ಶಹಾಪುರ:ಅಗ್ನಿಪತ್ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ:ಮಿಲಿಟರಿ ತರಬೇತಿ ಪಡೆದವರಿಗೆ ಆದ್ಯತೆ ನೀಡಿ,ಹಳೆಯ ಪದ್ಧತಿಯನ್ನೇ ಮುಂದುವರಿಸಿ:ದರ್ಶನಾಪುರ

ಅಗ್ನಿಪತ್ ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಶಾಸಕರಿಂದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ

* ಜಾರಿ ನಿರ್ದೇಶನಾಲಯದಿಂದ ಕಾಂಗ್ರೆಸ್ ಮುಖಂಡರ ಮೇಲೆ ಧಾಳಿ.
* ರೈತರು ಬಡವರ ಪರಿಸ್ಥಿತಿ ದುಸ್ಥರ.
* ಸೈನಿಕ ನೇಮಕಾತಿಯಲ್ಲಿ ಹಳೆಯ ಪದ್ಧತಿಯನ್ನೆ ಮುಂದುವರಿಸಿ.
* ನಿರುದ್ಯೋಗ ಸಮಸ್ಯೆ ಹೆಚ್ಚಳ.
* ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲ.

ಶಹಾಪೂರ:ರಾಜ್ಯ ಮತ್ತು ರಾಷ್ಟ್ರದಲ್ಲಿ ಈಗಾಗಲೇ ಹಲವಾರು ಯುವಕರು ಮಿಲಿಟರಿ ತರಬೇತಿ ಪಡೆದು ಮಿಲಿಟರಿ ಸೇರುವ ತವಕದಲ್ಲಿದ್ದಾರೆ. ಕೆಲಸಕ್ಕಾಗಿ ಎದುರು ನೋಡುತ್ತಿದ್ದಾರೆ.ಹಳೆಯ ಪದ್ಧತಿಯನ್ನೇ ಮುಂದುವರಿಸಿ ಎಂದು ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ಇಂದು ರಾಜ್ಯಾದ್ಯಂತ ಕೇಂದ್ರ ಸರ್ಕಾರ ಮಿಲಿಟರಿ ಆಡಳಿತದಲ್ಲಿ ಹೊಸದಾಗಿ ಜಾರಿಗೆ ತಂದ ಅಗ್ನಿಪತ್ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಅಗ್ನಿಪತ್ ಯೋಜನೆಯಂತೆ ಮಿಲಿಟರಿಗೆ ಸೇರ್ಪಡೆಗೊಂಡು ನಾಲ್ಕು ವರ್ಷದ ನಿವೃತ್ತಿಯ ನಂತರ ಅವರ ಪಾಡೇನು ಎಂದು ಸರಕಾರವನ್ನು ಪ್ರಶ್ನಿಸಿದರು. ದೇಶದಲ್ಲಿ ಯುವಕರ ಜೊತೆ ಬಿಜೆಪಿ ಚೆಲ್ಲಾಟವಾಡುತ್ತಿದೆ.ಬಿಜೆಪಿ ಸರ್ಕಾರ ರಾಷ್ಟ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು.ಇಂದು ಹೇಳುತ್ತಿದ್ದಾರೆ ಹತ್ತು ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಹೇಳುತ್ತಾರೆ. ಬಿಜೆಪಿ ಪಕ್ಷದ ಹೇಳುವುದೊಂದು ಮಾಡುವುದೊಂದು. ರೈತರು ಬೆಳೆದ ಬೆಳೆಗೆ ದುಪ್ಪಟ್ಟು ಬೆಲೆ ಎಂದು ಹೇಳುತ್ತೀರಿ.ಆದರೆ ಬೆಳೆಗೆ ಸರಿಯಾದ ಬೆಂಬಲ ಬೆಲೆ ಕೊಡಲಾಗಿಲ್ಲ. ರಸಗೊಬ್ಬರವನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.ಬಿಜೆಪಿ ಬಂಡವಾಳಶಾಹಿಗಳ ಪಕ್ಷ. ಇಂದು ಅಂಬಾನಿ ಮತ್ತು ಅದಾನಿ ದೇಶದಲ್ಲಿ ನಂಬರ್ ಒನ್ ಶ್ರೀಮಂತರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ರೈತರ ಬಡವರ ಪರವಿತ್ತು ಎಂದು ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಪ್ಪ ಸಲಾದಪುರ ಮಾತನಾಡುತ್ತಾ, ದೇಶದಲ್ಲಿ ಕೂಲಿಗಾರರು ಕಾರ್ಮಿಕರು ರೈತರ ಬದುಕು ದುಸ್ತರವಾಗಿದೆ. ರೈತರು, ಬಡವರಿಗೆ ಮಾರಕವಾದ ಕಾನೂನುಗಳು ಜಾರಿಗೆ ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮರಿಗೌಡ ಹುಲ್ಕಲ್ ರವರು ಮಾತನಾಡುತ್ತಾ, 18 ವರ್ಷಕ್ಕೆ ಪಿಯುಸಿ ಮುಗಿಸಿದ ನಂತರ ವಿದ್ಯಾರ್ಥಿಗಳು ಮುಂದಿನ ನಾಲ್ಕು ವರ್ಷದಲ್ಲಿ ಸೈನಿಕ ಉದ್ಯೋಗಕ್ಕೆ ಸೇರಿ ನಾಲ್ಕು ವರ್ಷದ ನಂತರ ನಿವೃತ್ತಿಯಾಗಿ ಉದ್ಯೋಗ ಸಿಗದೆ ಪರದಾಡುವಂತಹ ಸ್ಥಿತಿ ಅಗ್ನಿಪತ್ ಯೋಜನೆಯಿಂದ ಆಗುತ್ತದೆ. ಈ ಕಾಯ್ದೆ ಯುವಕರ ಭವಿಷ್ಯಕ್ಕೆ ಮುಳ್ಳಾಗಿದೆ. ದೇಶಭಕ್ತಿ, ದೇವರ ಹೆಸರಿನಲ್ಲಿ ಬಿಜೆಪಿ ಪಕ್ಷ ವಿಷಬೀಜ ಬಿತ್ತುತ್ತಿದೆ.ಕೇಂದ್ರ ಸರಕಾರ ಜಾರಿ ನಿರ್ದೇಶನಾಲಯ ( ಈ.ಡಿ)ದ ಮುಖಾಂತರ ಕಾಂಗ್ರೆಸ್ ಪಕ್ಷದವರ ಮೇಲೆ ಧಾಳಿ ಮಾಡಿಸಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು.

