ಧೈರ್ಯವಿದ್ದರೆ ಬಿಜೆಪಿ ಮುಸ್ಲಿಂ ರಾಷ್ಟ್ರಗಳ ಜೊತೆ ವ್ಯಾಪಾರ ನಿಲ್ಲಿಸಲಿ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ಬಿಜೆಪಿ ಪಕ್ಷದ ನೇತೃತ್ವ ಸರಕಾರವಿರುವ ಭಾರತದಲ್ಲಿ ಪದೇ ಪದೇ ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಗೆಲುವಿಗೆ ಮುಸ್ಲಿಮರೇ ಟಾರ್ಗೆಟ್ ಎನ್ನುವ ಹಾಗೆ ವರ್ತಿಸುತ್ತಿದ್ದಾರೆ. ಧೈರ್ಯವಿದ್ದರೆ ಮುಸ್ಲಿಂ ರಾಷ್ಟ್ರಗಳ ಜೊತೆ ವ್ಯಾಪಾರ ನಿಲ್ಲಿಸಲಿ ಎಂದು ಕಾಂಗ್ರೆಸ್ ಪಕ್ಷದ ವಕ್ತಾರರಾದ ಪ್ರಿಯಾಂಕ ಖರ್ಗೆ ಸರಕಾರಧ
ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕೆಪಿಸಿಸಿ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ಪೆಟ್ರೋಲ್ ಮತ್ತು ಡೀಸೆಲ್ ಅರಬ್ ರಾಷ್ಟ್ರಗಳೊಂದಿಗೆ ಭಾರತದ ವ್ಯಾಪಾರ ವಹಿವಾಟು ಮಾಡುತ್ತಿದೆ. ರೇಷ್ಮೆ ಪರಿಚಯಿಸಿದವರು ಟಿಪ್ಪುಸುಲ್ತಾನ್. ಆದರೆ ರೇಷ್ಮೆ ನಿರಾಕರಿಸಲಾಗುತ್ತದೆಯೇ?, ಧರ್ಮದ ಆಧಾರದ ಮೇಲೆ ವ್ಯಾಪಾರ ಮಾಡಲು ಸಾಧ್ಯವೆ ?,ಟಿಪ್ಪುಸುಲ್ತಾನ್ ಲಾಲ್ ಬಾಗ್ ನಿರ್ಮಾಣ ಮಾಡಿದನು ಎಂದು ಲಾಲ್ ಬಾಗ್ ಸುಡಲಾಗುತ್ತದೆಯೇ ?,ಅರಬ್ ರಾಷ್ಟ್ರಗಳು ಕಾಫಿ ಪರಿಚಯಿಸಿದರು ಎಂದು ಕಾಫಿಯನ್ನು ಕುಡಿಯದೆ ಬಿಡಲಾಗುತ್ತದೆಯೇ ಎಂದು ರಾಜ್ಯದಲ್ಲಿರುವ ಬಿಜೆಪಿ ನಾಯಕರಿಗೆ ಪ್ರಶ್ನೆಗಳ ಸುರಿಮಳೆಗೈಯ್ಯುತ್ತಾ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.