ಶಹಾಪುರ: ತಾಲೂಕಿನ ಶ್ರೀ ಚರಬಸವೇಶ್ವರ ಕಲ್ಯಾಣ ಮಂಟಪ ಗದ್ದುಗೆಯಲ್ಲಿ ಆಗಸ್ಟ್ 8 ರಿಂದ ಆಗಸ್ಟ್ 20 ರವರೆಗೆ 13 ದಿನಗಳ ಕಾಲ ಪೂಜ್ಯ ಶ್ರೀ ಗುರುದತ್ತ ಗುರೂಜಿಯವರಿಂದ ಸಹಜ ಸ್ಥಿತಿ ಯೋಗ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೇಂದ್ರ ಸಂಚಾಲಕರಾದ ವೀರೇಶ್ ಉಳ್ಳಿ ಪ್ರಕಟಣೆಯಲ್ಲಿ ತಿಳಿಸಿದರು.
ಯೋಗ ಶಿಬಿರವು ದಿನಂಪ್ರತಿ ಸಾಯಂಕಾಲ 6:00 ಗಂಟೆ ಯಿಂದ ರಾತ್ರಿ 8.30 ರವರೆಗೆ ನಡೆಯಲಿದೆ ಎಂದು ತಿಳಿಸಿದರು.
Video Player
00:00
00:00
ಪ್ರಾಣಾಯಾಮ ಧ್ಯಾನ ಭಕ್ತಿ ಕರ್ಮಯೋಗಗಳ ಸಮ್ಮಿಶ್ರ ಶಿಬಿರವಾಗಿದ್ದು ಇದೊಂದು ಮಹಾ ಸತ್ಸಂಗವಾಗಿದೆ.ದೀರ್ಘ ಕಾಯಿಲೆಗಳಾದ ಅಸ್ತಮಾ ಮಧುಮೇಹ ರಕ್ತದೊತ್ತಡ ಅರ್ಧ ತಲೆನೋವು ಸಂಧಿವಾತ ಮಾನಸಿಕ ಅಸ್ವಸ್ಥತೆಯಿಂದ ಮುಕ್ತರಾಗುವಿರಿ ಎಂದು ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8197876680