ಶಹಾಪೂರ:ತಾಲ್ಲೂಕು ಕುರುಬರ ಸಂಘದ ಸಭೆ

ಶಹಾಪುರ:ಕರ್ನಾಟಕ ಪ್ರದೇಶ ಕುರುಬರ ಸಂಘ,ಕನಕ ನೌಕರರ ಸಂಘ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ವತಿಯಿಂದ
03/07/2022 ರವಿವಾರ ಬೆ. 10:00ಗಂಟೆಗೆ ಶ್ರೀ ಭೀರಲಿಂಗೇಶ್ವರ ಕಲ್ಯಾಣ ಮಂಟಪ ಶಹಾಪೂರದಲ್ಲಿ ಸಮಾಜದ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಡಾ. ಭೀಮಣ್ಣ ಮೇಟಿ ತಿಳಿಸಿದರು.
  SSLC, PUC, ಪದವಿಯಲ್ಲಿ  ಶೇ 90 ಕ್ಕಿಂತ ಹೆಚ್ಚಿನ ಅಂಕಗಳಿಸಿದ  ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವದ ಅದ್ದೂರಿ ಕಾರ್ಯಕ್ರಮ ಸಂಯೋಜಿಸುವ ಕುರಿತು  ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಭಣ್ಣ ರಸ್ತಾಪುರ,
ಹೈಯಾಳಪ್ಪ ಸುರುಪೂರಕರ್,ಅಧ್ಯಕ್ಷರು ಕನಕ ನೌಕರರ ಸಂಘ ಶಹಾಪುರ,ರವಿ ರಾಜಾಪುರ ಅಧ್ಯಕ್ಷರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಶಹಾಪುರ ಉಪಸ್ಥಿತರಿದ್ದರು.