾಶಕಗಳನ್ನು ವಶಪಡಿಸಿಕೊಂಡಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿಯು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೊಸೂರು ಗ್ರಾಮದ ಬಾಳಪ್ಪ (45) ಚೆಲುವಾದಿ ಎನ್ನುವನಾಗಿದ್ದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹುಸೇನ್ ಪಾಟೀಲ್ ಎನ್ನುವವರ ಶೆಡ್ಡಿನಲ್ಲಿ ಅಕ್ರಮವಾಗಿ ಕೀಟನಾಶಕ ಮತ್ತು ರಸಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ಎನ್ನುವ ಮಾಹಿತಿ ಪಡೆದ ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆಯ ಪಿಆಯ್.ಶ್ರೀನಿವಾಸ ಅಲ್ಲಾಪುರೆ ಮಾರ್ಗದರ್ಶನದಲ್ಲಿ ಪಿಎಸ್ಐ ಶ್ಯಾಮಸುಂದರ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಶೆಡ್ ನಲ್ಲಿನ ಕೀಟನಾಶಕಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ವಿಚಾರಿಸಿದಾಗ ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದ ಜಟ್ಟಿಲಿಂಗೇಶ್ವರ ಆಗ್ರೋ ಕೇಂದ್ರದಿಂದ ತೆಗೆದುಕೊಂಡು ಮಾರಾಟ ಮಾಡುತ್ತಿರುವುದಾಗಿ ಆರೋಪಿ ತಿಳಿಸಿದ್ದಾನೆ.

 

About The Author