ಆರಂಭದಲ್ಲಿ ಚರಬಸವೇಶ್ವರ ಕಮಾನಿನಿಂದ ಬಸವೇಶ್ವರ ವೃತ್ತದ ವರೆಗೆ ಕಾಂಗ್ರೆಸ್ ಪಕ್ಷದ ನಗರ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಘಟಕದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದರು.ಬಸವರಾಜಗೌಡ ಹೆರುಂಡಿ, ಬಸವರಾಜಪ್ಪಗೌಡ ತಂಗಡಗಿ.ಶಿವಮಾಂತಪ್ಪ ಚಂದಾಪುರ ಸಣ್ಣನಿಂಗಣ್ಣ ನಾಯ್ಕೊಡಿ.ಮಹಾದೇವಪ್ಪ ಸಾಲಿಮನಿ ನೀಲಕಂಠ ಬಡಿಗೇರ ತಲಕಚಾಂದ್ ಶಿವುಕುಮಾರ ತಳವಾರ ಮುಖಂಡರಾದ ದೆವಿಂದ್ರಪ್ಪ ಗೊನಾಲ್ ಶರಣಪ್ಪ ಮುಂಡಾಸ್  ಮಲ್ಲಯ್ಯಸ್ವಾಮೀ ಇಟಗಿ ಶರಣು ಇಟಗಿ ಮುನಿಯಪ್ಪ ವಾಲಿ ಕಾಂಗ್ರೆಸ್ ಪಕ್ಷದ ಹಲವಾರು ಮುಖಂಡರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

About The Author